»   » ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಹೀಗೊಂದು ದಿಢೀರ್ ಸುದ್ದಿ.!

ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಹೀಗೊಂದು ದಿಢೀರ್ ಸುದ್ದಿ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49ನೇ ಹಾಗೂ 50ನೇ ಚಿತ್ರ ವಾರದಿಂದ ಸದ್ದು ಮಾಡುತ್ತಲೇ ಇವೆ. ಗಾಂಧಿನಗರದಲ್ಲಿ ದರ್ಶನ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬ್ರೇಕಿಂಗ್ ನ್ಯೂಸ್ ಆಗುತ್ತಿರುವಾಗಲೇ, ರಿಯಲ್ ಸ್ಟಾರ್ ಉಪೇಂದ್ರ ರವರ 50ನೇ ಚಿತ್ರದ ಕುರಿತು ದಿಢೀರ್ ಸುದ್ದಿಯೊಂದು ಹೊರಬಿದ್ದಿದೆ.

ಸೂಪರ್ ಸ್ಟಾರ್ ಉಪೇಂದ್ರ ರವರ 50ನೇ ಚಿತ್ರದ ಬಗ್ಗೆ ಸದ್ಯ ಕೇಳಿಬರುತ್ತಿರುವ ಸುದ್ದಿಯ ಸಂಪೂರ್ಣ ಹೂರಣ ಇಲ್ಲಿದೆ. ಓದಿರಿ...

50ನೇ ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಡುತ್ತಾರೆ ಉಪೇಂದ್ರ.!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಂಚಲನ ಸೃಷ್ಟಿಸಿರುವ ಸುದ್ದಿ ಅಂದ್ರೆ ಇದೇ... ತಮ್ಮ 50ನೇ ಚಿತ್ರಕ್ಕೆ ತಾವೇ ಆಕ್ಷನ್ ಕಟ್ ಹೇಳ್ತಾರಂತೆ ಉಪೇಂದ್ರ.![ಉಪೇಂದ್ರ ಅವರ 50ನೇ ಚಿತ್ರಕ್ಕೆ 'ಆಕ್ಷನ್-ಕಟ್' ಯಾರದ್ದು?]

ಮಂಜು ಮಾಂಡವ್ಯ ನಿರ್ದೇಶನ ಮಾಡಬೇಕಿತ್ತು

ಹಾಗ್ನೋಡಿದ್ರೆ, ಉಪೇಂದ್ರ ರವರ 50ನೇ ಚಿತ್ರವನ್ನ 'ಮಾಸ್ಟರ್ ಪೀಸ್' ಡೈರೆಕ್ಟರ್ ಮಂಜು ಮಾಂಡವ್ಯ ನಿರ್ದೇಶಕ ಮಾಡಬೇಕಿತ್ತು. ಈಗಾಗಲೇ ಆ ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ನಡೆದಿತ್ತು. ಆದ್ರೀಗ ಆ ಪ್ಲಾನ್ ಬದಲಾಗಿದೆ.[ಸೈಲೆಂಟ್ ಆಗಿ ನಡೆದಿದೆ ಉಪೇಂದ್ರ ರವರ 50ನೇ ಚಿತ್ರದ ಸ್ಕ್ರಿಪ್ಟ್ ಪೂಜೆ]

ಮಂಜು ಮಾಂಡವ್ಯ ಸಿನಿಮಾ ಕ್ಯಾನ್ಸಲ್ ಆಯ್ತಾ.?

ಉಪೇಂದ್ರ ರವರಿಗೆ ಮಂಜು ಮಾಂಡವ್ಯ ನಿರ್ದೇಶನ ಮಾಡುವುದು ಖಚಿತ. ಆದ್ರೆ, ಅದು ಉಪ್ಪಿ ರವರ 50ನೇ ಚಿತ್ರ ಆಗಿರಲ್ಲ ಅಷ್ಟೇ.

ಬದಲಾವಣೆಗೆ ಕಾರಣ ಏನು.?

ಮೂಲಗಳ ಪ್ರಕಾರ, ರಿಯಲ್ ಸ್ಟಾರ್ ಉಪೇಂದ್ರ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದ ಎರಡು ಚಿತ್ರಗಳು ಕ್ಯಾನ್ಸಲ್ ಆಗಿವೆ. ಹೀಗಾಗಿ, 50ನೇ ಸಿನಿಮಾದ ಬದಲು ಉಪ್ಪಿ ರವರ 48ನೇ ಚಿತ್ರವನ್ನ ಮಂಜು ಮಾಂಡವ್ಯ ನಿರ್ದೇಶನ ಮಾಡುತ್ತಾರೆ.

50ನೇ ಚಿತ್ರದಲ್ಲಿ ಉಪ್ಪಿ ಕಮಾಲ್.!

ರಿಯಲ್ ಸ್ಟಾರ್ ಡೈರೆಕ್ಟರ್ ಕ್ಯಾಪ್ ತೊಡುತ್ತಾರೆ ಅಂದ್ರೆ, ಉಪ್ಪಿ ಅಭಿಮಾನಿಗಳಿಗೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದೇನಿದೆ.? 'ಉಪ್ಪಿ-2' ಚಿತ್ರದ ನಂತರ ನಟನೆಯಲ್ಲಿಯೇ ಬಿಜಿಯಾಗಿರುವ ಉಪೇಂದ್ರ, ತಮ್ಮ 50ನೇ ಚಿತ್ರವನ್ನ ನಿರ್ದೇಶನ ಮಾಡುವ ಮನಸ್ಸು ಮಾಡಿದ್ದಾರೆ.

ಈಗಾಗಲೇ ಪೆನ್ನು-ಪೇಪರ್ ಹಿಡಿದ್ದಾರಂತೆ ಉಪೇಂದ್ರ

ಕಳೆದ ಹದಿನೈದು ದಿನಗಳಿಂದ ಪೆನ್ನು-ಪೇಪರ್ ಹಿಡಿದುಕೊಂಡು ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಉಪೇಂದ್ರ ತಲ್ಲೀನರಾಗಿದ್ದಾರಂತೆ.

ಅನೌನ್ಸ್ ಮೆಂಟ್ ಒಂದೇ ಬಾಕಿ.!

ಸ್ಕ್ರಿಪ್ಟಿಂಗ್ ಕೆಲಸ ಮುಗಿದ ಕೂಡಲೆ ತಮ್ಮ 50ನೇ ಚಿತ್ರದ ಕುರಿತು ಆಫೀಶಿಯಲ್ ಅನೌನ್ಸ್ ಮೆಂಟ್ ಮಾಡ್ತಾರಂತೆ ಉಪೇಂದ್ರ.

'ಉಪೇಂದ್ರ ಮತ್ತೆ ಹುಟ್ಟಿ ಬಾ.. ಇಂತಿ ಪ್ರೇಮ' ಚಿತ್ರೀಕರಣ ಸಂಪೂರ್ಣ

ಈಗಾಗಲೇ 'ಉಪ್ಪಿ.. ಮತ್ತೆ ಹುಟ್ಟಿ ಬಾ.. ಇಂತಿ ಪ್ರೇಮ' ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಉಪ್ಪಿ ಕೈಯಲ್ಲಿ ಮಂಜು ಮಾಂಡವ್ಯ ಹಾಗೂ ಶಶಾಂಕ್ ನಿರ್ದೇಶನದ ಚಿತ್ರಗಳು ಬಾಕಿ ಇವೆ.

English summary
According to the latest Grapevine, Real Star Upendra is all set to direct his 50th movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada