»   » ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ ರಜನಿಕಾಂತ್ ಪತ್ರ

ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ ರಜನಿಕಾಂತ್ ಪತ್ರ

Posted By: ಶಂಕರ್, ಚೆನ್ನೈ
Subscribe to Filmibeat Kannada

ಇಪ್ಪತ್ತೆರಡು ದಿನಗಳ ಸೆರೆವಾಸದಿಂದ ಬಿಡುಗಡೆಯಾದ ಅಣ್ಣಾ ಡಿಎಂಕೆ ಪಕ್ಷದ ಪರಮೋಚ್ಚ ನಾಯಕಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ರಜನಿಕಾಂತ್ ಅವರು ಇತ್ತೀಚೆಗೆ ಒಂದು ಪತ್ರ ಬರೆದು ಶುಭಾಶಯ ತಿಳಿಸಿದ್ದರು. ಈ ಸಂಗತಿ ಈಗ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಜಯಲಲಿತಾ ಬಂಧನಕ್ಕೊಳಗಾದಾಗ ತಮಿಳುನಾಡಿನ ಚಲನಚಿತ್ರೋದ್ಯಮ ಒಂದು ದಿನದ ಮಟ್ಟಿಗೆ ಉಪವಾಸ ಸತ್ಯಾಗ್ರಹವನ್ನೂ ಮಾಡಿತು. ಆದರೆ ಈ ಉಪವಾಸ ಸತ್ಯಾಗ್ರಹದಿಂದ ರಜನಿಕಾಂತ್ ಬಹಳ ದೂರ ಉಳಿದಿದ್ದರು. [ಜಯಲಲಿತಾಗಾಗಿ ಮೀಸೆ ಪಣಕ್ಕಿಟ್ಟ ವಿಜಯಕಾಂತ್]

ಈಗ ಜಯಲಲಿತಾ ಬಿಡುಗಡೆಯಾಗಿದ್ದೇ ತಡ ಅವರು ಶುಭಾಶಯ ಪತ್ರ ಬರೆದಿರುವುದು ಎಲ್ಲರ ಕುತೂಹಲ ಕೆರಳಿಸಿದೆ. ಇದ್ದಕ್ಕಿದ್ದಂತೆ ಜಯಾ ಅವರಿಗೆ ರಜನಿ ಯಾಕೆ ಪತ್ರ ಬರೆದರು, ಅವರ ಉದ್ದೇಶ ಏನಿರಬಹುದು ಎಂದು ತಮಿಳುನಾಡಿನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

Super Star Rajinikanth letter to Jayalalithaa

ಇದರ ಹಿಂದೆ ಅನೇಕ ಕಾರಣಗಳಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಶೀಘ್ರದಲ್ಲೇ ರಜನಿಕಾಂತ್ ಅವರ 'ಲಿಂಗಾ' ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಚಿತ್ರಕ್ಕೆ ಯಾವುದೇ ವಿಘ್ನಗಳು ಎದುರಾಗದಿರಲಿ ಎಂಬ ಮುಂಜಾಗ್ರತೆಯಿಂದ ರಜನಿ ಜಾಣತನದ ಹೆಜ್ಜೆ ಇಟ್ಟರಾ ಎಂಬುದೂ ಒಂದು.

ಈ ಹಿಂದೊಮ್ಮೆ ಜಯಲಿಲಿತಾ ಅವರಿಗೆ ಸೆಡ್ಡುಹೊಡೆದಿದ್ದ ಕಮಲ್ ಹಾಸನ್, ವಿಜಯ್ ಸಿನಿಮಾಗಳಿಗೆ ನಾನಾ ವಿಘ್ನಗಳು ಎದುರಾಗಿದ್ದು ಗೊತ್ತೇ ಇದೆ. ಈಗ ತಮ್ಮ ಚಿತ್ರಕ್ಕೂ ಅದೇ ರೀತಿ ಆಗಬಹುದು ಎಂದು ರಜನಿ ಎಚ್ಚರಿಕೆ ವಹಿಸಿದರೆ ಎಂದು ತಮಿಳುನಾಡು ಸಿನಿಮಾ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು 'ಲಿಂಗಾ' ಚಿತ್ರದ ವಿಚಾರಕ್ಕೆ ಬಂದರೆ ರಜನಿಕಾಂತ್ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಕನ್ನಡದ ಧೀರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಅನುಷ್ಕಾ, ಸೋನಾಕ್ಷಿ ಸಿನ್ಹಾ ನಾಯಕಿಯರು.

ಈಗಾಗಲೆ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್ ಗಳು ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ರಜನಿ ಅಭಿಮಾನಿಗಳು ಬಹಳ ಸಮಯದಿಂದ ಅವರ ಚಿತ್ರಗಳಿಗಾಗಿ ಕಾದು ಕುಳಿತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅವರು ಮಾಸ್ ಲುಕ್ ನಲ್ಲಿ ಕಾಣಿಸಲಿದ್ದು, "ಸ್ವಾತಂತ್ರ್ಯಕ್ಕೂ ಮುನ್ನ, ಆ ಬಳಿಕದ ತಲೆಮಾರಿಗೆ ಸೇರಿದ ಎರಡು ಪಾತ್ರಗಳಲ್ಲಿ ರಜನಿ ಕಾಣಿಸಲಿದ್ದಾರೆ" ಎನ್ನುತ್ತಾರೆ ಚಿತ್ರದ ನಿರ್ದೇಶಕ ರವಿಕುಮಾರ್.

English summary
Innumerable wishes were poured in when Jayalalithaa, yesteryear Tamil actress and ex CM of Tamil Nadu walked out of Bangalore's Central Jail. But the most prominent of all was a letter from Rajinikanth conveying his wishes on her return to the State.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada