For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ 2 ಸಿದ್ಧತೆಯಲ್ಲಿ ರಿಯಲ್ ಸ್ಟಾರ್ ಉಪ್ಪಿ

  By Rajendra
  |

  1999ರಲ್ಲಿ ತೆರೆಕಂಡು ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದ 'ಉಪೇಂದ್ರ' ಚಿತ್ರದ ಮುಂದುವರಿದ ಭಾಗವನ್ನು ನಟ ಉಪೇಂದ್ರ ಕೈಗೆತ್ತಿಕೊಂಡಿದ್ದಾರೆ. ಉಪೇಂದ್ರ ಅವರ 43ನೇ (ಸೆಪ್ಟೆಂಬರ್ 18) ಹುಟ್ಟುಹಬ್ಬದ ದಿನ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ.

  ವಿಭಿನ್ನ ಕತೆ, ವಿಚಿತ್ರ ಸಂಭಾಷಣೆ, ವಿಶೇಷ ಹಾಡುಗಳಿಂದ ಉಪೇಂದ್ರ ಚಿತ್ರ ಎಲ್ಲರ ಮನಗೆದ್ದಿತ್ತು. ಸಾಲದಕ್ಕೆ ಚಿತ್ರದಲ್ಲಿ ಮೂವರು ನಾಯಕಿಯರು. ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ. ಈಗ ಇವರು ಮೂವರು ಚಲಾವಣೆಯಲ್ಲಿಲ್ಲ. ಹಾಗಾಗಿ ಈಗ ಭಾಗ ಎರಡನ್ನು ಯಾವ ರೀತಿ ತೆರೆಗೆ ತರುತ್ತಾರೋ ಎಂಬ ಕುತೂಹಲ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

  ಒಂದು ಅಂದಾಜಿನ ಪ್ರಕಾರ ಹಳೆ ತಂಡ ಭಾಗ 2ರಲ್ಲಿ ರಿಪೀಟ್ ಆಗಲ್ಲ ಎನ್ನಲಾಗುತ್ತಿದೆ. ಆದರೆ ಗುರುಕಿರಣ್ ಸಂಗೀತ, ಎಚ್ ಸಿ ವೇಣು ಛಾಯಾಗ್ರಹಣ ಮಾತ್ರ ತಪ್ಪದೆ ಇರುತ್ತದಂತೆ. ಜೊತೆಗೆ ಉಪೇಂದ್ರ ನಟನೆ ಹಾಗೂ ನಿರ್ದೇಶ ಸಹ ಇರುತ್ತದೆ ಎನ್ನುತ್ತವೆ ಮೂಲಗಳು.

  ಕಳೆದ ಒಂದೂವರೆ ವರ್ಷದಿಂದ ಉಪೇಂದ್ರ ತಲೆಕೆಡಿಸಿಕೊಂಡು ಕತೆ ಹೆಣೆದಿದ್ದಾರೆ ಎಂಬ ಸುದ್ದಿಯೂ ಇದೆ. ಪಾತ್ರ ವರ್ಗದಲ್ಲಿ, ತಾಂತ್ರಿಕ ಬಳಗದಲ್ಲಿ ಯಾರ್‍ಯಾರು ಇರುತ್ತಾರೆ ಎಂಬುದು ಗೊತ್ತಾಗಬೇಕಾದರೆ ಸೆಪ್ಟೆಂಬರ್ 18ರ ತನಕ ಕಾಯಲೇಬೇಕು.

  ಅಂದಹಾಗೆ ಇದು ಉಪೇಂದ್ರ ಅವರ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತದೋ ಅಥವಾ ಬೇರೆಯವರ ನಿರ್ಮಾಣದಲ್ಲಿ ಸೆಟ್ಟೇರುತ್ತದೋ ಎಂಬುದೂ ನಿಗೂಢವಾಗಿದೆ. ಸದ್ಯಕ್ಕೆ ಉಪ್ಪಿ ಅಭಿನಯದ ಟೋಪಿವಾಲಾ ಹಾಗೂ ಕಲ್ಪನಾ ಚಿತ್ರಗಳು ಸಿದ್ಧವಾಗುತ್ತಿವೆ. (ಏಜೆನ್ಸೀಸ್)

  English summary
  Kannada actor Upendra is currently busy in two films, 'Topiwala' and 'Kalpana'. The actor will get more busy for his next venture, which he will be directing and acting. The film, which he plans to start under his home production will be announced on his birthday, falling on September 18.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X