For Quick Alerts
  ALLOW NOTIFICATIONS  
  For Daily Alerts

  ವೀಣಾ ಮಲಿಕ್ ತುಟಿ ಕಚ್ಚಿದ ಅಕ್ಷಯ್; ಮುಂದೇನು ಗತಿ?

  |

  ಇತ್ತೀಚಿಗಷ್ಟೇ 'ಎ' ಸರ್ಟಿಫಿಕೇಟ್ ಚಿತ್ರಗಳನ್ನು ಟಿವಿಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಸೆನ್ಸಾರ್ ಮಂಡಳಿ ನಿರ್ಬಂಧ ವಿಧಿಸಿದೆ. ಈ ಹೇಳಿಕೆಯ ಬೆನ್ನಲ್ಲೇ ಅಚ್ಚರಿಯ ಸುದ್ದಿಯೊಂದು ಗಾಂಧಿನಗರದಲ್ಲಿ ಸುತ್ತತ್ತಿದೆ. ಅದು ತೀರಾ ಇತ್ತಿಚಿಗೆ ಶೂಟಿಂಗ್ ಮುಗಿಸಿರುವ ವೀಣಾ ಮಲಿಕ್ ಹಾಗೂ ಅಕ್ಷಯ್ ಜೋಡಿ ಚಿತ್ರ ಕನ್ನಡದ 'ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರಕ್ಕೆ ಸಂಬಂಧಿಸಿದ್ದು. ಅದರಲ್ಲಿ 'ಎ' ಸರ್ಟಿಫಿಕೇಟ್ ಗ್ಯಾರಂಟಿ ಎಂಬಂಥ ಕಿಸ್ ದೃಶ್ಯವಿದ ಎಂಬುದು ಸುತ್ತುತ್ತಿರುವ ಸುದ್ದಿ.

  ಸುದ್ದಿಯೆಂದರೆ, ಚಿತ್ರದ ನಾಯಕಿ ಪಾಕಿಸ್ತಾನದ ನಟಿ, ಸೆಕ್ಸ್ ಬಾಂಬ್ ವೀಣಾ ಮಲಿಕ್ ತುಟಿಗೆ ನಟ ಅಕ್ಷಯ್ ತಮ್ಮ ತುಟಿ ಸೇರಿಸಿ ಗಾಢವಾಗಿ ಚುಂಬಿಸಿದ್ದಾರೆ. ಈ ಮೂಲಕ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ 'ಗಂಗಾ ಕಾವೇರಿ' ನಟ ಅಕ್ಷಯ್! ಕನ್ನಡದ 'ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದ ನಿರ್ಮಾಪಕರಾಗಿರುವ ವೆಂಕಟಪ್ಪ ಅವರ ಮಗನಾಗಿರುವ ಅಕ್ಷಯ್, ಈ ಚಿತ್ರಕ್ಕೆ ನಾಯಕ ಕೂಡ.

  'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಎಂಬ ಹೆಸರಿನ ಚಿತ್ರದಲ್ಲಿ ಚಿತ್ರದ ನಾಯಕ, ನಾಯಕಿಗೆ ಮುತ್ತು ಕೊಡುವುದು ಮಹಾ ಅಪರಾಧವೇ ಎಂಬ ಪ್ರಶ್ನೆಯನ್ನು ಗಾಂಧಿನಗರದ ಮೂಲೆಯಲ್ಲಿರುವ ಕೆಲವರು ಕೇಳುತ್ತಿದ್ದಾರೆ. ಹಿಂದಿಯ 'ದಿ ಡರ್ಟಿ ಪಿಕ್ಚರ್' ರೀಮೇಕ್ ಅಲ್ಲದಿದ್ದರೂ ಅದರ ಭಾರೀ ಯಶಸ್ಸಿನಿಂದ ಪ್ರೇರಿತರಾಗಿ ಕನ್ನಡದಲ್ಲಿ ಪ್ರಾರಂಭಿಸಲಾಗಿರುವ ಚಿತ್ರವಿದು. ಅಂದಮೇಲೆ, ಇಷ್ಟೂ ಇರದಿದ್ದರೆ ಹೇಗೆ? ಇದನ್ನು ಅತಿರೇಕ ಎನ್ನುವುದಾದರೂ ಹೇಗೆ ಎಂಬುದು ಕೆಲವು ಗಾಂಧಿನಗರಿಗರ ಪ್ರಶ್ನೆ!

  ಕೋಟಿ ಕೊಟ್ಟು ಪಾಕಿಸ್ತಾನದ ಬೋಲ್ಡ್ ಬೆಡಗಿಯೊಬ್ಬಳನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತಂದು ಸೀರೆ ಉಡಿಸಿ ಕಳಿಸಲು ಸಾಧ್ಯವೇ? ಕನ್ನಡ ಚಿತ್ರಗಳಲ್ಲಿ ಇಂತಹ ದೃಶ್ಯಗಳಿರುವುದು ಅಪರೂಪ. ಇದ್ದರೆ ಸೆನ್ಸಾರ್ ಮಂಡಳಿ ಅಂತಹ ಚಿತ್ರಗಳಿಗೆ 'ಎ' ಪ್ರಮಾಣಪತ್ರ ಕೊಟ್ಟಿರುತ್ತದೆ. ಗೊತ್ತಿದ್ದೂ ನೋಡಲು ಬರುವ ಪ್ರೇಕ್ಷಕರಂತೂ ಸಾಕಷ್ಟಿದ್ದಾರೆ. ಆದರೆ ಇತ್ತೀಚಿಗೆ ಇಂತಹ ಚಿತ್ರಗಳು ಟಿವಿಯಲ್ಲಿ ಕಾಣಿಸಿಕೊಳ್ಳಲಾಗದು ಎಂಬುದಷ್ಟೇ ನಿರ್ಮಾಪಕರನ್ನು ಕಂಗೆಡಿಸುವ ವಿಚಾರ.

  ಆದರೆ, ಅದು ತಿಳಿದ ನಂತರವೂ ಅಂತಹ ಚಿತ್ರವನ್ನು ನಿರ್ಮಿಸುವ ಧೈರ್ಯವನ್ನು ನಿರ್ಮಾಪಕರು ಮಾಡಬಾರದು ಎಂದೇನಿಲ್ಲವಲ್ಲ! "ಕಿಸ್ ಕಥೆಗೆ ಪೂರಕವಾಗಿದೆ. ಎಲ್ಲೂ ಅಶ್ಲೀಲತೆಯಿಲ್ಲ" ಎಂದಿದ್ದಾರೆ ವೆಂಕಟ್ಟಪ್ಪ ಪುತ್ರರತ್ನ ಅಕ್ಷಯ್. ಆದರೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದರೆ? ಈ ಪ್ರಶ್ನೆಯನ್ನು ಅಕ್ಷಯ್ ಗೆ ಕೇಳಿದರೆ "ಕಿಸ್ ದೃಶ್ಯಕ್ಕೆ ಕತ್ತರಿ ಪ್ರಯೋಗಿಸಿದರೆ ನಾವು ಆಕ್ಷೇಪಿಸಿ 'ಟ್ರಿಬ್ಯೂನಲ್‌' ಮೊರೆ ಹೋಗುತ್ತೇವೆ" ಎಂದಿದ್ದಾರೆ. ಒಟ್ಟಿನಲ್ಲಿ ವೀಣಾ-ಅಕ್ಷಯ್ ಗಾಢ ಚುಂಬನ ತೆರೆಯ ಮೇಲೆ ಪ್ರೇಕ್ಷಕರ ಪಾಲಿಗಂತೂ ತಪ್ಪಲಾರದು. (ಏಜೆನ್ಸೀಸ್)

  English summary
  News buzz that everywhere that there is a Deep Kissing Scene in the Kannada Dirty Picture movie. This Kissing Scene between Heroine Veena Malik and the Hero Akshay. Now the question is, will censor board accept this? 
 
  Sunday, September 2, 2012, 16:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X