For Quick Alerts
  ALLOW NOTIFICATIONS  
  For Daily Alerts

  ರಾಣಾ ಕೈಹಿಡಿಯಲಿರುವ ಕೃಷ್ಣ ಸುಂದರಿ ತ್ರಿಷಾ ಕೃಷ್ಣನ್

  By Rajendra
  |
  ಮೋಹಕ ಬೆಡಗಿ ತ್ರಿಷಾ ಕೃಷ್ಣನ್ ಹಸೆಮಣೆ ಮೇಲೆ ಕೂರಲು ಸಿದ್ಧವಾಗಿದ್ದಾರೆ. ಮುಂದಿನ ವರ್ಷ ತ್ರಿಷಾ ಗೃಹಸ್ಥಾಶ್ರಮ ಪ್ರವೇಶಿಸಲಿದ್ದಾರೆ. ತೆಲುಗಿನ ಆಜಾನುಬಾಹು ನಟ ರಾಣಾ ದಗ್ಗುಬಾಟಿ ಕೈಹಿಡಿಯಲಿದ್ದಾರೆ ತ್ರಿಷಾ. ಇವರಿಬ್ಬರು ಕದ್ದುಮುಚ್ಚಿ ಓಡಾಡುತ್ತಿದ್ದ ಬಗ್ಗೆ ಆಗಿಂದಾಗ್ಗೆ ಸುದ್ದಿಯಾಗುತ್ತಿತ್ತು.

  ಅಂತಹ ಸಂದರ್ಭಗಳಲ್ಲೆಲ್ಲಾ ಇಬ್ಬರೂ ಇದೆಲ್ಲಾ ಕೇವಲ ಗಾಳಿಸುದ್ದಿ ಅಷ್ಟೇ ಎನ್ನುತ್ತಿದ್ದರು. ಈಗ ಇವರಿಬ್ಬರ ಮದುವೆ ವಿಚಾರ ಅಧಿಕೃತವಾಗಿ ಪ್ರಕಟವಾಗದಿದ್ದರೂ ಈ ಬಗ್ಗೆ ಸುದ್ದಿ ಮಾತ್ರ ದಟ್ಟವಾಗಿ ಹಬ್ಬಿದೆ. 2013ರ ಫೆಬ್ರವರಿಗೆ ನಿಶ್ಚಿತಾರ್ಥ ಹಾಗೂ ಅದೇ ವರ್ಷ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎನ್ನುತ್ತವೆ ಮೂಲಗಳು.

  ಕಳೆದ ಹತ್ತು ವರ್ಷಗಳಿಂದ ಕದ್ದುಮುಚ್ಚಿ ತ್ರಿಷಾ ಹಾಗೂ ರಾಣಾ ಜೂಟಾಟ ಆಡುತ್ತಿದ್ದರು. ಕಳೆದ ವರ್ಷ ಗೋವಾದಲ್ಲಿ ಇಬ್ಬರೂ ಹೊಸ ವರ್ಷದ ಸಂಭ್ರಮಾಚರಣೆ ಜೊತೆಯಾಗಿ ಆಚರಿಸಿಕೊಂಡಾಗಲೇ ಇವರಿಬ್ಬರ ನಡುವಿನ ಕುಚ್ ಕುಚ್ ವ್ಯವಹಾರ ಬಯಲಾಗಿತ್ತು.

  ಕೆಲದಿನಗಳ ಹಿಂದೆ ತ್ರಿಷಾ ಹಾಗೂ ರಾಣಾ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಕಾರಣವಾಗಿರುವುದು ಬಾಲಿವುಡ್ನ ಮತ್ತೊಬ್ಬ ಕೃಷ್ಣಸುಂದರಿ ಬಿಪಾಶಾ ಬಸು. ಈಕೆಗೆ ರಾಣಾ ಹತ್ತಿರವಾಗಿದ್ದೇ ತ್ರಿಷಾ ದೂರಸರಿಯಲು ಕಾರಣ ಎನ್ನಲಾಗಿತ್ತು. ಹೆಚ್ಚಾಗಿ ಮುಂಬೈನಲ್ಲೇ ಕಾಲ ಕಳೆಯುತ್ತಿದ್ದ ರಾಣಾ ಬಗ್ಗೆ ಹೈದರಾಬಾದಿನಲ್ಲಿದ್ದ ತ್ರಿಷಾ ಅಲ್ಲಿಂದಲೇ ಟೂ ಬಿಟ್ಟಿದ್ದಳು.

  ರಾಣಾ ಹೆಚ್ಚಾಗಿ ಹಿಂದಿ ಚಿತ್ರಗಳಲ್ಲಿ ತೊಡಗಿಕೊಂಡದ್ದು ಹೈದರಾಬಾದಿಗೆ ದೂರವಾಗಿದ್ದು ಇಬ್ಬರ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿತ್ತು. ಏತನ್ಮಧ್ಯೆ ತ್ರಿಷಾ ಬಾಲಿವುಡ್ ಕನಸು ನುಚ್ಚುನೂರಾಯಿತು. ಆಕೆ ಅಭಿನಯದ ಬಾಲಿವುಡ್ ಚಿತ್ರ 'ಕಠಾ ಮೀಠಾ' ಮಕಾಡೆ ಮಲಗಿತು. ತ್ರಿಷಾಗೆ ಬಾಲಿವುಡ್ ಬಾಗಿಲು ಬಂದ್ ಆಯಿತು. ಈಗ ಇಬ್ಬರೂ ಮದುವೆ ಮೂಲಕ ಒಂದಾಗುತ್ತಿದ್ದಾರೆ. (ಏಜೆನ್ಸೀಸ್)

  English summary
  Actress Trisha Krishnan who recently told a magazine that there is a special person in her life, has repeatedly denied the rumours, which claimed that she was dating Telugu actor Rana Daggubati. But gossip mongers continue to say that they are in love and planning to marry next year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X