»   » 'ಬಿಗ್ ಬಾಸ್' ಮನೆ ಕದ ತಟ್ಟುತ್ತಾರಾ ಟಿವಿ 9 ರೆಹಮಾನ್?

'ಬಿಗ್ ಬಾಸ್' ಮನೆ ಕದ ತಟ್ಟುತ್ತಾರಾ ಟಿವಿ 9 ರೆಹಮಾನ್?

Posted By: ಹರಾ
Subscribe to Filmibeat Kannada

'ಬಿಗ್ ಬಾಸ್-3' ಶುರುವಾಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಯಾರ್ಯಾರು ಇರಲಿದ್ದಾರೆ ಅನ್ನುವ ಬಗ್ಗೆ ಊಹಾಪೋಹಗಳು ಸಿಕ್ಕಾಪಟ್ಟೆ ಹರಿದಾಡುತ್ತಿವೆ.

ಈಗಾಗಲೇ ರಕ್ಷಿತ್ ಶೆಟ್ಟಿ, ಸತೀಶ್ ನೀನಾಸಂ, ಸೂಪರ್ ಸ್ಟಾರ್ ಜೆ.ಕೆ ಸೇರಿದಂತೆ ಹಲವರು 'ಬಿಗ್ ಬಾಸ್' ಮನೆ ಕಡೆ ತಲೆ ಹಾಕಲ್ಲ ಅಂತ ಹೇಳಿದ್ದು ಆಗಿದೆ. ಹಾಗಾದ್ರೆ, ಇನ್ಯಾರು ಇರಲಿದ್ದಾರೆ ಅನ್ನುವ ಪ್ರಶ್ನೆಗೆ ಕೆಲವರು ರೆಹಮಾನ್ ಹಸೀಬ್ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. [ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

TV9 Kannada Anchor Rahman Haseeb to participate in Bigg Boss-3?

ಕನ್ನಡದ ಖ್ಯಾತ ಸುದ್ದಿ ವಾಹಿನಿ 'ಟಿವಿ 9 ಕನ್ನಡ'ದ ಸ್ಟಾರ್ ಆಂಕರ್ ರೆಹಮಾನ್ ಹಸೀಬ್. ಟಿವಿ 9 ಕನ್ನಡ ಚಾನೆಲ್ ಶುರುವಾದಾಗಿನಿಂದಲೂ ಕನ್ನಡಿಗರ ಮನೆ-ಮನದಲ್ಲಿ ಗುರುತಿಸಿಕೊಂಡಿದ್ದ ರೆಹಮಾನ್ ಇತ್ತೀಚೆಗಷ್ಟೆ ಟಿವಿ9 ವಾಹಿನಿಗೆ ರಾಜೀನಾಮೆ ಸಲ್ಲಿಸಿದರು.

ಇದಕ್ಕೆ ಕಾರಣ 'ಬಿಗ್ ಬಾಸ್' ರಿಯಾಲಿಟಿ ಶೋ ಅಂತ ಸುದ್ದಿ ವಾಹಿನಿಗಳ ವಲಯದಲ್ಲಿ ಗುಲ್ಲೆದ್ದಿದೆ. ರೆಹಮಾನ್ ಆಪ್ತರು ಹೇಳುವ ಪ್ರಕಾರ ಮನರಂಜನಾ ಕಾರ್ಯಕ್ರಮಗಳು ಮತ್ತು ಸಿನಿಮಾದತ್ತ ಅವರು ಒಲವು ತೋರಿಸಿದ್ದಾರಂತೆ. ಹೀಗಾಗಿ ಕಲರ್ಸ್ ಚಾನೆಲ್ ಕಡೆ ರೆಹಮಾನ್ ಮುಖ ಮಾಡಿದ್ದಾರಂತೆ.

'ಬಿಗ್ ಬಾಸ್' ಸ್ಪರ್ಧಿಗಳ ಲಿಸ್ಟ್ ನಲ್ಲಿ ಕಿರುತೆರೆಯ ನಿರೂಪಕರ ಬಳಗದಿಂದ ಈ ಹಿಂದೆ ಶೀತಲ್ ಶೆಟ್ಟಿ ಮತ್ತು ರಾಧಾ ಹಿರೇಗೌಡರ್ ಹೆಸರುಗಳು ಕೇಳಿ ಬಂದಿತ್ತು. ಇದೀಗ ರೆಹಮಾನ್ ಹಸೀಬ್ ಹೆಸರು ಓಡಾಡುತ್ತಿದೆ. [ಅಕ್ಟೋಬರ್ 25 ರಿಂದ, 'ಬಿಗ್ ಬಾಸ್ 3' ನೋಡಿ ಸ್ವಾಮಿ]

'ಬಿಗ್ ಬಾಸ್' ಮನೆಯಲ್ಲಿ ರೆಹಮಾನ್ ಇರ್ತಾರೋ, ಇಲ್ವೋ ಅಕ್ಟೋಬರ್ 25 ರಂದು ಗೊತ್ತಾಗಲಿದೆ. ಯಾಕಂದ್ರೆ, 'ಬಿಗ್ ಬಾಸ್-3' ಪ್ರೀಮಿಯರ್ ಇರುವುದು ಅವತ್ತೆ. (Photo courtesy : Rahman Haseeb facebook)

English summary
According to the grapevine, TV9 Kannada Anchor Rahman Haseeb will participate in Bigg Boss Kannada season 3. But it is not confirmed yet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada