twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ನಟಿ ಜಮುನಾ ಬಯೋಪಿಕ್‌ನಲ್ಲಿ ಮಿಲ್ಕಿ ಬ್ಯೂಟಿ?

    |

    ಖ್ಯಾತ ನಟಿ ಜಮುನಾ ಅಗಲಿಕೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್ ತಂದಿದೆ. ಒಂದ್ಕಾಲದಲ್ಲಿ ಎನ್‌ಟಿಆರ್, ಎಎನ್‌ಆರ್‌, ಡಾ. ರಾಜ್‌ಕುಮಾರ್‌ರಂತಹ ಸ್ಟಾರ್‌ ನಟರ ಜೊತೆ ನಟಿಸಿದ ನಟಿ ಜಮುನಾ ಸಿನಿರಸಿಕರ ಮನದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಇದೀಗ ನಟಿ ಜಮುನಾ ಬಯೋಪಿಕ್‌ ಬಗ್ಗೆ ಗುಸುಗುಸು ಶುರುವಾಗಿದೆ. ಚಿತ್ರರಂಗದಲ್ಲಿ ಬಯೋಪಿಕ್‌ಗಳಿಗೆ ಬರವಿಲ್ಲ. ಆ ಸಾಲಿಗೆ ಜಮುನಾ ಕಥೆ ಕೂಡ ಸೇರುತ್ತದೆ ಎನ್ನಲಾಗ್ತಿದೆ. ಬಹಳ ದಿನಗಳಿಂದ ಇಂತದೊಂದು ಮಾತು ಕೇಳಿಬರ್ತಿದೆ. ಈಗ ಅದು ಮತ್ತೆ ಮುನ್ನಲೆಗೆ ಬಂದಿದೆ.

    Tamannaah Bhatia approached for yesteryear actress Jamuna biopic

    ಹಂಪಿಯಲ್ಲಿ ಹುಟ್ಟಿ ಗುಂಟೂರಿನಲ್ಲಿ ಬೆಳೆದವರು. ತೆಲುಗು ಸಿನಿಮಾಗಳ ಮೂಲಕ ಹೆಚ್ಚು ಗುರ್ತಿಸಿಕೊಂಡಿದ್ದ ಜಮುನಾ ಕನ್ನಡ, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದರು. ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಜೊತೆ 2 ಚಿತ್ರಗಳಲ್ಲಿ ಮಿಂಚಿದ್ದು ವಿಶೇಷ. ಅದರಲ್ಲೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಸಾಕ್ಷಾತ್ಕಾರ' ಚಿತ್ರದಲ್ಲಿ ಜಮುನಾ ನಟನೆಯನ್ನು ಕನ್ನಡ ಸಿನಿರಸಿಕರು ಮರೆತ್ತಿಲ್ಲ. ಬರೀ ನಟನೆ ಮಾತ್ರವಲ್ಲದೇ ತಮ್ಮ ನೇರ ನಡೆ ನುಡಿಯಿಂದಲೂ ಅವರು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಕಪ್ಪು ಬಿಳುಪಿನ ಕಾಲದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಒಟ್ಟು 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಜಮುನಾ ರಾಜಕೀಯ ರಂಗಕ್ಕೂ ಎಂಟ್ರಿ ಕೊಟ್ಟಿದ್ದರು.

    Tamannaah Bhatia approached for yesteryear actress Jamuna biopic

    ಕಾಲಿವುಡ್‌ನಲ್ಲಿ ನಟಿ ಜಮುನಾ ಬಯೋಪಿಕ್ ಮಾಡುವುದಾಗಿ ಬಝ್ ಕ್ರಿಯೇಟ್ ಆಗಿದೆ. ಜಮುನಾ ಅವರ ಪಾತ್ರದಲ್ಲಿ ತಮನ್ನಾ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕಥೆ ಕೂಡ ಸಿದ್ಧವಾಗಿದೆಯಂತೆ. ತಮನ್ನಾ ಕೂಡ ಕಥೆ ಕೇಳಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಸಿಲ್ಕ್‌ ಸ್ಮಿತಾ ಬಯೋಪಿಕ್‌ನಲ್ಲಿ ವಿದ್ಯಾಬಾಲನ್, ಸಾವಿತ್ರಿ ಪಾತ್ರದಲ್ಲಿ ಕೀರ್ತಿ ಸುರೇಶ್ ಹಾಗೂ ಜಯಲಲಿತಾ ಪಾತ್ರದಲ್ಲಿ ಕಂಗನಾ ರಾಣಾವತ್ ನಟಿಸಿ ಮೋಡಿ ಮಾಡಿದ್ದರು. ಇದೀಗ ಜಮುನಾ ಆಗಿ ತಮನ್ನಾ ಬರ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

    Tamannaah Bhatia approached for yesteryear actress Jamuna biopic

    'ಗುಂಡಮ್ಮ ಕಥ', 'ಬಂಗಾರು ಪಾಪ', 'ದೊಂಗ ರಾಮುಡು', 'ಮಿಸ್ಸಮ್ಮ', 'ತೆನಾಲಿ ರಾಮಕೃಷ್ಣ', 'ಮಾ ಇಂಟಿ ಮಹಾಲಕ್ಷ್ಮಿ', 'ಶ್ರೀಕೃಷ್ಣ ತುಲಾಭಾರಂ' ಸೇರಿದಂತೆ ಹಲವು ತೆಲುಗು ಸಿನಿಮಾಗಳಲ್ಲಿ ಜಮುನಾ ನಟಿಸಿದ್ದರು. 'ಶ್ರೀಕೃಷ್ಣ ತುಲಾಭಾರಂ' ಚಿತ್ರದಲ್ಲಿ ಸತ್ಯಭಾಮೆ ಪಾತ್ರದಲ್ಲಿ ಆಕೆಯ ನಟನೆ ಮೋಡಿ ಮಾಡಿತ್ತು. ಎನ್‌ಟಿಆರ್ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರಕ್ಕೆ ಜೀವ ತುಂಬಿದ್ದರು. ಈ ಪಾತ್ರ ಎಷ್ಟರಮಟ್ಟಿಗೆ ಆಕೆಗೆ ಹೆಸರು ತಂದು ಕೊಟ್ಟಿತ್ತು ಅಂದ್ರೆ ಮುಂದೆ ತೆಲುಗು ಪ್ರೇಕ್ಷಕರ ಮನದಲ್ಲಿ ಸತ್ಯಭಾಮೆ ಆಗಿಯೇ ಉಳಿದುಬಿಟ್ಟರು. 1980ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. 1989ರಲ್ಲಿ ರಾಜಮಂಡ್ರಿ ಲೋಕಸಭಾ ಸದಸ್ಯೆಯಾಗಿ ಆಗಿ ಆಯ್ಕೆ ಆಗಿದ್ದರು. 1990ರಲ್ಲಿ ಜನತಾ ಪಕ್ಷದ ಪರ ನಟಿ ಜಮುನಾ ಪ್ರಚಾರ ಮಾಡಿದ್ದರು.

    ರಮ್ಯಾ- ನರೇಶ್ ಫ್ಯಾಮಿಲಿ ಹೈಡ್ರಾಮಾದಲ್ಲಿ ಭಾರೀ ಟ್ವಿಸ್ಟ್: 10 ಕೋಟಿ ರೂ.ಗೆ ಸೆಟ್ಲ್‌ಮೆಂಟ್?ರಮ್ಯಾ- ನರೇಶ್ ಫ್ಯಾಮಿಲಿ ಹೈಡ್ರಾಮಾದಲ್ಲಿ ಭಾರೀ ಟ್ವಿಸ್ಟ್: 10 ಕೋಟಿ ರೂ.ಗೆ ಸೆಟ್ಲ್‌ಮೆಂಟ್?

    English summary
    Tamannaah Bhatia approached for yesteryear actress Jamuna biopic. Veteran actress Jamuna passed away at her residence in Hyderabad on Friday. know more.
    Saturday, January 28, 2023, 16:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X