»   » ರಿಲೀಸ್ ಆಗಿಲ್ಲ, ಆಗ್ಲೇ ದುಡ್ಡು ಬಾಚೋಕೆ ಶುರು ಮಾಡಿದ 'ಹೆಬ್ಬುಲಿ' ಕಿಚ್ಚ?

ರಿಲೀಸ್ ಆಗಿಲ್ಲ, ಆಗ್ಲೇ ದುಡ್ಡು ಬಾಚೋಕೆ ಶುರು ಮಾಡಿದ 'ಹೆಬ್ಬುಲಿ' ಕಿಚ್ಚ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಬಾಕ್ಸಾಫೀಸ್ ನಲ್ಲಿ ಕೊಳ್ಳೆ ಹೊಡೆದಿದ್ದು, ಜೊತೆಗೆ ಸುದೀಪ್ ಅವರಿಗೆ ಹೊಸ ಇಮೇಜ್ ತಂದು ಕೊಟ್ಟಿದ್ದು ಎಲ್ಲಾ ಈಗ ಇತಿಹಾಸ. ಇದರ ಬೆನ್ನಲ್ಲೇ ಕಿಚ್ಚ ಅವರು 'ಹೆಬ್ಬುಲಿ'ಯಾಗಿ ಶತ್ರುಗಳನ್ನು ಚಚ್ಚಿ ಬಿಸಾಕಲು ಗಡಿ ನಾಡಿನಲ್ಲಿ ಹೊಂಚು ಹಾಕಿ ಕಾಯುತ್ತಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಪ್ಯಾರಾ ಕಮಾಂಡೋ ಪಾತ್ರದಲ್ಲಿ, ಬೆಳ್ಳಿತೆರೆ ಮೇಲೆ ಅಬ್ಬರಿಸಲು ತಯಾರಾಗಿರುವ ಕಿಚ್ಚ ಸುದೀಪ್ ಅವರು ರಿಲೀಸ್ ಗೂ ಮುನ್ನವೇ, ಮೇಲಿಂದ ಮೇಲೆ ಭಾರಿ ಸುದ್ದಿ ಮಾಡುತ್ತಿದ್ದಾರೆ.[ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?]


ಸದ್ಯಕ್ಕೆ ಕೊನೆಯ ಹಂತದ ಶೂಟಿಂಗ್ ನಲ್ಲಿರುವ 'ಹೆಬ್ಬುಲಿ' ಚಿತ್ರಕ್ಕೆ ಬಿಡುಗಡೆಗೆ ಮುನ್ನವೇ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಟಿವಿ ಹಕ್ಕು, ಆಡಿಯೋ ಹಕ್ಕು ಅಂತ ಒಂದೊಂದೇ ಹಕ್ಕುಗಳು ಬಿಸಿ-ಬಿಸಿ ದೋಸೆಯಂತೆ ಭರ್ಜರಿ ಮೊತ್ತಕ್ಕೆ ಸೇಲಾಗುತ್ತಿವೆ. ಮುಂದೆ ಓದಿ....


ಗಮನ ಸೆಳೆಯುತ್ತಿರುವ 'ಹೆಬ್ಬುಲಿ'

ಫಸ್ಟ್ ಲುಕ್ ಪೋಸ್ಟರ್ ನಿಂದ ಹಿಡಿದು, ಮೇಕಿಂಗ್, ತಾರಾಗಣ ಸೇರಿದಂತೆ ಹಲವು ಭಿನ್ನ-ವಿಭಿನ್ನ ವಿಶೇಷತೆಗಳಿಂದ, ಗಾಂಧಿನಗರದಲ್ಲಿ ಬಹಳಷ್ಟು ಸುದ್ದಿ ಮಾಡುತ್ತಿರುವ 'ಹೆಬ್ಬುಲಿ' ಚಿತ್ರದ ಬಿಡುಗಡೆಗೆ ಮುನ್ನವೇ ಬೇಡಿಕೆ ಬಂದಿದೆ. ಇದೀಗ ಸ್ಯಾಟಲೈಟ್ ಹಕ್ಕು ಮತ್ತು ಆಡಿಯೋ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟಗೊಂಡಿದೆ.[ಚಿತ್ರಗಳು: ಆರ್ಮಿ ಲುಕ್ ನಲ್ಲಿ 'ಹೆಬ್ಬುಲಿ' ಸುದೀಪ್ ಗತ್ತು]


ಆಡಿಯೋ ಹಕ್ಕು

ಸುದೀಪ್ ಮತ್ತು 'ಗಜಕೇಸರಿ' ಖ್ಯಾತಿಯ ಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಹೆಬ್ಬುಲಿ' ಚಿತ್ರದ ಆಡಿಯೋ ಹಕ್ಕನ್ನು, ಸುಮಾರು 1.50 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಲು ಪ್ರತಿಷ್ಠಿತ ಆಡಿಯೋ ಸಂಸ್ಥೆಯೊಂದು ಮುಂದೆ ಬಂದಿದೆ ಎನ್ನಲಾಗುತ್ತಿದೆ. ಯಾವ ಸಂಸ್ಥೆ ಎನ್ನುವುದು ಇನ್ನಷ್ಟೇ ಬಹಿರಂಗ ಆಗಬೇಕಿದೆ.


ಸ್ಯಾಟಲೈಟ್ ಹಕ್ಕು

ಇನ್ನು 'ಹೆಬ್ಬುಲಿ' ಬಿಡುಗಡೆಗೆ ಮುನ್ನವೇ ಸ್ಯಾಟಲೈಟ್ ಹಕ್ಕು ಖರೀದಿ ಮಾಡಲು ಖ್ಯಾತ ಮನರಂಜನಾ ಚಾನೆಲ್ ಒಂದು ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಅದೂ ಒಂದಲ್ಲಾ-ಎರಡಲ್ಲಾ ಬರೋಬ್ಬರಿ 5.5 ಕೋಟಿ ರೂಪಾಯಿ ಪಾವತಿ ಮಾಡಿ ಟಿವಿ ಹಕ್ಕು ಖರೀದಿಸಲು 'ಆ' ಮನರಂಜನಾ ಚಾನೆಲ್ ಮನಸ್ಸು ಮಾಡಿದೆಯಂತೆ. ಯಾವ ವಾಹಿನಿ ಅನ್ನೋ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ದೊರೆಯಲಿದೆ.


ಉಗ್ರರ ದಮನವೇ 'ಹೆಬ್ಬುಲಿ' ಕಥೆ

ಭಾರತ ಮತ್ತು ಪಾಕಿಸ್ತಾನ ನಡುವಿನ ಉಗ್ರರ ದಮನದ ಕಥೆಯೇ 'ಹೆಬ್ಬುಲಿ' ಚಿತ್ರದ ಪ್ರಮುಖ ಕಥಾಹಂದರ. ವೀರ ಪರಾಕ್ರಮ ಕಮಾಂಡರ್ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರನ್ನೆಲ್ಲಾ ಚಚ್ಚಿ ಬಿಸಾಕಲಿದ್ದಾರೆ.


ತಾರಾಗಣ

ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ಸುದೀಪ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸುದೀಪ್ ಅವರ ಅಣ್ಣನ ಪಾತ್ರ ವಹಿಸಿದ್ದು, ಚಿಕ್ಕಣ್ಣ ಅವರ ಕಾಮಿಡಿ ಪ್ರೇಕ್ಷಕರಿಗೆ ಕಚಗುಳಿ ಇಡಲಿದೆ. ಪರಭಾಷೆಯ ಖಡಕ್ ವಿಲನ್ ಗಳಾದ ಕಬೀರ್ ದುಹಾನ್ ಸಿಂಗ್ ಮತ್ತು ರವಿ ಕಿಶನ್ 'ಹೆಬ್ಬುಲಿ' ಸುದೀಪ್ ಗೆ ಟಕ್ಕರ್ ಕೋಡೋ ವಿಲನ್ ಗಳಾಗಿ ಶೈನ್ ಆಗಲಿದ್ದಾರೆ.


English summary
Kannada Actor Sudeep, Kannada Actor ravichandran, Actress Amala Paul starrer Kannada Movie 'Hebbuli' Audio (1.50 crore) and Satellite (5.5 crore) rights is sold for record price. The Movie is directed by S.Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada