»   » ಸಲ್ಮಾನ್ ಖಾನ್ ರನ್ನು ಇಷ್ಟಪಟ್ಟ ಶಾರುಖ್ ಮಗಳು!

ಸಲ್ಮಾನ್ ಖಾನ್ ರನ್ನು ಇಷ್ಟಪಟ್ಟ ಶಾರುಖ್ ಮಗಳು!

Posted By:
Subscribe to Filmibeat Kannada

ಬಾಲಿವುಡ್ ಖಾನ್ ತ್ರಯರಲ್ಲಿ ಅಮೀರ್ ಖಾನ್ ಅವರನ್ನು ಪಕ್ಕಕ್ಕೆ ಸರಿಸಿದರೆ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ನಡುವೆ ತೀವ್ರ ಪೈಪೋಟಿ ಇದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಷ್ಟಕ್ಕಷ್ಟೆ. ಆದರೂ ಶಾರುಖ್ ಖಾನ್ ಮಗಳು ಸಲ್ಲುರನ್ನು ಇಷ್ಟಪಟ್ಟಿದ್ದಾರೆ!

ಆದರೆ ಈಕೆ ಶಾರುಖ್ ಅವರ ನಿಜವಾದ ಮಗಳಲ್ಲ. ತೆರೆಯ ಮೇಲಿನ ಕುಚ್ ಕುಚ್ ಮಗಳು! 'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿ ಶಾರುಖ್ ಗೆ ಮಗಳಾಗಿ ಅಭಿನಯಿಸಿದ್ದರು. ಅದಾದ 14 ವರ್ಷಗಳ ಬಳಿಕ ಈಗ ಗ್ಲಾಮರಸ್ ಆಗಿ, ಸೆಕ್ಸಿ ಲುಕ್ ನೊಂದಿಗೆ ಬೆಳ್ಳಿತೆರೆ ಬೆಳಗಲು ಬಂದಿದ್ದಾರೆ.

'ಕುಚ್ ಕುಚ್ ಹೋತಾ ಹೈ' ಚಿತ್ರದಲ್ಲಿ ಶಾರುಖ್ ಜೊತೆ ಅಭಿನಯಿಸಿದ್ದ ಈಕೆಯ ಹೆಸರು ಅಂಜಲಿ ಅಲಿಯಾಸ್ ಸನಾ ಸಯೀದ್. ಇನ್ನೂ 24ರ ಪ್ರಾಯ. ಇತ್ತೀಚೆಗೆ ತೆರೆಕಂಡ ಕರಣ್ ಜೋಹರ್ ಅಭಿನಯದ 'ಸ್ಟುಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು.

ಇತ್ತೀಚೆಗೆ ಆಕೆ ಮಾತನಾಡುತ್ತಾ, "ತನಗೆ ಮತ್ತೊಮ್ಮೆ ಶಾರುಖ್ ಹಾಗೂ ಸಲ್ಲು ಜೊತೆ ಅಭಿನಯಿಸುವ ಬಯಕೆಯಾಗಿದೆ. ಒಂದು ವೇಳೆ ಅವಕಾಶ ಸಿಕ್ಕಿದರೆ ಖಂಡಿತ ಬಿಡಲ್ಲ. ನನ್ನ ಚೊಚ್ಚಲ ಚಿತ್ರ 'ಕುಚ್ ಕುಚ್ ಹೋತಾ ಹೈ'ನಲ್ಲಿ ಈ ಇಬ್ಬರು ಸೂಪರ್ ಸ್ಟಾರ್ ಗಳೊಂದಿಗೆ ಅಭಿನಯಿಸುವ ಚಾನ್ಸ್ ಸಿಕ್ಕಿದ್ದು ನನ್ನ ಪಾಲಿಗೆ ಒಲಿದ ಅದೃಷ್ಟ" ಎಂದಿದ್ದಾರೆ.

1998ರಲ್ಲಿ ತೆರೆಕಂಡ 'ಕುಚ್ ಕುಚ್ ಹೋತಾ ಹೈ' ಚಿತ್ರ ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಚಿತ್ರದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಕಾಜೋಲ್, ರಾಣಿ ಮುಖರ್ಜಿ ಪ್ರಮುಖ ಪಾತ್ರಗಳನ್ನು ಪೋಷಿಸಿದ್ದರು. ಚಿತ್ರದಲ್ಲಿ ಶಾರುಖ್ ಹಾಗೂ ರಾಣಿ ಮುಖರ್ಜಿ ಅವರ ಮಗಳಾಗಿ ಸನಾ ಸಯೀದ್ ಅಭಿನಯಿಸಿದ್ದರು. ಈಗ ಮತ್ತೊಮ್ಮೆ ಸಲ್ಲು ಜೊತೆ ಅಭಿನಯಿಸಬೇಕೆಂಬ ತಮ್ಮ ಮನದಾಳದ ಬಯಕೆಯನ್ನು ಹೊರಹಾಕಿದ್ದಾರೆ. (ಏಜೆನ್ಸೀಸ್)

English summary
Superstar Shahrukh Khan's 8 year old daughter (Kuch Kuch Hota Hai) is a big girl now. She's back in a glamorous, hot avatar after 14 long years. Well, don't get confused. We are talking about Shahrukh's onscreen daughter Anjali aka Sana Saeed from Kuch Kuch Hota Hai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada