For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಬಯೋಪಿಕ್‌ಗೆ ಸುಧಾ ಕೊಂಗರ ಪ್ಲ್ಯಾನ್? ಹೊಂಬಾಳೆ ನಿರ್ಮಾಣದ ಈ ಚಿತ್ರಕ್ಕೆ ಹೀರೊ ಫಿಕ್ಸ್!

  |

  ಕೆಲ ದಿನಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತಮಿಳು ನಿರ್ದೇಶಕ ಸುಧಾ ಕೊಂಗರ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಘೋಷಿಸಿತ್ತು. ಆದರೆ ಆ ಸಿನಿಮಾ ಯಾವ್ದು? ಹೀರೊ ? ಎನ್ನುವ ಬಗ್ಗೆ ಇನ್ನು ಕ್ಲಾರಿಟಿ ಸಿಕ್ಕಿಲ್ಲ. ಈ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡ್ತಿದೆ.

  ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಜೀವನವನ್ನಾಧರಿಸಿ ಸುಧಾ ಕೊಂಗರ 'ಸುರರೈ ಪೊಟ್ರು' ಸಿನಿಮಾ ಕಟ್ಟಿಕೊಟ್ಟಿದ್ದರು. ಕೊರೊನಾ ಹಾವಳಿ ಸಮಯದಲ್ಲೇ ನೇರವಾಗಿ ಓಟಿಟಿಯಲ್ಲೇ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಜಿ. ಆರ್ ಗೋಪಿನಾಥ್ ಪಾತ್ರದಲ್ಲಿ ತಮಿಳು ನಟ ಸೂರ್ಯ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಹಲವು ವಿಭಾಗಗಳಲ್ಲಿ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಸುಧಾ ಕೊಂಗರ ನಿರ್ದೇಶನದಲ್ಲಿ ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಾಗಿ ಹೇಳಿತ್ತು.

  ಕಾರ್ತಿಕ್ ಆರ್ಯನ್ ಜೊತೆ ತಳುಕು ಹಾಕಿಕೊಂಡ ಬಾಲಿವುಡ್‌ 4 ಮಂದಿ ನಟಿಯರು ಇವರೇ!ಕಾರ್ತಿಕ್ ಆರ್ಯನ್ ಜೊತೆ ತಳುಕು ಹಾಕಿಕೊಂಡ ಬಾಲಿವುಡ್‌ 4 ಮಂದಿ ನಟಿಯರು ಇವರೇ!

  ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಸುಧಾ ಕೊಂಗರ ನಿರ್ದೇಶನದ ಚಿತ್ರಕ್ಕೆ ಹೀರೊ ಆಗಿ ಹಲವು ಹೆಸರುಗಳು ಕೇಳಿ ಬಂದಿತ್ತು. ಆದರೆ ಚಿತ್ರತಂಡ ಯಾವುದನ್ನು ಈ ಬಗ್ಗೆ ಮಾತನಾಡಲೇ ಇಲ್ಲ. ಇತ್ತ ನಿರ್ದೇಶಕರು 'ಸುರರೈ ಪೊಟ್ರು' ಚಿತ್ರವನ್ನು ಹಿಂದಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

  ರತನ್ ಟಾಟಾ ಬಯೋಪಿಕ್

  ರತನ್ ಟಾಟಾ ಬಯೋಪಿಕ್

  ಒಬ್ಬ ಉದ್ಯಮಿ ಬಯೋಪಿಕ್‌ನಲ್ಲಿ ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದು ಎನ್ನುವುದನ್ನು 'ಸುರರೈ ಪೊಟ್ರು' ಚಿತ್ರದಲ್ಲಿ ನಿರ್ದೇಶಕಿ ಸುಧಾ ಕೊಂಗರ ತೋರಿಸಿಕೊಟ್ಟಿದ್ದರು. ಇದೀಗ ರತನ್ ಟಾಟಾ ಜೀವನಗಾಥೆಯನ್ನು ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡುವ ಸಾಧ್ಯತೆ ಇದೆಯಂತೆ. ತಮಿಳು ನಟ ಸೂರ್ಯ ಕೂಡ ಇದಕ್ಕೆ ಕೈ ಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.

  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 2' ಆರ್ಭಟ: 'ಕಾಂತಾರ' ಕಲೆಕ್ಷನ್ ಲೆಕ್ಕಾಚಾರವೇನು?ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 2' ಆರ್ಭಟ: 'ಕಾಂತಾರ' ಕಲೆಕ್ಷನ್ ಲೆಕ್ಕಾಚಾರವೇನು?

  ರತನ್ ಟಾಟಾ ಜೀವನಗಾಥೆ ರೋಚಕ

  ರತನ್ ಟಾಟಾ ಜೀವನಗಾಥೆ ರೋಚಕ

  ರತನ್ ಟಾಟಾ ಅವರು ಟಾಟಾ ಗ್ರೂಪ್‌ನ ಚೇರ್‌ಮನ್ ಆದ ಬಳಿಕ ತೆಗೆದುಕೊಂಡ ನಿರ್ಧಾರಗಳು ಸಂಸ್ಥೆಯನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ದಿತ್ತು. ಟಾಟಾ ಮೋಟರ್ಸ್‌ನಿಂದ ಶುರು ಮಾಡಿ ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ, ಟಾಟಾ ಇನ್ಸುರೆನ್ಸ್, ಟಾಟಾ ಟೀ, ಉಪ್ಪು ಹೀಗೆ ಜನರ ಜೀವನದ ಜೊತೆಗೆ ಬೆರತು ಹೋಗಿರುವ ಸಂಸ್ಥೆ ಇದು. ಇನ್ನು ಭಾರತದಲ್ಲಿ ತಾಜ್ ಹೋಟೆಲ್ ಕಟ್ಟಿಸಿದರು. ಬಹಳ ಕಡಿಮೆ ಬೆಲೆಗೆ ನ್ಯಾನೋ ಕಾರ್ ಪರಿಚಯಿಸಿದರು. ಸಂಸ್ಥೆಯನ್ನು ಕಟ್ಟಿ ಬೆಳಸುವ ಕಾರಣಕ್ಕೆ ಮದುವೆಯಾಗದೇ ಉಳಿದುಬಿಟ್ಟರು. ಬಯೋಪಿಕ್ ಚಿತ್ರಕ್ಕೆ ಇದಕ್ಕಿಂತ ಕಥೆ ಬೇಕಾ ಹೇಳಿ?

  ರತನ್ ಟಾಟಾ ಆಗಿ ಅಭಿಷೇಕ್?

  ರತನ್ ಟಾಟಾ ಆಗಿ ಅಭಿಷೇಕ್?

  ಇನ್ನು ರತನ್ ಟಾಟಾ ಬಯೋಪಿಕ್ ಚಿತ್ರದಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹೀರೊ ಆಗಿ ನಟಿಸುವ ಸಾಧ್ಯತೆಯಿದೆಯಂತೆ. ಈ ಹಿಂದೆ ಮಣಿರತ್ನಂ ನಿರ್ದೇಶನದ 'ಗುರು' ಚಿತ್ರದಲ್ಲಿ ಧೀರುಬಾಯ್ ಅಂಬಾನಿ ಪಾತ್ರದಲ್ಲಿ ಅಭಿ ನಟಿಸಿದ್ದರು. ಇದೀಗ ರತನ್ ಟಾಟಾ ಪಾತ್ರದಲ್ಲಿ ಜ್ಯೂ. ಬಚ್ಚನ್ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ.

  ಮುಂದಿನ ವರ್ಷ ಸೆಟ್ಟೇರಲಿದೆ ಚಿತ್ರ

  ಮುಂದಿನ ವರ್ಷ ಸೆಟ್ಟೇರಲಿದೆ ಚಿತ್ರ

  ಅಭಿಷೇಕ್ ಬಚ್ಚನ್ ಜೊತೆಗೆ ರತನ್ ಟಾಟಾ ಪಾತ್ರಕ್ಕೆ ಸೂರ್ಯ ಹೆಸರು ಕೂಡ ಕೇಳಿಬರ್ತಿದೆ. ಈಗಾಗಲೇ ಚಿತ್ರಕಥೆ ಸಿದ್ದಪಡಿಸುವ ಕೆಲಸ ನಡೀತಿದೆ. ಮುಂದಿನ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಎಷ್ಟೋ ಜನರಿಗೆ ಪ್ರೇರಣೆಯಾಗಿರುವ ರತನ್ ಟಾಟಾ ಬಯೋಪಿಕ್ ಬಂದರೆ ನಿಜಕ್ಕೂ ಹಿಟ್ ಆಗುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.

  English summary
  Director Sudakongara and Hombale Films Planing for Ratan Tata's Biopic with Abhishek Bachchan. Actors Mahesh Babu, Abhishek Bachchan and Suriya are expected to be roped in for the film. Know more.
  Wednesday, November 23, 2022, 19:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X