»   » ಐಟಂ ಹಾಡಿಗೆ ಸಹಿ ಹಾಕಿದ ನೀಲಿ ತಾರೆ ಸನ್ನಿ ಲಿಯೋನ್

ಐಟಂ ಹಾಡಿಗೆ ಸಹಿ ಹಾಕಿದ ನೀಲಿ ತಾರೆ ಸನ್ನಿ ಲಿಯೋನ್

Posted By:
Subscribe to Filmibeat Kannada

ಬಾಲಿವುಡ್ 'ಜಿಸ್ಮ್-2' ಚಿತ್ರದಲ್ಲಿ ತಮ್ಮ ಮೈಮಾಟ ತೋರಿದ್ದ ನೀಲಿ ತಾರೆ ಸನ್ನಿ ಲಿಯೋನ್ ಈಗ ಐಟಂ ಹಾಡಿನಲ್ಲಿ ಸೊಂಟ ಕುಲುಕಿಸಲು ರೆಡಿಯಾಗಿದ್ದಾರೆ. ಚಲನಚಿತ್ರ ನಿರ್ಮಾತೃ ಅನಿಲ್ ಶರ್ಮ ಅವರ 'ಸಿಂಗ್ ಸಾಹಿಬ್ ದಿ ಗ್ರೇಟ್' ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ಡಾನ್ಸ್ ಮಾಡಲಿದ್ದಾರೆ.

ಸದ್ಯಕ್ಕೆ ಬಿಜಿಯಾಗಿರುವ ಸನ್ನಿ ಅವರ ಡೇಟ್ಸ್ ಹೊಂದಾಣಿಕೆಯಾದರೆ ಆಕೆ ತಮ್ಮ ಚಿತ್ರದಲ್ಲಿ ಕುಣಿಯುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಅನಿಲ್ ಶರ್ಮ. ಸನ್ನಿ ಲಿಯೋನ್ ಒಬ್ಬ ಮಾನವೀಯತೆಯುಳ್ಳ ಅದ್ಭುತ ತಾರೆ ಎಂಬ ಸರ್ಟಿಫಿಕೇಟನ್ನು ಅವರು ಧಾರಾಳವಾಗಿ ನೀಡಿದ್ದಾರೆ.


ಈ ಚಿತ್ರದ ನಾಯಕ ನಟ ಸನ್ನಿ ಡಿಯೋಲ್. ಆರಂಭದಲ್ಲಿ ತಮ್ಮ ಚಿತ್ರಕ್ಕೆ ಸನ್ನಿ ಲಿಯೋನ್ ಬೇಡವೇ ಬೇಡ ಎಂದು ಈತ ಪಟ್ಟುಹಿಡಿದಿದ್ದ. ಕಡೆಗೂ ನಿರ್ಮಾಪಕರು ಹೇಗೋ ಸನ್ನಿ ಡಿಯೋಲ್ ರನ್ನು ಒಪ್ಪಿಸಿದ್ದಾರೆ. ಕಡೆಗೂ ಆತ ಒಲ್ಲದ ಮನಸ್ಸಿನಿಂದ ಓಕೆ ಎಂದಿದ್ದಾನಂತೆ.

ಡಿಸೆಂಬರ್ 10ರಿಂದ 'ಸಿಂಗ್ ಸಾಹಿಬ್ ದಿ ಗ್ರೇಟ್' ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಒಟ್ಟು 50 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಚಿತ್ರದ ನಾಯಕಿ ಅಮೀಷಾ ಪಟೇಲ್. ಈ ಚಿತ್ರದ ಐಟಂ ಹಾಡಿಗಾಗಿ ಸನ್ನಿ ಲಿಯೋನ್ ಅವರಿಗೆ ಭರ್ಜರಿ ರು.50 ಲಕ್ಷ ಸಂಭಾವನೆ ನೀಡಲಾಗುತ್ತಿದೆ ಎಂಬ ಸುದ್ದಿಯೂ ಇದೆ. (ಏಜೆನ್ಸೀಸ್)

English summary
Actress Sunny Leone all set to do item number in Singh Sahib The Great. The filmmaker Anil Sharma trying to work on her dates. She is busy with her other projects.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada