»   » ತಾರೆ ತ್ರಿಷಾ ಕೃಷ್ಣನ್ ಸಂಭಾವನೆಯಲ್ಲಿ ಇಳಿಕೆ ಇಲ್ಲ

ತಾರೆ ತ್ರಿಷಾ ಕೃಷ್ಣನ್ ಸಂಭಾವನೆಯಲ್ಲಿ ಇಳಿಕೆ ಇಲ್ಲ

Posted By:
Subscribe to Filmibeat Kannada

ದಕ್ಷಿಣದ ಕೃಷ್ಣ ಸುಂದರಿ ತ್ರಿಷಾ ಕೃಷ್ಣನ್ ತಮ್ಮ ಸಂಭಾವನೆಯಲ್ಲಿ ನಯಾಪೈಸೆಯಷ್ಟೂ ಇಳಿಸಿಕೊಳ್ಳುತ್ತಿಲ್ಲವಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ 'ಪವರ್ ಸ್ಟಾರ್' ಚಿತ್ರದಲ್ಲಿ ಅಭಿನಯಿಸುತ್ತಿರುವ ತ್ರಿಷಾ ಅವರ ರೇಟು ಕೇಳಿದ ನಿರ್ಮಾಪಕರು ಕಕ್ಕಾಬಿಕ್ಕಿಯಾಗುತ್ತಿದ್ದಾರಂತೆ.

ಮೂಲಗಳ ಪ್ರಕಾರ ತ್ರಿಷಾ ಅವರು ಸುಮಾರು ರು.1 ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಆದರೆ ನಿರ್ಮಾಕರು ಮಾತ್ರ ಅಷ್ಟೆಲ್ಲಾ ಆಗಲ್ಲ ಎಂದು ಚೌಕಾಸಿ ಮಾಡಿ ಒಂದು ರೇಟಿಗೆ ಒಪ್ಪಿಸಿದ್ದಾರಂತೆ. ಇದು ತೆಲುಗು ಚಿತ್ರವೊಂದಕ್ಕೆ ತ್ರಿಷಾ ಪಡೆಯುತ್ತಿರುವ ಸಂಭಾವನೆಯ ಬಾಬತ್ತು. [ಪುನೀತ್ ಜತೆ ಸ್ಟೆಪ್ ಹಾಕಿದ ಮೋಹಕ ತಾರೆ ತ್ರಿಷಾ]


ಒಟ್ಟಾರೆಯಾಗಿ ತ್ರಿಷಾ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಮುಂಚಿನಷ್ಟು ಸದ್ದು ಮಾಡುತ್ತಿಲ್ಲ. ಹಾಗಾಗಿ ಸಂಭಾವನೆಯಲ್ಲೂ ಇಳಿಕೆಯಾಗಿದೆ. ಆದರೆ ತ್ರಿಷಾ ಮಾತ್ರ ತಾನಿನ್ನೂ ಹಾಟ್ ಫೇವರಿಟ್ ಎಂಬ ಭ್ರಮೆಯಲ್ಲೇ ತೇಲಾಡುತ್ತಿದ್ದಾರಂತೆ. [ದಕ್ಷಿಣ ಭಾರತದ ಹೆಚ್ಚು ಸಂಭಾವನೆ ಗಳಿಸುವ ನಾಯಕರು]

ಸದ್ಯಕ್ಕೆ ತ್ರಿಷಾ ಅವರ ವಯಸ್ಸು 30 ಪ್ಲಸ್. ಒಂದು ಕಡೆ ಮದುವೆ ಯಾವಾಗ ಎಂಬ ಯೋಚನೆ, ಇನ್ನೊಂದು ಕಡೆ ವೃತ್ತಿ ಬದುಕಿನ ಗ್ರಾಫು ನಿಧಾನಕ್ಕೆ ತಳಕಚ್ಚುತ್ತಿರುವ ಸಮಯ. ಈ ಎರಡು ವಿಚಾರಗಳಲ್ಲಿ ತ್ರಿಷಾ ಬ್ಯಾಲೆನ್ಸ್ ಮಾಡುತ್ತಿದ್ದಾರೆ ಎಂಬುದು ಸದ್ಯದ ಚಿತ್ರಣ.

English summary
There has come a report that states that actress Trisha Krishnan has increased her remuneration to an unbelievable sum of one crore rupees. The report adds that, the actress is heard of demanding such a whooping sum from the filmmakers who have contacted for movie offers. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada