»   » ಶೀರ್ಷಿಕೆ ವಿವಾದಗಳ 'ದರ್ಬಾರ್' ಹಿಂದೆ ದೊಡ್ಡ ಕೈಗಳು

ಶೀರ್ಷಿಕೆ ವಿವಾದಗಳ 'ದರ್ಬಾರ್' ಹಿಂದೆ ದೊಡ್ಡ ಕೈಗಳು

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಸಿನಿಮಾಗಳಲ್ಲಿ ವಿವಾದಗಳು ಶುರುವಾಗೋದು ಚಿತ್ರದ ಆರಂಭದಿಂದಾನೇ, ಅಂದರೆ ಚಿತ್ರಕ್ಕೊಂದು ಟೈಟಲ್ ಇಟ್ಟಾಗಿನಿಂದ. ಟೈಟಲ್ ನಲ್ಲೇ ಏನಾದ್ರೂ ವಿಭಿನ್ನವಾಗಿರೋದನ್ನ ಹೇಳೋಕೆ ಹೊರಡೋ ಚಿತ್ರತಂಡಗಳು ಆರಂಭದಲ್ಲೇ ಅವಾಂತರಕ್ಕೆ ಆಹ್ವಾನ ನೀಡುತ್ತವೆ.

ಸ್ಟಾರ್ ಸಿನಿಮಾಗಳಿಂದ ಶುರುವಾಗಿ ಸಣ್ಣಪುಟ್ಟ ಸಿನಿಮಾಗಳವರೆಗೂ ಯಾವ ಸಿನಿಮಾ ಕೂಡ ವಿವಾದದಿಂದ ಹೊರತಾಗಿಲ್ಲ. ಆದರೆ ಈ ವಿವಾದದ ಮೂಲ ಇರೋದು ವಾಣಿಜ್ಯ ಮಂಡಳಿಯಲ್ಲೇ ಅನ್ನೋ ಅನುಮಾನವೂ ವ್ಯಕ್ತವಾಗ್ತಿದೆ.

ಇಂಗ್ಲೀಷ್ ನಲ್ಲಿ ಟೈಟಲ್ ಕೊಡೋದಿಲ್ಲ ಅಂತ ನಿರ್ಧಾರ ಮಾಡಿದ್ದ ವಾಣಿಜ್ಯ ಮಂಡಳಿ ಈಗ ಮತ್ತೆ ಇಂಗ್ಲೀಷ್ ಪದದ ಟೈಟಲ್ ಕೊಡೋದು ಸಾಮಾನ್ಯವಾಗ್ತಿದೆ ಅಂತ ಕನ್ನಡ ಪ್ರೇಮಿಗಳು ದೂರುತ್ತಿದ್ದಾರೆ. [ಪಂಗನಾಮ ಎರಡು ವೈಟು ಒಂದು ರೆಡ್ಡು ವಿವಾದ]

ಆದರೆ ಸಿನಿಮಾ ಶೀರ್ಷಿಕೆಯನ್ನ ಕೊಡೋ ವಾಣಿಜ್ಯ ಮಂಡಳಿಯ ಮಂದಿ ತಮಗೆ ಬೇಕಾದವರಿಗೆ ಕೇಳಿದ ಟೈಟಲ್ ಗಳನ್ನ ಕೊಡ್ತಾರೆ ಉಳಿದವರಿಗೆ ಉಂಡೆನಾಮ ಅನ್ನೋದು ಗಾಂಧಿನಗರದ ಒಳ ರಾಜಕೀಯ ಅರಿತವರ ಮಾತು.

ಒಟ್ಟಾರೆ ಟೈಟಲ್ ಕಿತಾಪತಿಯಿಂದ ಒಂದಷ್ಟು ಸಿನಿಮಾಗಳು ಒದ್ದಾಡ್ತಿರೋದಂತೂ ಸತ್ಯ. ಆ ಸಿನಿಮಾಗಳ್ಯಾವುವು? ಒಳರಾಜಕೀಯ ಏನು? ಅನ್ನೋ ಮಾಹಿತಿ ಕೇವಲ ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾದಲ್ಲಿ ಮಾತ್ರ. ಸ್ಲೈಡ್ ನಲ್ಲಿ ಓದಿ ರೋಚಕ ಮಾಹಿತಿ.

ಸ್ಟೈಲ್ ಕಿಂಗ್ ಓಕೆ ಆದ್ರೆ ಕಿಂಗ್ ಯಾಕೆ?

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸ್ಟೈಲ್ ಕಿಂಗ್' ಸಿನಿಮಾ ಶೂಟಿಂಗ್ ಶುರು ಮಾಡಿದೆ. ಆದರೆ ಈಗ ಕಿಂಗ್ ಅನ್ನೋ ಟೈಟಲ್ ಕೊಡಿ ಅಂತ ಚಿತ್ರತಂಡವೊಂದು ಅರ್ಜಿ ಕೊಡೋಕೆ ರೆಡಿಯಾಗಿದೆ. 'ಪವರ್' ಅನ್ನೋ ಟೈಟಲ್ ಇದ್ರೂ 'ಪವರ್ ಸ್ಟಾರ್' ಕೊಟ್ಟವರು ನಮಗೂ ಕೊಡಿ ಅಂತಿದ್ದಾರೆ ಹೊಸ ಚಿತ್ರತಂಡದವರು.

ಪಾರು ಇದ್ರೂ ಪಾರು ವೈಫ್ ಅಫ್ ದೇವದಾಸ್

ಸುನೀಲ್ ಅನ್ನೋ ನಿರ್ದೇಶಕರು ಹೊಸಬರ ತಂಡದೊಂದಿಗೆ ಪಾರು ಅನ್ನೋ ಸಿನಿಮಾ ಮಾಡಿದ್ರು. ಅದಾದ ನಂತರ 'ಪಾರು ವೈಫ್ ದೇವದಾಸ್' ಅನ್ನೋ ಟೈಟಲ್ ಕೊಡ್ತು ವಾಣಿಜ್ಯ ಮಂಡಳಿ. ಈ ಕಾರಣಕ್ಕೇ ಅಡ್ಡ, ಪ್ರೇಮ್ ಅಡ್ಡ ವಿವಾದ ಶುರುವಾಗಿದ್ದು. ಆದ್ರೆ ಹೀಗೆ ಹಿಂದೆ ಮುಂದೆ ಬರೋ ಟೈಟಲ್ ಕೊಡೋದಿಲ್ಲ ಅಂತ ಹೇಳ್ತಿದೆ ವಾಣಿಜ್ಯ ಮಂಡಳಿ.

ಲವ್ ದರ್ಬಾರ್ ಇದ್ರೂ ಓ ದರ್ಬಾರ್

ಲವ್ ದರ್ಬಾರ್ ಅನ್ನೋ ಟೈಟಲ್ ನ ಒಂದು ವರ್ಷದ ಹಿಂದೆ ಕೊಟ್ಟಿರೋ ವಾಣಿಜ್ಯ ಮಂಡಳಿ ಇತ್ತೀಚೆಗೆ 'ಓ ದರ್ಬಾರ್' ಅನ್ನೋ ಟೈಟಲ್ ಒಂದಕ್ಕೆ ಅಸ್ತು ಅಂದಿದೆ. ಆದ್ರೆ ಇದು ಟೈಟಲ್ ಕಮಿಟಿಯವರ ಅಂಧಾ ದರ್ಬಾರ್ ಅಂತಿದೆ ಗಾಂಧಿನಗರದ ಪಂಡಿತರ ಪಡಸಾಲೆ.

ಇನ್ಮುಂದೆ ಹೀಗಾಗೋದಿಲ್ಲ ಅಂತಾರೆ

ವಾಣಿಜ್ಯ ಮಂಡಳಿಯಲ್ಲಿ ಪ್ರತೀ ಬಾರಿ ಟೈಟಲ್ ವಿಷಯಕ್ಕೆ ವಿವಾದಗಳಾದಾಗ್ಲೂ ಅಧ್ಯಕ್ಷರು ಈಗಾಗ್ಲೇ ಟೈಟಲ್ ಕಿತ್ತಾಟ ಆಗದಂತೆ ಸೂಕ್ತ ನಿಯಮ ರೂಪಿಸಿದ್ದೀವಿ ಅಂತಾರೆ ಆದ್ರೆ ವಿವಾದಗಳು ಮಾತ್ರ ನಿಂತಿಲ್ಲ.

ಟೈಟಲ್ ಮಾರೋದೇ ದಂಧೆಯಾಗಿದೆ

ಅದೆಷ್ಟೋ ನಿರ್ಮಾಪಕರು ತಮ್ಮ ಬ್ಯಾನರ್ ಗಳ ಅಡಿಯಲ್ಲಿ ಒಂದಷ್ಟು ಟೈಟಲ್ ರಿಜಿಸ್ಟರ್ ಮಾಡಿ ಅದೇ ಟೈಟಲ್ ಬೇರೆಯವರಿಗೆ ಬೇಕಾದಾಗ ಮಾರಿಕೊಳ್ಳೋ ಕೆಲಸವನ್ನೂ ಮಾಡ್ತಿದ್ದಾರೆ. ಇದೂ ಒಂಥರಾ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ.

English summary
Whether you say it publicity gimmick or not here's a look at some Sandalwood films that had much ado about a name. Unknown hands are playing key role behind title controversy. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada