»   » 'ಬಾಹುಬಲಿ-2' ಕಲೆಕ್ಷನ್: ಬಾಕ್ಸ್ ಆಫೀಸ್ ನಲ್ಲಿ ಹೊಸ 'ಮೌಳಿ'ಗಲ್ಲು.!

'ಬಾಹುಬಲಿ-2' ಕಲೆಕ್ಷನ್: ಬಾಕ್ಸ್ ಆಫೀಸ್ ನಲ್ಲಿ ಹೊಸ 'ಮೌಳಿ'ಗಲ್ಲು.!

By: ಫಿಲ್ಮಿಬೀಟ್ ಪ್ರತಿನಿಧಿ
Subscribe to Filmibeat Kannada

ದೇಶಾದ್ಯಂತ 'ಬಾಹುಬಲಿ-2' ಅಬ್ಬರ, ಆರ್ಭಟ ಜೋರಾಗಿದೆ. ಕನ್ನಡಿಗರನ್ನ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ಕ್ಷಮೆ ಕೇಳಿದ್ದೇ ತಡ, ಕರ್ನಾಟಕದಲ್ಲೂ 'ಬಾಹುಬಲಿ-2' ಕ್ರೇಜ್ ಶುರುವಾಗಿದೆ. ಇದರಿಂದ ಟಿಕೆಟ್ ಬೆಲೆಯಂತೂ ಗಗನಕ್ಕೇರಿದೆ. ಯಾವಾಗ ಇಳಿಮುಖವಾಗುತ್ತದೋ.. ದೇವರೇ ಬಲ್ಲ.!

ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳ ಟಿಕೆಟ್ ದರಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ಇದು 'ಬಾಹುಬಲಿ-2' ಚಿತ್ರಕ್ಕೆ ದೊಡ್ಡ ಲಾಭ ಮಾಡಿಕೊಡುತ್ತಿರುವುದರಲ್ಲಿ ಡೌಟೇ ಬೇಡ. ಒಂದು ದಿನ ಮುಂಚಿತವಾಗಿಯೇ ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ 'ಬಾಹುಬಲಿ-2' ಪ್ರದರ್ಶನ ಆರಂಭವಾಯ್ತು.[ಪರಾಕ್ರಮ ಮೆರೆದ 'ಬಾಹುಬಲಿ', ರಾಜಮೌಳಿ 'ಕಲ್ಪನೆ'ಗೆ ಮಿತಿಯಿಲ್ಲ]

ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ 'ಬಾಹುಬಲಿ-2' ಚಿತ್ರ ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎಲ್ಲೆಲ್ಲೂ 'ಬಾಹುಬಲಿ' ಬೊಂಬಡ ಇರುವುದರಿಂದ, ಮೊದಲ ದಿನ 'ಬಾಹುಬಲಿ-2' ಮಾಡಿರುವ ಕಲೆಕ್ಷನ್ ಎಷ್ಟು ಅಂತ ಕೇಳಿದ್ರೆ ನೀವು ಖಂಡಿತ ಶಾಕ್ ಆಗದೇ ಇರುವುದಿಲ್ಲ.!

'ಬಾಹುಬಲಿ-2' ಮೊದಲ ದಿನದ ಕಲೆಕ್ಷನ್ ಎಷ್ಟು.?

ಒಂದು ಅಂದಾಜಿನ ಪ್ರಕಾರ, ಮೊದಲ ದಿನ 'ಬಾಹುಬಲಿ-2' ಚಿತ್ರದ ಕಲೆಕ್ಷನ್ ಹತ್ತತ್ರ ನೂರು ಕೋಟಿ.! ['ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!]

ಮೊದಲ ಶೋಗಳು ಹೌಸ್ ಫುಲ್

'ಬಾಹುಬಲಿ-2' ಸಿನಿಮಾ ಒಂದು ದಿನ ಮುಂಚಿತವಾಗಿಯೇ.. ಅಂದ್ರೆ ಗುರುವಾರ ರಾತ್ರಿಯೇ ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ತೆರೆಕಂಡಿತ್ತು. ಇನ್ನೂ ಹಲವೆಡೆ ಶುಕ್ರವಾರ ಬೆಳಗಿನ ಜಾವ ಐದು ಗಂಟೆಗೆ ಪ್ರದರ್ಶನ ಆರಂಭವಾಯ್ತು. ಬೆಂಗಳೂರಿನ ಎಲ್ಲ ಥಿಯೇಟರ್ ಗಳು ಸೇರಿ 102 ಶೋಗಳು ಹೌಸ್ ಫುಲ್ ಆಗಿತ್ತು. ಬೆಂಗಳೂರಿನಲ್ಲಂತೂ 500 ರಿಂದ 1400 ರೂ ತನಕ ಟಿಕೆಟ್ ಸೇಲ್ ಆಗಿತ್ತು. ಹೀಗಾಗಿ ಚಿತ್ರದ ಕಲೆಕ್ಷನ್ ಸಹಜವಾಗಿ ಜಾಸ್ತಿ ಆಗಿದೆ. ['ಬಾಹುಬಲಿ'ಗಿಂತ ರಾಜಮೌಳಿಗೆ ಭೇಷ್ ಎನ್ನುತ್ತಿರುವ ವಿಮರ್ಶಕರು.!]

ಹೊಸ ದಾಖಲೆ

'ಬಾಹುಬಲಿ-2' ಚಿತ್ರದ ಮೊದಲ ದಿನದ ಕಲೆಕ್ಷನ್ ನೂರು ಕೋಟಿ ಅಗಿದ್ರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇದು ಹೊಸ ದಾಖಲೆ ಆದ್ಹಾಗೆ.

ಬುಕ್ಕಿಂಗ್ ನಲ್ಲೂ ದಾಖಲೆ

ವಿಶ್ವದಾದ್ಯಂತ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದ 'ಬಾಹುಬಲಿ-2' ಟಿಕೆಟ್ ಬುಕ್ಕಿಂಗ್ ನಲ್ಲೂ ದಾಖಲೆ ಬರೆದಿದೆ. ಕೇವಲ 24 ಗಂಟೆಗಳಲ್ಲಿ 10 ಲಕ್ಷ ಟಿಕೆಟ್ ಗಳು ಮಾರಾಟವಾಗಿದೆ.

ವಾರಾಂತ್ಯದ ಕಲೆಕ್ಷನ್.?

'ಬಾಹುಬಲಿ-2' ಚಿತ್ರಕ್ಕೆ ಸಿಕ್ಕಿರುವ ಬಿಗ್ ಓಪನ್ನಿಂಗ್ ನೋಡುತ್ತಿದ್ರೆ, ವಾರಾಂತ್ಯದ ಹೊತ್ತಿಗೆ 300-400 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.

English summary
According to reports, SS Rajamouli directorial 'Baahubali-2' is estimated to collect Rs.100 crore on Day 1.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada