For Quick Alerts
  ALLOW NOTIFICATIONS  
  For Daily Alerts

  AMR ರಮೇಶ್ ಚಿತ್ರಕ್ಕಾಗಿ ಕನ್ನಡಕ್ಕೆ ಬರ್ತಿದ್ದಾರೆ 'ಬಲ್ಲಾಳದೇವ'!

  By Bharath Kumar
  |

  'ಬಾಹುಬಲಿ' ಚಿತ್ರದ ಮೂಲಕ ಜಗತ್ತಿನಾದ್ಯಂತ ಅಬ್ಬರಿಸುತ್ತಿರುವ ರಾಣಾ ದಗ್ಗುಬಾಟಿ ಈಗ ಕನ್ನಡಕ್ಕೆ ಬರ್ತಿದ್ದಾರೆ. AMR ರಮೇಶ್ ನಿರ್ದೇಶನದ ಹೊಸ ಚಿತ್ರಕ್ಕಾಗಿ ಈ ತೆಲುಗು ನಟ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

  'ಸೈನೈಡ್', 'ಅಟ್ಟಹಾಸ', 'ಗೇಮ್' ಅಂತಹ ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾಗಳನ್ನ ಮಾಡಿರುವ ಎ.ಎಂ.ಆರ್ ರಮೇಶ್ ಈಗ ಮತ್ತೊಂದು ಮಿಸ್ಟರಿ ಕಥೆಯನ್ನ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ 'ಬಾಹುಬಲಿ' ಖ್ಯಾತಿಯ ಬಲ್ಲಳಾದೇವನನ್ನ ಕರೆ ತರುತ್ತಿದ್ದಾರೆ.['AMR ರಮೇಶ್'ಗೆ ಜೀವ ಬೆದರಿಕೆ: ಶಿವಣ್ಣ ಅಭಿಮಾನಿಗಳು ಹೀಗೂ ಮಾಡ್ತಾರ?]

  ಅಷ್ಟಕ್ಕೂ, ಎ.ಎಂ.ಆರ್ ರಮೇಶ್ ಅವರ ಮುಂದಿನ ಚಿತ್ರ ಯಾವುದು? ರಾಣಾ ಅವರ ಪಾತ್ರವೇನು ಎಂಬುದು ಮುಂದಿದೆ ಓದಿ....

  AMR ರಮೇಶ್ ಅವರ 'ಆಸ್ಫೋಟ'ದಲ್ಲಿ ರಾಣಾ!

  AMR ರಮೇಶ್ ಅವರ 'ಆಸ್ಫೋಟ'ದಲ್ಲಿ ರಾಣಾ!

  AMR ರಮೇಶ್ ನಿರ್ದೇಶನ ಮಾಡುತ್ತಿರುವ ಬಹುಭಾಷಾ ಚಿತ್ರ 'ಆಸ್ಫೋಟ'ದಲ್ಲಿ ರಾಣಾ ದಗ್ಗುಬಾಟಿ ಅಭಿನಯಿಸುತ್ತಿದ್ದಾರೆ.['ಸೈನೈಡ್' ನಿರ್ದೇಶಕರ ಅಡ್ಡಾದಲ್ಲಿ ತಯಾರಾಗುತ್ತಿದೆ ಹೊಸ ಬಾಂಬ್.!]

  ಸಿ.ಬಿ.ಐ ಅಧಿಕಾರಿ ಪಾತ್ರದಲ್ಲಿ ರಾಣಾ!

  ಸಿ.ಬಿ.ಐ ಅಧಿಕಾರಿ ಪಾತ್ರದಲ್ಲಿ ರಾಣಾ!

  'ಆಸ್ಫೋಟ' ಚಿತ್ರದಲ್ಲಿ ರಾಣಾ ಅವರದ್ದು ಸಿ.ಬಿ.ಐ ಅಧಿಕಾರಿ ಪಾತ್ರ. ತಮಿಳುನಾಡಿನ ಡಿ.ಆರ್. ಕಾರ್ತಿಕೇಯನ್ ಅವರ ಪಾತ್ರದಲ್ಲಿ ದಗ್ಗುಬಾಟಿ ಬಣ್ಣ ಹಚ್ಚಲಿದ್ದಾರಂತೆ.[ರಾಜೀವ್ ಗಾಂಧಿ ಹತ್ಯೆ ತನಿಖೆಯಲ್ಲಿ ದರ್ಶನ್ ಕೈವಾಡ ಇಲ್ವಂತೆ]

  ಸಿಬಿಐ ಕಾರ್ತಿಕೇಯನ್ ಯಾರು?

  ಸಿಬಿಐ ಕಾರ್ತಿಕೇಯನ್ ಯಾರು?

  ಸಿ.ಬಿ.ಐ ಕಾರ್ತಿಕೇಯನ್ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖಾಧಿಕಾರಿ. ಈ ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ್ದ ಪ್ರಮುಖ ಪೊಲೀಸ್ ಆಫೀಸರ್. ಇವರು ಕರ್ನಾಟಕ ಹಾಗೂ ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 'ಆಸ್ಫೋಟ' ಚಿತ್ರದಲ್ಲಿ ಇವರ ಪಾತ್ರದಲ್ಲಿ ರಾಣಾ ಕಾಣಿಸಿಕೊಳ್ಳಲಿದ್ದಾರೆ.

  ರಾಜೀವ್ ಗಾಂಧಿ ಹತ್ಯೆಯ 'ಆಸ್ಫೋಟ'!

  ರಾಜೀವ್ ಗಾಂಧಿ ಹತ್ಯೆಯ 'ಆಸ್ಫೋಟ'!

  ಅಂದ್ಹಾಗೆ, 'ಆಸ್ಫೋಟ' ಸಿನಿಮಾ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಕುರಿತು ನಿರ್ಮಾಣವಾಗತ್ತಿದೆ. ಈ ಚಿತ್ರವನ್ನ AMR ರಮೇಶ್ ನಿರ್ದೇಶನ ಮಾಡುತ್ತಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗ್ತಿದೆ.

  ಅಧಿಕೃತ ಘೋಷಣೆಯೊಂದೆ ಬಾಕಿ

  ಅಧಿಕೃತ ಘೋಷಣೆಯೊಂದೆ ಬಾಕಿ

  ರಾಣಾ ದಗ್ಗುಬಾಟಿ ಚಿತ್ರದಲ್ಲಿ ಅಭಿನಯಿಸುತ್ತಿರುವ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿಯಿದೆ. ಮೂಲಗಳ ಪ್ರಕಾರ ನಿರ್ದೇಶಕ ರಮೇಶ್ ಹಾಗೂ ರಾಣಾ ಅವರು ಬೇಟಿ ಆಗಿದ್ದು, ಕಥೆ ಕೂಡ ಹೇಳಿದ್ದಾರಂತೆ. ಕಥೆ ಕೇಳಿ ಥ್ರಿಲ್ ಆಗಿರುವ ರಾಣಾ ಒಪ್ಪಿಗೆ ಸೂಚಿಸಿದ್ದಾರಂತೆ. ಈ ಮೂಲಕ ಎಲ್ಲ ಅಂದುಕೊಂಡಂತೆ ಆದರೆ ಬಾಹುಬಲಿಯ ವಿಲನ್ ಕನ್ನಡದ ಚಿತ್ರದಲ್ಲಿ 'ಆಸ್ಫೋಟಿ'ವುದು ಪಕ್ಕಾ.

  English summary
  Telugu Actor Rana Daggubatti to make Sandalwood Debut through Kannada Movie 'Aspota' directed by AMR Ramesh. Rana Daggubati will play CBI officer DR Karthikeyan's Character in The Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X