»   » ನೌಕರ ಆತ್ಮಹತ್ಯೆ: ರಾಘಣ್ಣ ದಂಪತಿ ವಿರುದ್ದ ಕೇಸ್ ದಾಖಲು

ನೌಕರ ಆತ್ಮಹತ್ಯೆ: ರಾಘಣ್ಣ ದಂಪತಿ ವಿರುದ್ದ ಕೇಸ್ ದಾಖಲು

Posted By:
Subscribe to Filmibeat Kannada

ಹಲವು ವರ್ಷಗಳಿಂದ ವರನಟ ಡಾ. ರಾಜಕುಮಾರ್ ಅವರ ಒಡೆತನದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉಮೇಶ್ ಎನ್ನುವ ವ್ಯಕ್ತಿಯ ಶವ ಬೆಂಗಳೂರಿನ ಕಾಟನ್ ಪೇಟೆಯಲ್ಲಿರುವ ವಸತಿ ಗೃಹವೊಂದದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶುಕ್ರವಾರ (ಜೂ 5) ಪತ್ತೆಯಾಗಿದೆ.

ಸಹದ್ಯೋಗಿಗಳ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಉಮೇಶ್ ಕುಟುಂಬದವರು ದೂರು ನೀಡಿರುವ ಹಿನ್ನಲೆಯಲ್ಲಿ, ತ್ಯಾಗರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೊತೆಗೆ, ವಜ್ರೇಶ್ವರಿ ಕಂಬೈನ್ಸ್ ಆಡಳಿತ ಮಂಡಳಿ ವಿರುದ್ಧ ಕಿರುಕುಳ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Vajreshwari combines worker commits suicide: Case has been registered against Raghavendra Rajkumar

ಆತ್ಮಹತ್ಯೆ ಘಟನೆ ನಡೆದ ಬೆನ್ನಲ್ಲೇ ಪೊಲೀಸರು ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಮತ್ತು ಅವರ ಪತ್ನಿಯ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲಿ (IPC-306) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಬಗ್ಗೆ: ತ್ಯಾಗರಾಜನಗರ ನಿವಾಸಿಯಾಗಿದ್ದ ಮೂಲತಃ ಉಡುಪಿ ಮೂಲದವರಾದ ಉಮೇಶ್ ಕೋಟೇಕಾರ್ (47) ಎನ್ನುವ ವ್ಯಕ್ತಿ ವಜ್ರೇಶ್ವರಿ ಸಂಸ್ಥೆಯ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ರಾಘವೇಂದ್ರ ರಾಜಕುಮಾರ್, ಉಮೇಶ್ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು ಎನ್ನುವ ಮಾಹಿತಿಯಿದೆ.

ಸಂಸ್ಥೆಯ ಹಣಕಾಸಿನ ಲೆಕ್ಕಾಚಾರದಲ್ಲಿ ಸುಮಾರು ಮೂರು ಕೋಟಿ ರೂಪಾಯಿನಷ್ಟು ಹಣ ದುರಪಯೋಗವಾಗಿದೆ ಎನ್ನುವುದು ಆಡಳಿತ ಮಂಡಳಿಯ ಅನುಮಾನವಾಗಿತ್ತು.

ಈ ಸಂಬಂಧ ವಿವರಣೆ ನೀಡುವಂತೆ ರಾಘವೇಂದ್ರ ರಾಜಕುಮಾರ್ ಪತ್ನಿ ಉಮೇಶ್ ಅವರಿಗೆ ತಾಕೀತು ಮಾಡಿದ್ದರು. ಇದಾದ ಒಂದು ದಿನದ ನಂತರ ಸಂಸ್ಥೆಯ ನೌಕರರು ಉಮೇಶ್ ಮನೆಯಿಂದ ಕೆಲವೊಂದು ಕಡತಗಳನ್ನು ತೆಗೆದುಕೊಂಡು ಹೋಗಿದ್ದರು.

ಘಟನೆಯಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಪತಿ ಹಣ ದುರ್ಬಳಕೆ ಮಾಡಿಕೊಂಡಿಲ್ಲ. ಪತಿಯ ಸಾವಿಗೆ ರಾಘಣ್ಣ ಕುಟುಂಬದವರೇ ಕಾರಣ ಎಂದು ಮೃತ ಉಮೇಶ್ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

English summary
Parvathamma Rajkumar owned Vajreshwari combines worker commits suicide: Case has been registered against Raghavendra Rajkumar and his wife.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada