For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನಂತರ ದುಬಾರಿ ಕಾರು ಖರೀದಿಸಿದ್ರಾ ಸೃಜನ್ ಲೋಕೇಶ್.?

  By Bharath Kumar
  |

  ಸ್ಯಾಂಡಲ್ ವುಡ್ ನಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲಂಬೋರ್ಗಿನಿ ಕಾರ್ ಬಗ್ಗೆನೇ ಸುದ್ದಿ. ದುಬಾರಿ ಕಾರ್ ಖರೀದಿಸಿದ ದಾಸ, ಮೈಸೂರು ರಸ್ತೆಯಲ್ಲಿ ಸಾವರಿ ಮಾಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಪೂಜೆ ಕೂಡ ಮಾಡಿಸಿದ್ದಾರೆ.

  ಹೀಗೆ, ದರ್ಶನ್ ಅವರ ಹೊಸ ಕಾರಿನ ಹವಾ ಇನ್ನು ಕಮ್ಮಿಯಾಗಿಲ್ಲ. ಅಷ್ಟರಲ್ಲೇ ಮತ್ತೊಬ್ಬ ಸ್ಟಾರ್ ನಟ ಹೊಸ ಕಾರು ಖರೀದಿಸಿದ್ದಾರೆ ಎನ್ನಲಾಗಿದೆ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಗೆಳೆಯ ಸೃಜನ್ ಲೋಕೇಶ್ ಹೊಸ ಕಾರನ್ನ ಖರೀದಿಸಿದ್ದಾರಂತೆ.

  ಇತ್ತೀಚೆಗಷ್ಟೇ ದರ್ಶನ್ ಮನೆಗೆ ಬಂದಿದ್ದ ಸೃಜನ್ ಲೋಕೇಶ್ ಅದೇ ಕಾರಿನಲ್ಲಿ ಬಂದಿದ್ದರು ಎಂಬ ಸುದ್ದಿ ವರದಿಯಾಗಿದೆ. ಹಾಗಿದ್ರೆ, ಟಾಕಿಂಗ್ ಸ್ಟಾರ್ ಕೊಂಡುಕೊಂಡಿರುವ ಹೊಸ ಕಾರು ಯಾವುದು? ಎಂದು ತಿಳಿದುಕೊಳ್ಳಲು ಮುಂದೆ ಓದಿ.....

  ಸೃಜನ್ ಮನೆಗೆ ಬಂತು ಹೊಸ ಕಾರ್

  ಸೃಜನ್ ಮನೆಗೆ ಬಂತು ಹೊಸ ಕಾರ್

  ಕರುನಾಡ ಕಲಾಭೂಷಣ ದರ್ಶನ್ ಇತ್ತೀಚೆಗಷ್ಟೇ ಬಿಳಿ ಬಣ್ಣದ ಲಂಬೋರ್ಗಿನಿ ಕಾರು ಖರೀದಿಸಿದ್ದರು. ಈ ವೇಳೆ, ದರ್ಶನ್ ಅವರ ಮನೆಗೆ ಭೇಟಿ ನೀಡಿದ್ದ ಸೃಜನ್ ತಮ್ಮ ಹೊಸ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.

  ಆಡಿ ಕಾರ್

  ಆಡಿ ಕಾರ್

  ಸೃಜನ್ ಲೋಕೇಶ್ ಅವರ ಖರೀದಿಸಿರುವ ಕಾರು ಕೆಂಪು ಬಣ್ಣದ ಆಡಿ ಕಾರ್. ಈ ಕಾರಿನಲ್ಲಿ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಬಹುಶಃ ಇನ್ನು ರಿಜಿಸ್ಟರ್ ಆಗದೇ ಇರಬಹುದು.

  ಖಚಿತ ಮಾಹಿತಿ ಇಲ್ಲ

  ಖಚಿತ ಮಾಹಿತಿ ಇಲ್ಲ

  ಸೃಜನ್ ಹೊಸ ಕಾರು ಖರೀದಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದ್ರೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಇಂತಹದೊಂದು ಸುದ್ದಿಗೆ ಕಾರಣವಾಗಿದೆ.

  ಇಂಡಸ್ಟ್ರಿಯಲ್ಲಿ ಕಾರ್ ಪ್ರಿಯರು

  ಇಂಡಸ್ಟ್ರಿಯಲ್ಲಿ ಕಾರ್ ಪ್ರಿಯರು

  ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹಲವು ತಾರೆಯರು ನೂತನ ಕಾರ್ ಗಳನ್ನ ಖರೀದಿಸಿದ್ದರು. ಹರಿಪ್ರಿಯಾ, ಯಶ್, ಚೇತನ್ ಚಂದ್ರ, ಸಂಗೀತಾ ಭಟ್, ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವರು ಹೊಸ ಹೊಸ ಕಾರು ಕೊಂಡುಕೊಂಡಿದ್ದರು. ಈಗ ಸೃಜನ್ ಲೋಕೇಶ್ ಕೂಡ ಇದೇ ಸಾಲಿಗೆ ಸೇರಿದ್ದಾರೆ ಎನ್ನಲಾಗಿದೆ.

  English summary
  After Darshan, Talking Star Srujan Lokesh buys a new Audi car. Recently Darshan had bought a white colour lamborghini car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X