For Quick Alerts
  ALLOW NOTIFICATIONS  
  For Daily Alerts

  'ಮಜಾ ಟಾಕೀಸ್' ಮುಚ್ಚಿದ ನಂತರ ಸೃಜನ್ ಮುಂದಿನ ಪ್ಲಾನ್ ಏನು?

  By Bharath Kumar
  |

  ನಟ ಸೃಜನ್ ಲೋಕೇಶ್ ಸಾರಥ್ಯದ ಜನಪ್ರಿಯ ಟಾಕ್ ಶೋ 'ಮಜಾ ಟಾಕೀಸ್' ಕಾರ್ಯಕ್ರಮವನ್ನ ಅಂತ್ಯಗೊಳಿಸುವುದಾಗಿ ಸ್ವತಃ ಸೃಜನ್ ಅವರೇ ಸ್ಪಷ್ಟಪಡಿಸಿದ್ದರು.

  ಅಕ್ಟೋಬರ್ 21 ರಂದು 'ಮಜಾ ಟಾಕೀಸ್' ಗ್ರ್ಯಾಂಡ್ ಫಿನಾಲೆ ಶೋ ಪ್ರಸಾರವಾಗಲಿದ್ದು, ತದ ನಂತರ ಸೃಜನ್ ಕಿರುತೆರೆಗೆ ಗುಡ್ ಬೈ ಹೇಳಲಿದ್ದಾರೆ.

  ಆದ್ರೆ, 'ಮಜಾ ಟಾಕೀಸ್' ನಂತರ ಸೃಜನ್ ಲೋಕೇಶ್ ಅವರು ಮುಂದಿನ ಹಾದಿ ಯಾವುದು? ಏನು ಮಾಡ್ತಾರೆ? ಏನೆಲ್ಲಾ ಯೋಜನೆಗಳನ್ನ ಹಾಕಿಕೊಂಡಿದ್ದಾರೆ ಎಂದು ಮುಂದೆ ಓದಿ.....

  ಚಿತ್ರರಂಗದಲ್ಲಿ ಸಕ್ರಿಯ

  ಚಿತ್ರರಂಗದಲ್ಲಿ ಸಕ್ರಿಯ

  'ಮಜಾ ಟಾಕೀಸ್' ನಂತರ ಸೃಜನ್ ಲೋಕೇಶ್ ಸಿನಿಮಾ ಜಗತ್ತಿನಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಲಿದ್ದಾರೆ. ಹೆಚ್ಚು ಹೆಚ್ಚು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.

  ನಗುವಿನ ಟಾಕೀಸ್ ಆಗಿದ್ದ 'ಮಜಾ ಟಾಕೀಸ್' ಮುಚ್ಚಿದ ಸೃಜನ್ ಲೋಕೇಶ್!

  ತಮ್ಮ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ

  ತಮ್ಮ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ

  ಇಷ್ಟು ದಿನ ಕಿರುತೆರೆ ಶೋಗಳನ್ನ ನಿರ್ಮಾಣ ಮಾಡುತ್ತಿದ್ದ ಲೋಕೇಶ್ ಪ್ರೊಡಕ್ಷನ್ ಹೌಸ್ ಈಗ ತಮ್ಮದೇ ಬ್ಯಾನರ್ ನಲ್ಲಿ ಸಿನಿಮಾ ಮಾಡಲು ನಿರ್ಧರಿಸಿದೆ. ಈ ಚಿತ್ರದಲ್ಲಿ ಸೃಜನ್ ನಾಯಕನಾಗಿ ಅಭಿನಯಸಲಿದ್ದು, 'ಮಜಾ ಟಾಕೀಸ್' ನಿರ್ದೇಶಕ ತೇಜಸ್ವಿ ಆಕ್ಷನ್ ಕಟ್ ಹೇಳಲಿದ್ದಾರೆ.

  ಕೊನೆಗೂ ಈ ನಟ-ನಟಿಯರು 'ಮಜಾ ಟಾಕೀಸ್' ಮೆಟ್ಟಿಲು ಹತ್ತಲೇ ಇಲ್ಲ

  ಇಂದ್ರಜಿತ್ ಜೊತೆಯಲ್ಲೊಂದು ಚಿತ್ರ

  ಇಂದ್ರಜಿತ್ ಜೊತೆಯಲ್ಲೊಂದು ಚಿತ್ರ

  ಇನ್ನು 'ಮಜಾ ಟಾಕೀಸ್' ಖ್ಯಾತಿಯ ಇಂದ್ರಜಿತ್ ಲಂಕೇಶ್ ಅವರು ಕೂಡ ಸೃಜನ್ ಲೋಕೇಶ್ ಅವರ ಜೊತೆ ಒಂದು ಸಿನಿಮಾ ಮಾಡಲು ಚಿಂತಿಸಿದ್ದಾರೆ. ಈ ಚಿತ್ರ ಕೂಡ ಸೃಜನ್ ಅವರ ಬ್ಯಾನರ್ ನಲ್ಲೇ ಮೂಡಿ ಬರುವ ಸಾಧ್ಯತೆ ಇದೆ.

  ಕಿರುತೆರೆಗೆ ಸೃಜನ್ ಮತ್ತೆ ಬರಲ್ವಾ.?

  ಕಿರುತೆರೆಗೆ ಸೃಜನ್ ಮತ್ತೆ ಬರಲ್ವಾ.?

  ಮಜಾ ಟಾಕೀಸ್ ಮುಗಿಸಿ, ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದೇನೆ ಎಂದು ಹೇಳಿರುವ ಸೃಜನ್ ಮತ್ತೆ ಕಿರುತೆರೆಗೆ ಬರಲ್ವಾ ಎಂಬ ಪ್ರಶ್ನೆ ಕಾಡುವುದು ಸಹಜ. ಆದ್ರೆ, ಮತ್ತೆ ಬಂದೇ ಬರ್ತೀನಿ ಎಂದು ಸೃಜನ್ ಸ್ಪಷ್ಟಪಡಿಸಿದ್ದಾರೆ.

  ''ಮತ್ತೆ ನಿಮ್ಮ ಮುಂದೆ ಬಂದೇ ಬರುತ್ತೇವೆ'' ಎಂದ ನಟ ಸೃಜನ್ ಲೋಕೇಶ್

  ನವೆಂಬರ್ ನಲ್ಲೊಂದು ಚಿತ್ರ ಅರಂಭ

  ನವೆಂಬರ್ ನಲ್ಲೊಂದು ಚಿತ್ರ ಅರಂಭ

  ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಸೃಜನ್ ಲೋಕೇಶ್ ಅವರು, ಲವ್, ಕಾಮಿಡಿ, ಫ್ಯಾಮಿಲಿ ಕಥೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ, ಈಗೊಂದು ವಿಭಿನ್ನ ಕಥೆಯೊಂದಿಗೆ ಮತ್ತೆ ಬರಲಿದ್ದು, ನವೆಂಬರ್ ಅಂತ್ಯದಲ್ಲಿ ಈ ಸಿನಿಮಾ ಶುರು ಮಾಡಲಿದ್ದಾರಂತೆ.

  English summary
  Kannada Actor Srujan Lokesh will Producing New Movie In His Own Production House

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X