Don't Miss!
- News
55 ಪ್ರಯಾಣಿಕರನ್ನು ಬೆಂಗಳೂರಿನಲ್ಲಿ ಬಿಟ್ಟು ಹೋಗಿದ್ದ ಗೋ ಫಸ್ಟ್ ಏರ್ವೇಸ್ಗೆ ವಿಧಿಸಿರುವ ದಂಡವೆಷ್ಟು ಗೊತ್ತೆ?
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡರ್ಟಿ ಪಿಕ್ಚರ್ ನಟಿ ವಿದ್ಯಾ ಮದುವೆ ಮುಹೂರ್ತ ಫಿಕ್ಸ್?
ಅದರೆ, ಈ ಬಗ್ಗೆ ನಟಿ ವಿದ್ಯಾ ಬಾಲನ್ ಆಗಲಿ ಸಿದ್ಧಾರ್ಥ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಭ್ಯ ಮಾಹಿತಿ ಪ್ರಕಾರ 2012 ಅಂತ್ಯಕ್ಕೆ ವಿದ್ಯಾ ಮದುವೆಯಾಗಲಿದ್ದಾರೆ. ಮದುವೆಗೆ ಈಗಾಗಲೇ ಭರ್ಜರಿಯಾಗಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಸಿದ್ದಾರ್ಥ್ ರಾಯ್ ಜೊತೆ ಹಲವಾರು ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ವಿದ್ಯಾ ಹಾಗೂ ಸಿದ್ಧಾರ್ಥ್ ಬಗ್ಗೆ ಮಾಧ್ಯಮಗಳಲ್ಲಿ ರಸವತ್ತಾದ ವರದಿಗಳು ಬಂದಿದ್ದವು.
ಆದರೆ, ಇದುವರೆವಿಗೂ ತಮ್ಮ ಪ್ರೇಮ ಸಂಬಂಧದ ಬಗ್ಗೆ ಯಾವುದೇ ವಿಷಯ ಹೊರಹಾಕದ ವಿದ್ಯಾ ಇತ್ತೀಚೆಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
'ಹೌದು ನಾನು ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ. ಅದು ಬಿಟ್ಟು ಬೇರೇನೂ ಹೇಳಲಾರೆ' ಎಂದು ಮೋಹಕ ನಗೆ ಬೀರಿದ್ದರು.
ಈಗ ಮತ್ತೊಮ್ಮೆ ವಿದ್ಯಾ ಹಾಗೂ ಸಿದ್ದಾರ್ಥ್ ಅವರ ಮದುವೆ ಫಿಕ್ಸ್ ಆಗಿರುವ ಬಗ್ಗೆ ವರದಿ ಬಂದಿದೆ.
ಗೆಳೆಯ ಸಿದ್ದಾರ್ಥ್ ಸಿಇಒ ಆಗಿರುವ ಯುಟಿವಿ ಮೋಷನ್ ಪಿಕ್ಚರ್ ನಿರ್ಮಾಣದ 'ಘನ್ ಚಕ್ಕರ್' ಚಿತ್ರಕ್ಕೆ ಮಾತ್ರ ವಿದ್ಯಾ ಸಹಿ ಹಾಕಿದ್ದಾರೆ. ಡರ್ಟಿ ಪಿಕ್ಚರ್ ಹಾಗೂ ಕಹಾನಿ ಯಶಸ್ಸಿನ ನಂತರ ಸ್ತ್ರೀ ಪ್ರಧಾನ ಪಾತ್ರಕ್ಕೆ ವಿದ್ಯಾ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಗುಟ್ಟು.
ಅಂದ ಹಾಗೆ, ಘನ್ ಚಕ್ಕರ್ ನಲ್ಲಿ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಇದಲ್ಲದೆ ಶಾದಿ ಕೆ ಸೈಡ್ ಎಫೆಕ್ಟ್ ಎಂಬ ಚಿತ್ರ ದಲ್ಲಿ ವಿದ್ಯಾ ನಾಯಕಿ ಎಂದು ಘೋಷಿಸಲಾಗಿದೆ.