»   » ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು...

ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು...

Posted By:
Subscribe to Filmibeat Kannada

ಬಾಲಿವುಡ್ ಮತ್ತು ಕಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ಸುದ್ದಿ ನಿಜವೇ ಆಗಿದ್ದರೆ, ಸದ್ಯದಲ್ಲೇ 'ಎಂದಿರನ್-2' ಸಿನಿಮಾ ಸೆಟ್ಟೇರಲಿದೆ. ವಿಜ್ಞಾನಿ ಡಾ.ವಸೀಗರನ್ ಮತ್ತು ರೋಬೋಟ್ ಚಿಟ್ಟಿಯಾಗಿ ಮತ್ತೊಮ್ಮೆ ತೆರೆಮೇಲೆ ಕಮಾಲ್ ಮಾಡಲಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್.

ಒಂದ್ಕಡೆ ತಲೈವಾ ರಜನಿ ಸಾಲು ಸಾಲು ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಇನ್ನೊಂದ್ಕಡೆ ನಿರ್ದೇಶಕ ಶಂಕರ್ ಕೂಡ ವರ್ಷಗಳಿಂದ ಕಷ್ಟ ಪಟ್ಟು ರೆಡಿಮಾಡಿದ್ದ 'ಐ' ಸಿನಿಮಾ ಮಕಾಡೆ ಮಲಗಿದೆ. ಕಾಲಿವುಡ್ ಚಿತ್ರರಂಗದ ಈ ಇಬ್ಬರು ದಿಗ್ಗಜರಿಗೂ ತಕ್ಷಣ ಒಂದು ಗೆಲುವು ಬೇಕಾಗಿದೆ.

rajinikanth

ಎರಡು ಅದ್ಭುತಗಳು ಒಂದಾದರೆ, ಹಿಟ್ ಖಂಡಿತ ಅಂತ ಮನಗಂಡಿರುವ ರಜನಿಕಾಂತ್ ಮತ್ತು ಶಂಕರ್ ಸದ್ದಿಲ್ಲದೇ 'ಎಂದಿರನ್-2' ಚಿತ್ರದ ಬಗ್ಗೆ ಪ್ಲಾನಿಂಗ್ ಮಾಡ್ತಿದ್ದಾರೆ. ಮೊದಲ ಚಿತ್ರದ ಮುಂದುವರಿದ ಭಾಗ ಇದಾಗಿರುವ ಕಾರಣ, ಬಚ್ಚನ್ ಬಹುರಾಣಿ ಐಶ್ವರ್ಯಾ ರೈ ಮತ್ತೊಮ್ಮೆ ರಜನಿಕಾಂತ್ ಜೊತೆ ಮರಸುತ್ತಲಿದ್ದಾರೆ.

ಕಾಲಿವುಡ್ ಮಾತ್ರವಲ್ಲದೇ ಇಡೀ ದೇಶಾದ್ಯಂತ 'ಎಂದಿರನ್-2' ಸುದ್ದಿ ಮಾಡಬೇಕಾಗಿರುವ ಕಾರಣ, ಬಾಲಿವುಡ್ ನಟ-ನಟಿಯರನ್ನೂ ಚಿತ್ರಕ್ಕೆ ಕರೆತರಬೇಕು ಅನ್ನುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಹೇಳಿ ಕೇಳಿ ಐಶೂ, ಮತ್ತೆ ಬಣ್ಣ ಹಚ್ಚಿರುವ ಕಾರಣ, ಹೀರೋಯಿನ್ ಪಾತ್ರಕ್ಕೆ ಅವರೇ ಬೆಸ್ಟ್ ಅಂತ ಚಿತ್ರತಂಡ ನಿರ್ಧರಿಸಿಬಿಟ್ಟಿದೆ.

rajinikanth

ಐಶೂ-ರಜನಿ ಜೊತೆಗೆ ವಿಶೇಷ ಪಾತ್ರದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಕೂಡ 'ಎಂದಿರನ್-2' ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ನಿರ್ದೇಶಕ ಶಂಕರ್ ಈಗಾಗಲೇ ಆಮೀರ್ ಖಾನ್ ಜೊತೆ ಮಾತುಕತೆ ನಡೆಸುವುದಕ್ಕೆ ಸಮಯ ನಿಗಧಿ ಮಾಡಿದ್ದಾರಂತೆ. [ರಜನಿಕಾಂತ್ ಬಗ್ಗೆ ರಾಕ್ ಲೈನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

ಒಂದು ವೇಳೆ ಆಮೀರ್ ಖಾನ್ ಓಕೆ ಅಂದು, ಐಶ್ವರ್ಯಾ ರೈ ಕೂಡ ಗ್ರೀನ್ ಸಿಗ್ನಲ್ ಕೊಟ್ಟರೆ 'ಎಂದಿರನ್-2' ಹವಾ ಮತ್ತೆ ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಶುರುವಾಗಲಿದೆ. ಲಾಜಿಕ್ ಇಲ್ಲದೇ ಬರೀ ಮ್ಯಾಜಿಕ್ ಮಾತ್ರದಿಂದಲೇ ಕ್ಲಿಕ್ ಆಗಿದ್ದ 'ಎಂದಿರನ್' ಫಾರ್ಮುಲಾದಲ್ಲಿ ಪಾರ್ಟ್ 2 ರೆಡಿಯಾಗಲಿದೆ. ರಜನಿಯ ಈ ಹೊಸ ಪ್ಲಾನ್ ಕೈಹಿಡಿದರೆ ಬಚಾವ್!

English summary
According to the latest report, Superstar Rajinikanth and Director Shankar are in talks to materialize Enthiran 2. And also looks like the director wants to retain Aishwarya Rai in the sequel as well.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada