»   » ಯಡಿಯೂರಪ್ಪ ಕುರಿತ ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ?

ಯಡಿಯೂರಪ್ಪ ಕುರಿತ ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ?

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುರಿತು 'ಭೂಮಿಪುತ್ರ' ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಬಿಜೆಪಿ ಪಕ್ಷದ ನಾಯಕ ಯಡಿಯೂರಪ್ಪ ರವರ ಬಗ್ಗೆ ಸಿನಿಮಾ ನಿರ್ಮಾಣ ಮಾಡುವುದಾಗಿ ಅದೇ ಪಕ್ಷದ ನಾಯಕಿ ತೇಜಸ್ವಿನಿ ರಮೇಶ್ ಘೋಷಿಸಿದ್ದರು. ಈ ಬಗ್ಗೆ ಫಿಲ್ಮಿಬೀಟ್ ನಲ್ಲಿ ನಾವೇ ನಿಮಗೆ ತಿಳಿಸಿದ್ವಿ.[ಬೆಳ್ಳಿತೆರೆಯಲ್ಲಿ ಮೂಡಲಿದೆ ಜೆಡಿಎಸ್ 'ದಳಪತಿ'ಯ T20 ಆಡಳಿತ]

ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೆಶನದ 'ಭೂಮಿಪುತ್ರ' ಚಿತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಪಾತ್ರವನ್ನು ಅರ್ಜುನ್ ಸರ್ಜಾ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರ ಕುರಿತ ಚಿತ್ರ ತಕ್ಷಣದಲ್ಲೇ ಸೆಟ್ಟೇರಿದರೆ ಅವರ ಪಾತ್ರವನ್ನು ನಿರ್ವಹಿಸುವವರು ಯಾರು ಎಂಬ ಬಗ್ಗೆ ಚರ್ಚೆ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಈಗೊಂದು ಹೊಸ ಸುದ್ದಿ ಹೊರಬಿದ್ದಿದೆ.[ಕೇಳ್ರಪ್ಪೋ ಕೇಳಿ.. 'ಭೂಮಿಪುತ್ರನ ಜನಕ' ಯಡಿಯೂರಪ್ಪ ಬಗ್ಗೆ ಸಿನಿಮಾ ಬರಲಿದೆ.!]

ಯಡಿಯೂರಪ್ಪ ರವರ ಬಗ್ಗೆ ನಿರ್ಮಾಣ ಮಾಡುವ ಸಿನಿಮಾವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರೆಲ್ಲ ಸೇರಿ 'ಭೂಮಿಪುತ್ರ ಜನಕ' ಎಂಬ ಸಿನಿಮಾ ಮಾಡುತ್ತೇವೆ ಎಂದು ಪಕ್ಷದ ನಾಯಕಿ ತೇಜಸ್ವಿನಿ ರಮೇಶ್ ಹೇಳಿದ್ರು. ಈಗ ಚಿತ್ರದ ಟೈಟಲ್ ಅನ್ನು ನೋಂದಣಿ ಮಾಡಿಸಿದ್ದು, ಚಿತ್ರದಲ್ಲಿ ಯಡಿಯೂರಪ್ಪನ ಪಾತ್ರವನ್ನು ಕನ್ನಡದ ಸೂಪರ್ ಸ್ಟಾರ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿ.ಎಸ್.ವೈ ಚಿತ್ರದಲ್ಲಿ ರಿಯಲ್ ಸ್ಟಾರ್ ಅಭಿನಯ

ಬಿ.ಎಸ್.ಯಡಿಯೂರಪ್ಪ ಬಗ್ಗೆ ಮೂಡಿಬರಲಿರುವ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ರವರು ಯಡಿಯೂರಪ್ಪ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಇದು ನಿಜವೋ ಅಥವಾ ಗಾಳಿಸುದ್ದಿಯೋ ಎಂಬುದು ಇನ್ನು ಕನ್ಫಮ್ ಆಗಿಲ್ಲ.

ಟೈಟಲ್ ಸಹ ಫಿಕ್ಸ್ ಆಗಿದೆ..

ಯಡಿಯೂರಪ್ಪ ರವರ ಬಗ್ಗೆ ಮೂಡಿಬರಲಿರುವ ಚಿತ್ರಕ್ಕೆ ಈಗಾಗಲೇ ಟೈಟಲ್ ಸಹ ಫಿಕ್ಸ್ ಆಗಿದ್ದು, ಫಿಲ್ಮ್ ಚೇಂಬರ್ ನಲ್ಲಿ 'ನೇಗಿಲಯೋಗಿ', ಮಣ್ಣಿನಮಗ' ಎಂದು ಚಿತ್ರದ ಹೆಸರನ್ನು ನೋಂದಣಿ ಮಾಡಿಸಲಾಗಿದೆಯಂತೆ.

ಚಿತ್ರದ ನಿರ್ದೇಶಕ ಯಾರು?

ಅಂದಹಾಗೆ ಈ ಹಿಂದೆ ದುನಿಯಾ ವಿಜಯ್ ಅಭಿನಯದ 'ಶಂಕರ್ ಐ.ಪಿ.ಎಸ್' ಚಿತ್ರ ಮತ್ತು 'ಉಸ್ತಾದ್' ಚಿತ್ರಗಳನ್ನು ನಿರ್ದೇಶನ ಮಾಡಿರುವ ಎಂ.ಎಸ್.ರಮೇಶ್ ರವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ.

ನಿರ್ಮಾಪಕ ಯಾರು?

ಈ ಹಿಂದೆ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ರವರು ಬಿಜೆಪಿ ಕಾರ್ಯಕರ್ತರೆಲ್ಲ ಬಂಡವಾಳ ಹಾಕಿ ಯಡಿಯೂರಪ್ಪನವರ ಬಗ್ಗೆ ಸಿನಿಮಾ ಮಾಡುತ್ತೇವೆ, ನಾನೇ ಚಿತ್ರ ನಿರ್ದೇಶನ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ತೇಜಸ್ವಿನಿ ಹೇಳಿದ್ದ ಟೈಟಲ್ ಸಹ ಬದಲಾಗಿದ್ದು, ಚಿತ್ರದ ನಿರ್ಮಾಣಕ್ಕೆ ಬಿಜೆಪಿ ಮುಖಂಡರೊಬ್ಬರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ತಾರಾಬಳಗದ ಬಗ್ಗೆ ಕೇಳಿಬಂದ ಹೆಸರುಗಳು...

ಚಿತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ ಯಡಿಯೂರಪ್ಪ ರವರ ಪಾತ್ರದಲ್ಲಿ ಅಭಿನಯಿಸಿದ್ರೆ, ಇತರೆ ತಾರಾಬಳಗದಲ್ಲಿ ಕುಮಾರ್ ಬಂಗಾರಪ್ಪ, ಶ್ರೀನಗರ ಕಿಟ್ಟಿ, ಜಗ್ಗೇಶ್, ಶೃತಿ, ತಾರಾ ರವರು ಅಭಿನಯಿಸುವ ಸಾಧ್ಯತೆ ಇದೆಯಂತೆ.

ಉಪ್ಪಿ ನಿಜವಾಗಿಯೂ ಯಡಿಯೂರಪ್ಪ ಪಾತ್ರದಲ್ಲಿ ನಟಿಸುತ್ತಾರಾ..?

ಇದಕ್ಕೆ ಅವರೇ ಉತ್ತರಿಸಬೇಕು. ಯಾಕಂದ್ರೆ ಈ ಬಗ್ಗೆ ನಟ ಉಪೇಂದ್ರ ರವರು ಇನ್ನೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಭಾರತದ ರಾಜಕೀಯ ವ್ಯವಸ್ಥೆ ಬಗ್ಗೆ, ಆಡಳಿತ ವ್ಯವಸ್ಥೆ ಬಗ್ಗೆ ತಮ್ಮ ಸಿನಿಮಾಗಳ ಮೂಲಕ ದೊಡ್ಡ ದೊಡ್ಡ ಆಸೆಗಳನ್ನು ವ್ಯಕ್ತಪಡಿಸಿರುವ ಉಪ್ಪಿ ಯಡಿಯೂರಪ್ಪ ರವರ T20 ಆಡಳಿತ ಕುರಿತ ಚಿತ್ರದಲ್ಲಿ ನಟಿಸುವುದು ಬಹುತೇಕ ಡೌಟ್.

ನಿರ್ದೇಶಕ ಎಂ.ಎಸ್.ರಮೇಶ್ ಹೇಳಿದ್ದೇನು?

ಯಡಿಯೂರಪ್ಪ ನವರ ಬಗ್ಗೆ ಮೂಡಿಬರಲಿರುವ ಚಿತ್ರಕ್ಕೆ ಎಂ.ಎಸ್.ರಮೇಶ್ ನಿರ್ದೇಶಕರು ಎಂದು ಕೇಳಿಬಂದ ಹಿನ್ನೆಲೆಯಲ್ಲಿ, ಫಿಲ್ಮಿಬೀಟ್ ಅವರನ್ನು ಸಂಪರ್ಕ ಮಾಡಿದಾಗ ಎಂ.ಎಸ್.ರಮೇಶ್ ರವರು ಇದೆಲ್ಲಾ ಸುಳ್ಳು. ನಾನು ಆ ಚಿತ್ರ ಡೈರೆಕ್ಟ್ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

English summary
According to Grapevine, Kannada Actor Real Star Upendra is to play B S Yeddyurappa role on silver screen. This Movie's title is likely to be 'Negila Yogi' or 'Mannina Maga'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada