»   » ಸುಸಾನೆ ಜೀವನಾಂಶ ಮೊತ್ತ ಕೇಳಿ ಹೃತಿಕ್ ಸುಸ್ತು

ಸುಸಾನೆ ಜೀವನಾಂಶ ಮೊತ್ತ ಕೇಳಿ ಹೃತಿಕ್ ಸುಸ್ತು

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಅದು ಎಷ್ಟು ಹಳೆಯ ದಾಂಪತ್ಯವಾದರೂ ಅಷ್ಟೇ ಒಬ್ಬರ ನಡುವೆ ಒಬ್ಬರಿಗೆ ಪ್ರೀತಿ ಗೌರವ ಇಲ್ಲದಿದ್ದರೆ ಹೇಗೆ ಇರಲು ಸಾಧ್ಯ? ಬಾಲಿವುಡ್ ನ ಅತ್ಯಂತ ಯಶಸ್ವಿ ದಂಪತಿಗಳೆನಿಸಿದ್ದ ಹೃತಿಕ್ ರೋಷನ್ ಹಾಗೂ ಸುಸಾನೆ ಸಂಸಾರದಲ್ಲಿ ಬಿರುಕು ಉಂಟಾಗಿ ತೇಪೆ ಹಾಕಲಾಗದಂತೆ ಆಗಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ಮಾಜಿ ಪತ್ನಿ ಭಾರಿ ಮೊತ್ತದ ಜೀವನಾಂಶ ಕೇಳುವ ಮೂಲಕ ಮ್ಯಾಚೋ ಮ್ಯಾನ್ ಹೃತಿಕ್ ಗೆ ಶಾಕ್ ನೀಡಿದ್ದಾಳೆ.

ಮುಂಬೈನ ಗಲ್ಲಿಗಲ್ಲಿಗಳಲ್ಲಿ ಹಬ್ಬಿರುವ ಸುದ್ದಿಯ ಪ್ರಕಾರ ಸುಸಾನೆ ಸರಿ ಸುಮಾರು 400 ಕೋಟಿ ರು ಜೀವನಾಂಶ ಕೇಳಿದ್ದಾಳಂತೆ. ಈ ಬಗ್ಗೆ ಖಚಿತ ಮಾಹಿತಿ ಇನ್ನೂ ಹೊರಬಂದಿಲ್ಲವಾದ್ದರಿಂದ ಈಗಲೇ ಏನು ಹೇಳಲಾಗದು. ಹೃತಿಕ್ ಕೂಡಾ ಈಗ ಈದ್ ಸಂಭ್ರಮಾಚರಣೆಯಲ್ಲಿದ್ದಾರೆ.

"ನಮ್ಮಿಬ್ಬರ ನಡುವೆ ಗೌರವ ಮತ್ತು ಕರ್ತವ್ಯದ ಹೊಣೆ ಇದೆ. ಅದೇ ರೀತಿ ನಮ್ಮಿಬ್ಬರ ನಡುವೆ ಆಯ್ಕೆಗಳೂ ಇವೆ. ಈಗ ಉಳಿದಿರುವುದು ಮಕ್ಕಳನ್ನು ಇಬ್ಬರೂ ರಕ್ಷಿಸಿ ಅವರ ಬಗ್ಗೆ ಕಾಳಜಿವಹಿಸುವುದು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಸುಸಾನೆ ಈ ಮುಂಚೆ ಹೇಳಿದ್ದು ಗಮನಿಸಿದರೆ ಇಬ್ಬರು ಗಂಡು ಮಕ್ಕಳ ಪಾಲನೆ ಪೋಷಣೆಗೆ ಈ ಮೊತ್ತ ಕೇಳುತ್ತಿದ್ದೇನೆ ಎನ್ನಬಹುದಾಗಿದೆ.

Sussanne Khan Claims Rs 400 Crores From Hrithik Roshan?

ಡಿಸೆಂಬರ್ 20, 2000ರಲ್ಲಿ ಮದುವೆಯಾದ ಹೃತಿಕ್ ಹಾಗೂ ಸುಸಾನೆ ಅವರ ಮದುವೆ ಆರತಕ್ಷಣೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದು ನೆನಪಿರಬಹುದು. ಬಾಲ್ಯದ ಗೆಳತಿ ಜತೆ ವೈಭವೋಪೇತ ಮದುವೆ ಮಾಡಿಕೊಂಡ ಹೃತಿಕ್ ಸಂಸಾರದ ಜವಾಬ್ದಾರಿಯನ್ನು ಪತ್ನಿಗೆ ವಹಿಸಿ ತನ್ನ ಪಾಡಿಗೆ ಸಿನಿಮಾದಲ್ಲಿ ತೊಡಗಿಕೊಂಡಿದ್ದ.

ಯಾವಾಗ ಹೃತಿಕ್ ಬಾಳಿನಲ್ಲಿ ಕೈಟ್ಸ್ ಚಿತ್ರದ ನಾಯಕಿ ರೂಪದರ್ಶಿ ಬಾರ್ಬರಾ ಮೋರಿ ಎಂಟ್ರಿಕೊಟ್ಟರೋ ಅಲ್ಲಿಂದಲೇ ದಾಂಪತ್ಯದಲ್ಲಿ ಬಿರುಕು ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿತ್ತು. ನಂತರ ಬೇರೆ ಬೇರೆ ಕಾರಣ ಇಬ್ಬರ ನಡುವೆ ಭಾರಿ ಜಗಳ ಉಂಟಾಯಿತು. ಕ್ರಿಶ್ ಚಿತ್ರ ಸರಣಿ ಹಿಟ್ ಆದರೂ ಹೃತಿಕ್ ಮೆದುಳಿನ ಶಸ್ತ್ರ ಚಿಕಿತ್ಸೆ ನೋವಿನ ಜತೆಗೆ ಪತ್ನಿಯ ಜತೆ ಹೆಣಗಾಡಲು ಆಗದೆ ಸೋತಿದ್ದ. ಕೊನೆಗೆ ವಿವಾಹ ವಿಚ್ಛೇದನ ಬಿಟ್ಟರೆ ಬೇರೆ ದಾರಿ ಕಾಣಲಿಲ್ಲ. ಈಗ ನ್ಯಾಯ ಸಮ್ಮತವಾಗಿ ಸುಸಾನೆ ಜೀವನಾಂಶ ಕೇಳಿದ್ದಾಳೆ. ಸಿಗುವುದೋ ಬಿಡುವುದೋ ಗೊತ್ತಿಲ್ಲ. ಕಾದು ನೋಡಬೇಕಿದೆ.

English summary
Sussanne Khan Claims Rs 400 Crores From Hrithik Roshan?.Following their separation, actor Hrithik Roshan and Sussanne Khan recently filed a divorce case.
Please Wait while comments are loading...