»   » ನಟಿ ಶ್ರುತಿ ಮನೆಯಲ್ಲಿ ರಾತ್ರಿ ತಂಗಿದ್ದ ನಟನ್ಯಾರು?

ನಟಿ ಶ್ರುತಿ ಮನೆಯಲ್ಲಿ ರಾತ್ರಿ ತಂಗಿದ್ದ ನಟನ್ಯಾರು?

By: ರವಿಕಿಶೋರ್
Subscribe to Filmibeat Kannada

ನಟಿ ಶ್ರುತಿ ಹಾಸನ್ ಮೇಲಿನ ದಾಳಿ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಹೊಸ ಎಪಿಸೋಡ್ ನಲ್ಲಿ ಎರಡು ಹೊಸ ಪಾತ್ರಗಳು ಇಣುಕಿವೆ. ಅಪರಿಚಿತನೊಬ್ಬ ಶ್ರುತಿ ಹಾಸನ್ ಮೇಲೆ ದಾಳಿ ಮಾಡಿದ್ದು, ತಪ್ಪಿಸಿಕೊಂಡದ್ದು, ಬಳಿಕ ಪೊಲೀಸರ ಅತಿಥಿಯಾಗಿದ್ದು ಗೊತ್ತೇ ಇದೆ.

ಇದರ ಹಿಂದೆ ಬಾಲಿವುಡ್ ನ ಬೊಂಬಾಟ್ ನಟಿಯೊಬ್ಬಳ ಕೈವಾಡ ಇದೆ ಎಂಬ ಸುದ್ದಿ ಇದೀಗ ಫಿಲಂಸಿಟಿಯಲ್ಲಿ ಹರಿದಾಡುತ್ತಿದೆ. ಆ ನಟಿ ಬೇರಾರು ಅಲ್ಲ. ಇತ್ತೀಚೆಗಷ್ಟೇ 'ಖಾನ್' ಒಬ್ಬರನ್ನು ವರಿಸಿದವರು. ಬಹಳ ಸುದೀರ್ಘ ಸಮಯ ಲಿವ್ ಇನ್ ಸಂಬಂಧ ಇಟ್ಟುಕೊಂಡು ಮದುವೆಯಾದವರು.

A stalker's attack on actress Shruti Haasan takes new turn

ಅದೆಲ್ಲಾ ಸರಿ ಶ್ರುತಿ ಹಾಸನ್ ಮೇಲೆ ಆಕೆಗೆ ಯಾಕೆ ದ್ವೇಷ ಎಂದು ತಲೆಕೆಡಿಸಿಕೊಂಡವರಿಗೆ ಒಂದು ಮಜಬೂತಾದ ಉತ್ತರವೂ ಸಿಕ್ಕಿದೆ. ಅದೇನೆಂದರೆ ಈ ಛೋಟಾ ಖಾನ್ ಸಾಹೇಬರು ದಾಳಿ ನಡೆದ ರಾತ್ರಿ ಶ್ರುತಿ ಹಾಸನ್ ಮನೆಯಲ್ಲೇ ತಂಗಿದ್ದರಂತೆ. ಮುಂದಿನ ಊಹೆ ನಿಮಗೇ ಬಿಟ್ಟದ್ದು.

[ಶ್ರುತಿ ಹಾಸನ್ ಬಗ್ಗೆ ಮೌನ ಮುರಿದ ತಾಯಿ ಸಾರಿಕಾ]

ಇತ್ತೀಚೆಗೆ ಅವರ ಮನೆಯಲ್ಲೇ ಹೆಚ್ಚಾಗಿ ಉಳಿಯುತ್ತಿರುವ ಖಾನ್ ಸಾಹೇಬರ ವ್ಯವಹಾರನ್ನು ಬಯಲಿಗೆಳೆಯಲು ಕಪೂರ್ ಖಾಂದಾನಿನ ಬೆಡಗಿ ಬಿಟ್ಟ ಅಸ್ತ್ರವೇ ಈ ಆಸಾಮಿ ಎನ್ನಲಾಗಿದೆ. ಆದರೆ ವ್ಯವಹಾರ ಬಯಲಾದರೆ 'ಖಾನ್'ದಾನ್ ನಲ್ಲಿ ಇನ್ನೇನು ರಾದ್ಧಾಂತವಾಗುತ್ತದೋ ಎಂದು ಭಯಪಟ್ಟ ನವಾಬರು ಕಥೆಗೆ ದಾಳಿಯ ಟ್ವಿಸ್ಟ್ ಕೊಟ್ಟಿದ್ದಾರಷ್ಟೇ ಎನ್ನುತ್ತವೆ ಮೂಲಗಳು.

ಇಷ್ಟಕ್ಕೂ ಶ್ರುತಿ ಮೇಲೆ ದಾಳಿ ಮಾಡಿದಾತನನ್ನು ಅಶೋಕ್ ಶಂಕರ್ ತ್ರಿಮುಖೇ (45) ಎಂದು ಗುರುತಿಸಲಾಗಿದೆ. ಫಿಲಂ ಸಿಟಿಯಲ್ಲಿ ಸ್ಪಾಟ್ ಬಾಯ್ ಆಗಿ ಬಂಧಿತ ಆರೋಪಿ ಕೆಲಸ ಮಾಡುತ್ತಿದ್ದ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ.

ತನ್ನ ಸಹೋದರನಿಗೆ ಉದ್ಯೋಗ ಕೊಡಿಸುವ ಸಲುವಾಗಿ ಶ್ರುತಿ ಹಾಸನ್ ಮನೆಗೆ ಹೋಗಿದ್ದೆ. ತಾನು ಅವರಿಗೆ ಈ ವಿಷಯ ಹೇಳಲು ಪ್ರಯತ್ನಿಸುತ್ತಿದ್ದಂತೆ ಅವರು ರಫ್ ಎಂದು ಡೋರ್ ಹಾಕಿದರು. ಅಷ್ಟೇ ಹೊರತು ಅವರನ್ನು ಬೆದರಿಸಬೇಕೆಂಬ ಉದ್ದೇಶ ತಮಗಿರಲಿಲ್ಲ ಎಂದು ಪೊಲೀಸರಿಗೆ ಆತ ಹೇಳಿಕೊಂಡಿದ್ದಾನೆ. ಆದರೆ ಕಥೆ ಈಗ ಟ್ರ್ಯಾಕ್ ಗೆ ಬಂದಿರುವುದು ಆತನಿಗೆ ಇನ್ನೂ ಗೊತ್ತಗಿಲ್ಲವೋ ಏನೋ.

English summary
A stalker's attack on actress Shruti Haasan at her Bandra residence in Mumbai has created quite stir in the media, but her Superstar father Kamal Hassan and actress-mother Sarika kept mum on this issue, which had surprised many in the industry.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada