For Quick Alerts
  ALLOW NOTIFICATIONS  
  For Daily Alerts

  ಆಕ್ಷನ್ ಬೇಸ್ಡ್ ಕನ್ನಡ ಚಿತ್ರ ಬೇಕು: ವೀಣಾ ಮಲಿಕ್

  |

  ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಎಲ್ಲಾ ಪರಭಾಷಾ ನಟಿಯರಂತೆ ಡರ್ಟಿ ಪಿಕ್ಚರ್ ಗೆ ಬಂದಿರುವ ಪಾಕಿಸ್ತಾನಿ ನಟಿ, ಸೆಕ್ಸ್ ಬಾಂಬ್ ವೀಣಾ ಮಲಿಕ್ ಕೂಡ ಕನ್ನಡ ಕಲಿಯುವುದಾಗಿ ಹೇಳಿದ್ದಾರೆ. ಆದರೆ ಅಷ್ಟೇ ಹೇಳಿಲ್ಲ, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುವುದಾಗಿಯೂ ಹೇಳಿದ್ದಾರೆ, ಅದು ವಿಶೇಷ.

  ಅದೆಲ್ಲಕ್ಕಿಂತಲೂ ವಿಶೇಷವೆಂದರೆ "ನಾನು ಕೇವಲ ಈ ಚಿತ್ರದಲ್ಲಿ ಮಾತ್ರ ನಟಿಸಲು ಕನ್ನಡಕ್ಕೆ ಬಂದಿಲ್ಲ. ಇಲ್ಲಿ ಮತ್ತೆ ಬೇರೆ ಚಿತ್ರಗಳು ಹಾಗೂ ಪಾತ್ರಗಳು ಸಿಕ್ಕರೂ ಮಾಡುತ್ತೇನೆ. ಅಷ್ಟೇ ಅಲ್ಲ, ಈಗ ಸಿಕ್ಕಿರುವ ಪಾತ್ರ ಸಿಲ್ಕ್ ಸ್ಮಿತಾ ಜೀವನದ ಘಟನೆಗೆ ಸಂಬಂಧಿಸಿದಂತೆ ಇರುವುದರಿಂದ ಬೋಲ್ಡ್ ಆಗಿ ಕಾಣಿಸಿಕೊಳ್ಳಲೇಬೇಕು.

  ಆದರೆ ನನಗೆ ಈ ಸ್ಯಾಂಡಲ್‌ವುಡ್‌ ನಲ್ಲಿ ಗ್ಲಾಮರ್, ಹಾಟ್ ಹೊರತುಪಡಿಸಿಯೂ ಆಕ್ಷನ್ ಪಾತ್ರಗಳಲ್ಲಿ ಮಿಂಚುವಾಸೆ" ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಮಗಾ' ಚಿತ್ರಕ್ಕೆ ತಾವು ಸಂಪೂರ್ಣ ನ್ಯಾಯ ಒದಗಿಸುವುದಾಗಿಯೂ ವೀಣಾ ಘೋಷಿಸಿದ್ದಾರೆ.

  ಕನ್ನಡ ಚಿತ್ರದಲ್ಲಿ ನಟಿಸಲು ಹಾಗೂ ಬೆಂಗಳೂರನ್ನು ನೋಡಲು ವೀಣಾ ಮಲಿಕ್ ತುಂಬಾ ಉತ್ಸುಕರಾಗಿದ್ದರಂತೆ. ಅದಕ್ಕೆ ಸಾಕ್ಷಿಯಾಗಿ ಅವರು ಕಾಕ್ ಪಿಟ್ ಗೆ ತೆರಳಿ ಪೈಲಟ್ ಗೆ "ವಿಮಾನವನ್ನು ಬೇಗ ಓಡಿಸಯ್ಯ" ಎಂದು ಹೇಳಿದ್ದನ್ನು ವೀಣಾ ಸ್ಮರಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಡರ್ಟಿ ಚಿತ್ರದ ನಂತರವೂ ತಾವು ಕನ್ನಡ ಚಿತ್ರಗಳಲ್ಲಿ ನಟಿಸುವ ಬಯಕೆ ಹಾಗೂ ಭರವಸೆ ಎರಡನ್ನೂ ಹೇಳಿದ್ದಾರೆ ವೀಣಾ ಮಲಿಕ್. (ಒನ್ ಇಂಡಿಯಾ ಕನ್ನಡ)

  English summary
  Actress Veena Malik came to act in Kannada Movie 'Dirty Picture'. But she told that she did not came for only this movie and she wants to act more Kannada movies, particularly in action-based movies. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X