For Quick Alerts
  ALLOW NOTIFICATIONS  
  For Daily Alerts

  ನಟಿ ರಾಗಿಣಿ ದ್ವಿವೇದಿಗೆ ಕೂಡಿಬಂತು ಕಂಕಣ ಭಾಗ್ಯ!

  By ರವಿಕಿಶೋರ್
  |

  ನಟಿ ರಾಗಿಣಿ ದ್ವಿವೇದಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇಷ್ಟು ದಿನ ಅವರು ತುಪ್ಪ ಬೇಕಾ ತುಪ್ಪ ಎಂದು ಚಿತ್ರರಸಿಕರಿಗೆ ಹಬ್ಬದೋಳಿಗೆ ಬಡಿಸಿದ್ದರು. ಇದೀಗ ಹಾರಬದಲಾಯಿಸಿಕೊಂಡಿದ್ದಾರೆ. ಯಾರೊಂದಿಗೆ ಎಂದಿರಾ? ಮುಂದೆ ಓದಿ ನಿಮಗೇ ಗೊತ್ತಾಗುತ್ತದೆ.

  ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಜೊಗೆ ಹಾರ ಬದಲಾಯಿಸಿಕೊಂಡಿದ್ದಾರೆ ರಾಗಿಣಿ ದ್ವಿವೇದಿ. ಆದರಿದು ರಿಯಲ್ ಅಲ್ಲ ರೀಲ್. ತಮ್ಮ ಮುಂದಿನ ಚಿತ್ರ 'ನಮಸ್ತೇ ಮೇಡಂ' ಚಿತ್ರದ ರೊಮ್ಯಾಂಟಿಕ್ ಸ್ಟಿಲ್ಸ್ ಇವು. ತೆಲುಗಿನ ಯಶಸ್ವಿ ಚಿತ್ರ 'ಮಿಸ್ಸಮ್ಮ' ರೀಮೇಕ್ ನಮಸ್ತೇ ಮೇಡಂ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

  ಈ ಚಿತ್ರವನ್ನು ನಿರ್ಮಿಸುತ್ತಿರುವವರು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ರವಿ ಗರಣಿ. ಈ ಹಿಂದೆ ಅವರು 'ಶುಭಂ' ಎಂಬ ಚಿತ್ರ ಮಾಡಿದ್ದರು. ಕಿರುತೆರೆಯಲ್ಲಿ ಸಖತ್ ಬಿಜಿ ಇರುವ ರವಿ ಅವರು ಬಿಡುವು ಮಾಡಿಕೊಂಡು ನಮಸ್ತೇ ಮೇಡಂ ನಿರ್ಮಿಸುತ್ತಿದ್ದಾರೆ. ಬನ್ನಿ ನೋಡೋಣ ಕಿಟ್ಟಿ ಹಾಗೂ ರಾಗಿಣಿ ದ್ವಿವೇದಿ ಅವರ ನಮಸ್ತೇ ಮೇಡಂ ಚಿತ್ರದ ಮದುವೆ ಫೋಟೋಗಳನ್ನು...

  ಆಕ್ಷನ್ ಕಟ್ ಹೇಳುತ್ತಿರುವವರು ರಘುರಾಮ್

  ಆಕ್ಷನ್ ಕಟ್ ಹೇಳುತ್ತಿರುವವರು ರಘುರಾಮ್

  ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರಘುರಾಮ್. ಇನ್ನು ರವಿ ಗರಣಿ ಅವರು ಸುವರ್ಣ ವಾಹಿನಿಯಲ್ಲಿ ಅಮೃತ ವರ್ಷಿಣಿ, ಅರಗಿಣಿ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.

  ಸಂತೋಷ್ ರೈ ಪತಾಜೆ ಕ್ಯಾಮೆರಾ, ಶ್ರೀಧರ್ ಸಂಗೀತ

  ಸಂತೋಷ್ ರೈ ಪತಾಜೆ ಕ್ಯಾಮೆರಾ, ಶ್ರೀಧರ್ ಸಂಗೀತ

  ಸಂತೋಷ್‌ ರೈ ಪಾತಾಜೆ, ಈ ಚಿತ್ರದ ಮೂಲಕ ಮತ್ತೆ ಛಾಯಾಗ್ರಾಹಕರಾಗಿ ವಾಪಸ್ಸಾಗುತ್ತಿದ್ದಾರೆ. ಶ್ರೀಧರ್‌ ಸಂಭ್ರಮ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಮೂಲ ಚಿತ್ರದಲ್ಲಿ ಭೂಮಿಕಾ ಚಾವ್ಲಾ, ಶಿವಾಜಿ ಹಾಗೂ ಲಯಾ ಪೋಷಿಸಿದ್ದರು.

  ಈ ಚಿತ್ರದ ಕಥೆ ಏನೆಂದರೆ...

  ಈ ಚಿತ್ರದ ಕಥೆ ಏನೆಂದರೆ...

  ಈ ಚಿತ್ರದ ಕಥೆ ಏನೆಂದರೆ ಕಾರ್ಪೊರೇಟ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲದ ಮಾಡುತ್ತಿರುವ ಚಿತ್ರದ ನಾಯಕ ನಟನಿಗೆ ಮದುವೆಯಾಗಿ ಮಗು ಇರುತ್ತದೆ. ತನ್ನ ಪತ್ನಿ ಮಗು ಜೊತೆ ಸುಖಿ ಸಂಸಾರ ಜೀವನ ನಡೆಸುತ್ತಿರುತ್ತಾನೆ. ನೈತಿಕತೆಗೆ ಬಹಳ ಬೆಲೆ ಕೊಡುವ ನಾಯಕ ಜವಾಬ್ದಾರಿಯುತ ಪ್ರಜೆಯಾಗಿಯೂ ಇರುತ್ತಾನೆ.

  ಮತ್ತೊಬ್ಬ ಹೆಣ್ಣಿನ ಪ್ರವೇಶದ ಮೂಲಕ ಹೊಸ ತಿರುವು

  ಮತ್ತೊಬ್ಬ ಹೆಣ್ಣಿನ ಪ್ರವೇಶದ ಮೂಲಕ ಹೊಸ ತಿರುವು

  ಅವನ ಬಾಳಿನಲ್ಲಿ ಮತ್ತೊಬ್ಬ ಹೆಣ್ಣಿನ ಪ್ರವೇಶವಾಗುತ್ತದೆ. ಅವಳೇ ಕಂಪನಿ ಎಂ.ಡಿ ಮಗಳು. ಇವನ ನೈತಿಕತೆಯನ್ನು ಪರೀಕ್ಷಿಸಲು ಸಾಕಷ್ಟು ಪರೀಕ್ಷೆಗಳನ್ನು ಇಡುತ್ತಾಳೆ ಅದರಲ್ಲಿ ನಾಯಕ ನಟ ಗೆಲ್ಲುತ್ತಾನಾ ಇಲ್ಲವೇ ಎಂಬುದೇ ಚಿತ್ರದ ಕಥೆ.

  ರಘುರಾಮ್ ನಮಸ್ತೇ ಚಿತ್ರದ ಮೂಲಕ ವಾಪಸ್

  ರಘುರಾಮ್ ನಮಸ್ತೇ ಚಿತ್ರದ ಮೂಲಕ ವಾಪಸ್

  ಈ ಹಿಂದೆ ದರ್ಶನ್‌ ಅಭಿನಯದ 'ಬಾಸ್‌' ಮತ್ತು ರಂಗಾಯಣ ರಘು ಅಭಿನಯದ 'ರಾಮರಾಮ ರಘುರಾಮ' ಚಿತ್ರಗಳನ್ನು ನಿರ್ದೇಶಿಸಿದ್ದರು. ಆಯೇಷಾ ಅಭಿನಯದ 'ಸಿಡಿಲ ಮರಿ' ಸಹ ಅವರದೇ ನಿರ್ದೇಶನದ ಚಿತ್ರ. ಈಗ ರಘುರಾಮ್‌ 'ನಮಸ್ತೇ ಮೇಡಂ' ಚಿತ್ರದ ಮೂಲಕ ಮತ್ತೆ ವಾಪಸ್ಸಾಗುತ್ತಿದ್ದಾರೆ.

  English summary
  Bangalore lass Ragini Dwivedi has entered wedlock with Diamond Star Srinagara Kitty! Don't be surprised the duo will be seen as husband and wife in Sandalwood's forthcoming movie Namasthe Madam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X