»   » ಉಪೇಂದ್ರ, ಕಮಲ್ ನಂತರ ಮತ್ತೋರ್ವ ನಟ ರಾಜಕೀಯಕ್ಕೆ.!

ಉಪೇಂದ್ರ, ಕಮಲ್ ನಂತರ ಮತ್ತೋರ್ವ ನಟ ರಾಜಕೀಯಕ್ಕೆ.!

Posted By:
Subscribe to Filmibeat Kannada

ಕನ್ನಡದ ಸೂಪರ್ ಉಪೇಂದ್ರ ಹಾಗೂ ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಇಬ್ಬರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಿದ್ದವಾಗುತ್ತಿದ್ದಾರೆ.

ಹೀಗಿರುವಾಗ, ಮತ್ತೋರ್ವ ನಟ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. ಹೌದು, ತೆಲುಗು ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರಾಜಕೀಯಕ್ಕೆ ಬರ್ತಾರೆ ಎಂಬ ಸುದ್ದಿಯನ್ನ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಉಪ್ಪಿ ಪಾರ್ಟಿಯ ಧ್ಯೇಯ ಮತ್ತು ಉದ್ದೇಶ ಬಿಡುಗಡೆ

Telugu actor Allu Arjun ready to enter politics

ಅಲ್ಲು ಅರ್ಜುನ್ ರಾಜಕೀಯಕ್ಕೆ ಬರುತ್ತಾರೆ ಎಂಬ ಪ್ರಶ್ನೆ ಹಲವು ದಿನಗಳಿಂದ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇತ್ತೀಚೆಗೆ ನಡೆದ ಪಾರ್ಟಿಯೊಂದರಲ್ಲಿ ಅಲ್ಲು ಅರ್ಜುನ್ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ.

ಕೆಪಿಜೆಪಿ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಇನ್ನೊಂದು ದೂರು.!

Telugu actor Allu Arjun ready to enter politics

ಸದ್ಯ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಎರಡು ರಾಜ್ಯಗಳಲ್ಲಿನ ರಾಜಕೀಯ ಪರಿಸ್ಥಿತಿಗಳನ್ನು ಗಮನಿಸುತ್ತಿರುವ ನಟ, ಸೂಕ್ತ ಸಂದರ್ಭದಲ್ಲಿ ರಾಜಕೀಯಕ್ಕೆ ಪ್ರವೇಶ ನೀಡುವ ಕುರಿತು ಚಿಂತನೆ ನಡೆಸಿದ್ದಾರಂತೆ. ವಿಶೇಷ ಅಂದ್ರೆ 40ನೇ ವಯಸ್ಸಿನ ನಂತರವೇ ರಾಜಕೀಯಕ್ಕೆ ಬರ್ತಾರೆ ಎಂದು ಮೂಲಗಳು ತಿಳಿಸಿವೆ.

ಈಗ ಅಲ್ಲು ಅರ್ಜುನ್ ಗೆ 34 ವರ್ಷ. ಸತತ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯ, 'ನಾ ಪೇರು ಸೂರ್ಯ' ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ.

English summary
Stylish Star Allu Arjun who has won millions of hearts with his wonderful performance, is planning to test his luck in politics.ತೆಲುಗು ನಟ ಅಲ್ಲು ಅರ್ಜುನ್ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada