For Quick Alerts
  ALLOW NOTIFICATIONS  
  For Daily Alerts

  'ಸಿಂಘಂ' ನಿರ್ದೇಶಕನ ಮೇಲೆ ಸೂರ್ಯಾ ಮುನಿಸು: ಸಿನಿಮಾದಿಂದ ಹೊರಕ್ಕೆ?

  |

  ಸೂರ್ಯಾಗೆ ಸಖತ್ ಮಾಸ್ ಇಮೇಜ್ ಕೊಟ್ಟ ಸಿನಿಮಾ 'ಸಿಂಘಂ'. ಅದೇ ಸಿನಿಮಾದ ನಿರ್ದೇಶಕ ಹರಿ ಜೊತೆ ಮತ್ತೊಂದು ಸಿನಿಮಾ ಘೋಷಿಸಿದ್ದರು ನಟ ಸೂರ್ಯಾ. ಆದರೆ ಹೊಸ ವರದಿಯಂತೆ ನಟ ಸೂರ್ಯಾ ಆ ಸಿನಿಮಾದಲ್ಲಿ ನಟಿಸುತ್ತಿಲ್ಲವಂತೆ.

  ನಟ ಸೂರ್ಯಾ ಮತ್ತು ನಿರ್ದೇಶಕ ಹರಿ 'ಅರುವಾ' ಎಂಬ ಹೊಸ ಸಿನಿಮಾ ಘೋಷಿಸಿದ್ದರು. ಆದರೆ ನಿರ್ದೇಶಕ ಹರಿ ಮೇಲೆ ಮುನಿಸಿಕೊಂಡಿರುವ ಸೂರ್ಯಾ, ಅರುವಾ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

  ಸಿನಿಮಾದ ಕತೆ ಹಾಗೂ ನಿರೂಪಣೆ ಕುರಿತಂತೆ ನಟ ಸೂರ್ಯಾ ಹಾಗೂ ನಿರ್ದೇಶಕ ಹರಿ ನಡುವೆ ಭಿನ್ನಾಭಿಪ್ರಾಯ ತಲೆದೂರಿದ ಕಾರಣ ಸೂರ್ಯಾ, ಅರುವಾ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

  ಅರುವಾ ಸಿನಿಮಾದಲ್ಲಿ ಸೂರ್ಯಾ ಬದಲಿಗೆ ತಮಿಳಿನ ಮತ್ತೋರ್ವ ಸ್ಟಾರ್ ನಟ ಚಿಯಾನ್ ವಿಕ್ರಂ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬೇಕಿದೆ.

  ಅರುವಾ ಸಿನಿಮಾದಲ್ಲಿ ರಾಶಿ ಖನ್ನಾ ನಾಯಕಿಯಾಗಿ ಆಯ್ಕೆ ಮಾಡಿದ್ದು, ವಿಕ್ರಂ ಎದುರು ಸಹ ರಾಶಿ ಖನ್ನಾ ಅವರೇ ನಾಯಕಿಯಾಗಿ ಮುಂದುವರೆಯಲಿದ್ದಾರೆ.

  ಸೂರ್ಯಾ ಪ್ರಸ್ತುತ ವಡಿವಾಸಲ್, ರಾಕೆಟ್ರಿ, ನವರಸ ಮತ್ತು ಹೆಸರಿಡದ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ವಿಕ್ರಂ, ಪೊನಿನ್ನಯನ್ ಸೆಲ್ವಂ, ಕರಿಕಲನ್, ಕೋಬ್ರಾ, ಧ್ರುವ ನಚ್ಚತ್ತಿರಮ್, ಕರಿಕಾಲನ್, ಪುಷ್ಪಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actor Suriya walked walked out of Hari's Aruvaa movie. Chiyan Vikram replacing Suriya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X