For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಬಿಡುಗಡೆಗೆ ಡೆಡ್ ಲೈನ್.!

  By Bharath Kumar
  |

  ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂಬುದನ್ನ ಅಭಿಮಾನಿ ಬಳಗ ಕಾಯುತ್ತಿದೆ.

  ಸದ್ಯದ ಮಾಹಿತಿ ಪ್ರಕಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 'ವಿಲನ್' ಸಿನಿಮಾ ಬರಬಹುದು ಎನ್ನಲಾಗಿದೆ. ಹೀಗಿರುವಾಗ, ಶತಾಯಗತಾಯ ಈ ಸಿನಿಮಾವನ್ನ ಅಂದುಕೊಂಡಿದ್ದ ದಿನಕ್ಕೆ ತೆರೆಮೇಲೆ ತರಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಅದಕ್ಕಾಗಿ ಡೆಡ್ ಲೈನ್ ಕೂಡ ಫಿಕ್ಸ್ ಮಾಡಿದೆಯಂತೆ.

  ಹೌದು, 'ದಿ ವಿಲನ್' ಸಿನಿಮಾ ಆಗಸ್ಟ್ 24 ರಂದು ರಿಲೀಸ್ ಮಾಡುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಲಾಗುತ್ತಿದೆ.

  ಸದ್ಯ, ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರ ಟಾಕಿ ಪೋಷನ್ ಚಿತ್ರೀಕರಣ ಮುಗಿಸಿದ್ದು, ಕೇವಲ ಒಂದು ಹಾಡು ಮಾತ್ರ ಬಾಕಿಯಿದೆ. ಈ ಹಾಡಿಗಾಗಿ ಈಗ ಆಮಿ ಜಾಕ್ಸನ್ ಬೆಂಗಳೂರಿಗೆ ಬಂದಿದ್ದಾರೆ. ಸುದೀಪ್ ಮತ್ತು ಆಮಿ ಜಾಕ್ಸನ್ ಈ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದು, ಈ ಹಾಡಿನೊಂದಿಗೆ 'ದಿ ವಿಲನ್' ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಂತೆ.

  ನುರಿತ ತಂತ್ರಜ್ಞರು ಪೋಸ್ಟ್ ಪ್ರೊಡಕ್ಷನ್ ಕಲ್ಲಿ ಕೆಲಸ ಮಾಡುತ್ತಿದ್ದು, ಈ ತಿಂಗಳಲ್ಲಿ ನಾರ್ಮಲ್ ಕಾಪಿ ರೆಡಿ ಮಾಡುವ ಉದ್ದೇಶ ಹೊಂದಿದ್ದಾರೆ. ಅದಾದ ಬಳಿಕ ಸೆನ್ಸಾರ್ ಎದುರು ಚಿತ್ರ ಹೋಗಲಿದೆ.

  ಹೀಗಾಗಿ, ದಕ್ಷಿಣ ಭಾರತದಲ್ಲಿ ಹೆಚ್ಚು ಕುತೂಹಲ, ನಿರೀಕ್ಷೆ ಮೂಡಿಸಿರುವ 'ದಿ ವಿಲನ್' ಆಗಸ್ಟ್ ನಲ್ಲಿ ಬಹುತೇಕ ಖಚಿತ. ಇನ್ನುಳಿದಂತೆ ನಿರ್ದೇಶಕ ಪ್ರೇಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸಿ.ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್ ಜೊತೆಯಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

  English summary
  Kiccha Sudeep and Shiva rajkumar starrer The Villain Shooting to wrap up on Sunday midnight, and director Prem aims for August 24 release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X