»   » ಬಾಲಿವುಡ್ ಚಿತ್ರದಲ್ಲಿ ಕನ್ನಡದ ಕ್ರೇಜಿ ಬಾಯ್ ಸೂರ್ಯ

ಬಾಲಿವುಡ್ ಚಿತ್ರದಲ್ಲಿ ಕನ್ನಡದ ಕ್ರೇಜಿ ಬಾಯ್ ಸೂರ್ಯ

Posted By:
Subscribe to Filmibeat Kannada

ಕ್ರೇಜಿಲೋಕ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನವನಟ ಸೂರ್ಯ ಸದ್ಯದಲ್ಲೇ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕ್ರೇಜಿ ಬಾಯ್ ಪಕ್ಕಾ ಕನ್ನಡದ ಹುಡುಗ. ಈ ಸೂರ್ಯರ ಮೂಲ ಹೆಸರು ವಿಜಯ್ ಸೂರ್ಯ. ಇವರು ಮುಂಬೈನಲ್ಲಿ ಸುಭಾಷ್ ಘಾಯ್ ಅವರ ತರಬೇತಿ ಸಂಸ್ಥೆಯಲ್ಲಿ ಎರಡು ವರ್ಷಗಳ ನಟನಾ ತರಬೇತಿ ಪಡೆದಿದ್ದಾರೆ.

ಈಗ ಬಾಲಿವುಡ್ ಚಿತ್ರವೊಂದರಲ್ಲಿ ಸೂರ್ಯ ನಟಿಸಲಿರುವುದು ಪಕ್ಕಾ ಆಗಿದೆ. ಸುಭಾಷ್ ಘಾಯ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ಹೊರಬಂದ ಅವರ ಗೆಳೆಯರೇ ಸೇರಿ ಸೂರ್ಯರಿಗಾಗಿ ಒಂದು ಚಿತ್ರವನ್ನು ಬಾಲಿವುಡ್ ನಲ್ಲಿ ಮಾಡಲಿದ್ದಾರೆ. ಆ ಚಿತ್ರಕ್ಕೆ ನಿರ್ದೇಶಕರು ವರುಣ್ ಬೋನ್ಸ್ಲೇ. ಇನ್ನೆರಡು ಚಿತ್ರಗಳು ಸೂರ್ಯ ಅವರನ್ನು ಕಾದು ಕುಳಿತಿವೆ.

ಮಾತುಕತೆ ಹಂತದಲ್ಲಿರುವ ಈ ಎರಡು ಚಿತ್ರಗಳ ಬಗ್ಗೆ ವಿವರಗಳನ್ನು ಸದ್ಯಕ್ಕೆ ಸೂರ್ಯ ಬಿಟ್ಟುಕೊಟ್ಟಿಲ್ಲ. ಆದರೆ "ಕ್ರೇಜಿಲೋಕ ನಂತರ ಸಾಕಷ್ಟು ಅವಕಾಶಗಳು ಕನ್ನಡದಲ್ಲಿ ಬಂದಿವೆ. ಕಥೆ ಇಷ್ಟವಾಗದೇ ಒಪ್ಪಿಕೊಂಡಿಲ್ಲ" ಎಂಬ ಗುಟ್ಟನ್ನು ಹೊರಹಾಕಿದ್ದಾರೆ. ಜೊತೆಗೆ ತಮಗೆ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ಗೆಳೆಯರಿದ್ದಾರೆ ಎಂದಿದ್ದಾರೆ ಸೂರ್ಯ.

ಕಳೆದ ವರ್ಷ, 2011 ರಲ್ಲಿ ಬೆಂಗಳುರು ಮೆಗಾ ಮಾಡೆಲ್ ವಿನ್ನರ್ ಈ ಸೂರ್ಯ. ನಟನಾಗಿದ್ದಲ್ಲದೇ ರೂಪದರ್ಶಿಯಾಗಿಯೂ ಇವರು ಮಿಂಚುತಿದ್ದಾರೆ. ಸೂರ್ಯ ಮೂರು ವರ್ಷದವನಾಗಿದ್ದಾಗಲೇ ಡಾನ್ಸ್ ಕಿಂಗ್ ಪ್ರಭುದೇವ ಅವರ ನೃತ್ಯವನ್ನು ಅನುಕರಿಸುತ್ತಿದ್ದರಂತೆ. ನಂತರ ಡಾನ್ಸ್ ತರಬೇತಿ ಪಡೆದು ಒಳ್ಳೆಯ ಡಾನ್ಸರ್ ಎನಿಸಿದ್ದಾರೆ.

ಒಟ್ಟಿನಲ್ಲಿ ಬಾಲಿವುಡ್ ಗೆಳೆಯರೇ ಸೇರಿ ಮಾಡಿರುವ ಸ್ಕ್ರಿಪ್ಟ್ ಸೂರ್ಯರಿಗಾಗಿ ಕಾಯುತ್ತಿದೆ. ಕನ್ನಡದಲ್ಲಿ ಒಂದೇ ಒಂದು ಚಿತ್ರ ಮಾಡಿ ತಕ್ಷಣ ಬಾಲಿವುಡ್ ಅಂಗಳಕ್ಕೆ ಜಿಗಿವ ಸಾಹಸಕ್ಕೆ ಸಜ್ಜಾಗಿದ್ದಾರೆ ನವನಟ ಸೂರ್ಯ. ಕ್ರೇಜಿಲೋಕ ಚಿತ್ರ ಸೋಲಿನ ಹಾದಿಯಲ್ಲಿ ಸಾಗುತ್ತಿದ್ದರೂ ಅದರ ನಾಯಕನಟ ಗೆಲುವಿನೆಡೆ ಮುಖಮಾಡಿ ಹೊರಟಿದ್ದಾರೆ. ಆಲ್ ದಿ ಬೆಸ್ಟ್ ಸೂರ್ಯ... (ಒನ್ ಇಂಡಿಯಾ ಕನ್ನಡ)

English summary
Crazy Loka fame Kannada Actor Surya Acts in a Bollywood Movie very soon. Director Varun Bonsle directs this movie and Surya's Bollywood friends produces this upcoming movie. 
 
Please Wait while comments are loading...