For Quick Alerts
  ALLOW NOTIFICATIONS  
  For Daily Alerts

  'ಅರುಂಧತಿ', 'ನಾಗರಹಾವು' ಆಡಿಯೋ ರಿಲೀಸ್ ಮಾಡ್ತಾರಂತೆ ಹೌದಾ?

  By Suneetha
  |

  ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ ದೂದ್ ಪೇಡಾ ದಿಗಂತ್ ಮತ್ತು ಲಕ್ಕಿ ಸ್ಟಾರ್ ರಮ್ಯಾ ಅವರ ಹೊಸ ಪ್ರಾಜೆಕ್ಟ್ ಗೆ 'ನಾಗರಹಾವು' ಎಂದು ಹೆಸರಿಡಲಾಗಿದ್ದು, ಈ ಚಿತ್ರದಲ್ಲಿ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಇದೇ ಫಿಲ್ಮಿಬೀಟಲ್ಲಿ ನಾವು ನಿಮಗೆ ಹೇಳಿದ್ವಿ.

  ಅಂದಹಾಗೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಜನವರಿ ಕೊನೆಯ ತಿಂಗಳಿನಲ್ಲಿ ನಡೆಯಲಿದ್ದು, ಬಿಡುಗಡೆ ಕಾರ್ಯಕ್ರಮವನ್ನು ತೆಲುಗು-ತಮಿಳಿನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಮಾಡಲಿದ್ದಾರೆ.[ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ 'ನಾಗರಹಾವು'!]

  ತೆಲುಗಿನಲ್ಲಿ ಹಿಟ್ ಸಿನಿಮಾ 'ಅರುಂಧತಿ' ಮೂಲಕ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಬ್ರೇಕ್ ನೀಡಿದ್ದ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ತಮ್ಮ 'ನಾಗರಹಾವು' ಚಿತ್ರದ ಆಡಿಯೋ ಬಿಡುಗಡೆಯನ್ನು ಅನುಷ್ಕಾರಿಂದ ಮಾಡಿಸಲಿದ್ದಾರೆ.

  ಡಿಸೆಂಬರ್ 30 ಸ್ಯಾಂಡಲ್ ವುಡ್ ನ ಸಾಹಸಸಿಂಹ ವಿಷ್ಣುವರ್ಧನ್ ಅವರ ಪುಣ್ಯ ತಿಥಿಯಂದೇ ಚಿತ್ರದ ಬೃಹತ್ ಪೋಸ್ಟರ್ ಅನ್ನು 'ನಾಗರಹಾವು' ಚಿತ್ರತಂಡ ಬಿಡುಗಡೆ ಮಾಡಲಿದ್ದಾರೆ.['ನಾಗರಹಾವು' ನಲ್ಲಿ ದಿಗಿ ಮತ್ತು ಲಕ್ಕಿ ಸ್ಟಾರ್ ರಮ್ಯಾ ಮೋಡಿ]

  ಸ್ಯಾಂಡಲ್ ವುಡ್ ಸಿನಿ ಕ್ಷೇತ್ರದಲ್ಲಿ 'ನಾಗರಹಾವು' ಎಂಬ ಹೆಸರಿನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಡಾ.ವಿಷ್ಣುವರ್ಧನ್, ಉಪೇಂದ್ರ ಅವರ 'ನಾಗರಹಾವು' ಹಿಟ್ ಆದಂತೆ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ ಕೋಡಿ ರಾಮಕೃಷ್ಣ ಅವರ 'ನಾಗರಹಾವು' ಗೆಲುವು ಸಾಧಿಸುತ್ತಾ ಅಂತ ಕಾದು ನೋಡೋಣ.

  English summary
  Diganth and Ramya starrer, helmed by ace Telugu director Kodi Ramakrishnna, has finally got its title, 'Nagarhavu', unveiled at an event last week. The latest buzz is that Actress Anushka Shetty will launch the audio of the film at the end if January.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X