For Quick Alerts
  ALLOW NOTIFICATIONS  
  For Daily Alerts

  ರಮ್ಯಾ, ರಾಗಿಣಿ ಗಲಾಟೆಯಲ್ಲಿ ವೀಣಾಗೆ ಲಾಭ

  By Rajendra
  |

  ಇಬ್ಬರ ಜಗಳ ಮೂರನೆಯವರಿಗೆ ಲಾಭ. ಈ ಗಾದೆ ಮಾತು ಈಗ ಗಾಂಧಿನಗರದಲ್ಲಿ ನಿಜವಾಗಿದೆ. ಗೋಲ್ಡನ್ ಗರ್ಲ್ ರಮ್ಯಾ ಹಾಗೂ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ನಡುವಿನ ಹಾವು ಮುಂಗಿಸಿ ಆಟದಲ್ಲಿ ಪಾಕ್ ಬೆಡಗಿ ವೀಣಾ ಮಲಿಕ್ ಗೆ ಲಾಭವಾಗಿದೆ.

  ರಮ್ಯಾ ಸಂಭಾವನೆ ಈಗ ರು.50ಲಕ್ಷದ ಆಚೀಚೆ ಎನ್ನುತ್ತವೆ ಮೂಲಗಳು. ಇನ್ನು ರಾಗಿಣಿ ಸಂಭಾವನೆ ರು.36 ಲಕ್ಷ ಎನ್ನಲಾಗಿದೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ರಮ್ಯಾ ಅವರೇ ಅತ್ಯಧಿಕ ಸಂಭಾವನೆ ಪಡೆಯುವ ತಾರೆ ಎನ್ನಲಾಗಿತ್ತು.

  ಈಗ ಇವರೆಲ್ಲರನ್ನೂ ಹಿಂದಿಕ್ಕಿದ್ದಾರೆ ವೀಣಾ ಮಲಿಕ್. ಹೌದು ವೀಣಾ ಕನ್ನಡದಲ್ಲಿ ಎಣಿಸಿರುವ ಮೊತ್ತವಿದು. ಅದ್ಯಾವ ಚಿತ್ರ ಅಂತೀರಾ, ಅದೇ ಸ್ವಾಮಿ ಸಿಲ್ಕ್ ಸಖತ್ ಹಾಟ್. ಈ ಚಿತ್ರಕ್ಕಾಗಿ ವೀಣಾಗೆ ರು.1 ಕೋಟಿ ಸಂಭಾವನೆ ನೀಡಲಾಗಿದೆಯಂತೆ.

  ಅಂದರೆ ರಮ್ಯಾ, ರಾಗಿಣಿ ಇಬ್ಬರ ಸಂಭಾವನೆ ಸೇರಿಸಿದರೂ ವೀಣಾ ಸಂಭಾವನೆಗೆ ಸಮವಾಗಲ್ಲ. ಒಂದು ವೇಳೆ ವೀಣಾ ಚಿತ್ರವೇನಾದರೂ ಗಲ್ಲಾಪೆಟ್ಟಿಯಲ್ಲೇನಾದರೂ ಅಲ್ಲಗುಲ್ಲಾ ಮಾಡಿದರೆ ಆಕೆಗೆ ಸಾಟಿ ಇನ್ಯಾರು ಇರಲಿಕ್ಕಿಲ್ಲ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿಬರುತ್ತಿವೆ.

  ಸಂಜು ವೆಡ್ಸ್ ಗೀತಾ ಚಿತ್ರದ ಬಳಿಕ ರಮ್ಯಾ ಸಂಭಾವನೆ ರು.30ರಿಂದ ರು.50 ಲಕ್ಷಕ್ಕೇರಿತ್ತು. ಈಗ ರಮ್ಯಾ ಮತ್ತು ರಾಗಿಣಿ ಇಬ್ಬರಿಗೂ ವೀಣಾ ಸೆಡ್ಡುಹೊಡೆದಿದ್ದಾರೆ. ಸಿಲ್ಕ್ ಸಖತ್ ಹಾಟ್ ಮಗ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. (ಏಜೆನ್ಸೀಸ್)

  English summary
  Sources says that actress Veena Malik is now the highest paid actress in Kannada film industry. Compared to Golden Girl Ramya and Ragini Dwivedi her remuneration is high. She has been paid Rs 1 crore for Silk-Sakkat Hot Maga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X