»   » 'ವಿಕ್ರಂ ವೇದ' ರೀಮೇಕ್ ಚಿತ್ರದಲ್ಲಿ ಅಬ್ಬರಿಸುತ್ತಾರಾ ಕಿಚ್ಚ ಸುದೀಪ್.?

'ವಿಕ್ರಂ ವೇದ' ರೀಮೇಕ್ ಚಿತ್ರದಲ್ಲಿ ಅಬ್ಬರಿಸುತ್ತಾರಾ ಕಿಚ್ಚ ಸುದೀಪ್.?

Posted By:
Subscribe to Filmibeat Kannada

ಒಂದು ಒಳ್ಳೆಯ ಸಿನಿಮಾಗೆ ಭಾಷೆಯ ಗಡಿ ಇಲ್ಲ ಎನ್ನುವ ಹಾಗೆ ಈಗ ಕಾಲಿವುಡ್ ಸಿನಿಮಾವೊಂದು ಸ್ಯಾಂಡಲ್ ವುಡ್ ಗೆ ಬರುವ ಸುದ್ದಿ ಇದೆ. ತಮಿಳಿನ ಈ ವರ್ಷದ ಸೂಪರ್ ಹಿಟ್ ಸಿನಿಮಾ 'ವಿಕ್ರಂ ವೇದ' ಈಗ ಕನ್ನಡದಲ್ಲಿ ರೀಮೇಕ್ ಆಗುವ ಸಾಧ್ಯತೆ ಇದೆ.

'ವಿಕ್ರಂ ವೇದ' ಈ ಜಮಾನದ ಸಿನಿಪ್ರಿಯರಿಗೆ ಹುಚ್ಚು ಹಿಡಿಸಿದ ಸಿನಿಮಾ. ಕನ್ನಡದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಅನೇಕರು ಈ ಚಿತ್ರವನ್ನು ಮೆಚ್ಚಿ ಹಾಡಿ ಹೊಗಳಿದ್ದರು. ಈಗ ಇದೇ ಸಿನಿಮಾ ಕನ್ನಡಕ್ಕೆ ಬರುತ್ತಿದ್ದು, ಸುದೀಪ್ ಈ ಚಿತ್ರಕ್ಕೆ ನಾಯಕ ಎಂಬ ಮಾತು ಕೇಳಿ ಬರುತ್ತಿದೆ. ಮುಂದೆ ಓದಿ...

'ವಿಕ್ರಂ ವೇದ' ರೀಮೇಕ್

ಕಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ 'ವಿಕ್ರಂ ವೇದ' ಚಿತ್ರ ಈಗ ಕನ್ನಡಕ್ಕೆ ರೀಮೇಕ್ ಆಗಲಿದೆ ಎಂಬ ಸುದ್ದಿ ಇದೆ. ಜೊತೆಗೆ ಈ ಚಿತ್ರದಲ್ಲಿ ನಟ ಸುದೀಪ್ ಹೀರೋ ಆಗಲಿದ್ದಾರೆ ಎಂಬುದು ಸದ್ಯದ ಟಾಕ್.

ಸಿ.ಆರ್.ಮನೋಹರ್ ಮಾತುಕತೆ

ನಿರ್ಮಾಪಕ ಸಿ.ಆರ್.ಮನೋಹರ್ 'ವಿಕ್ರಂ ವೇದ' ಚಿತ್ರವನ್ನು ಕನ್ನಡಕ್ಕೆ ತರಲಿದ್ದು, ರೀಮೇಕ್ ರೈಟ್ಸ್ ಬಗ್ಗೆ ಮೂಲ ನಿರ್ಮಾಪಕರ ಬಳಿ ಮಾತುಕತೆ ನಡೆಸಲಿದ್ದಾರಂತೆ.

ಮೂರು ಭಾಷೆಯಲ್ಲಿ ನಿರ್ಮಾಣ

ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ ಭಾಷೆಗೂ ಚಿತ್ರವನ್ನು ಸಿ.ಆರ್.ಮನೋಹರ್ ರೀಮೇಕ್ ಮಾಡುವ ಯೋಚನೆ ಇದೆಯಂತೆ.

ನಟ ಕಿಚ್ಚ ಸುದೀಪ್ ಗೆ ಇದು 'ಸ್ವರ್ಗಕ್ಕೆ ಕಿಚ್ಚು ಹಚ್ಚು'ವ ಸಮಯ!

ಸುದೀಪ್ ಏನಂತಾರೆ..?

ಸದ್ಯಕ್ಕೆ ಸುದೀಪ್ ಈ ಚಿತ್ರದ ಬಗ್ಗೆ ಟ್ವಿಟ್ಟರ್ ಸೇರಿದಂತೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಆದರೆ 'ದಿ ವಿಲನ್' ನಿರ್ಮಾಪಕರಾದ ಸಿ.ಆರ್.ಮನೋಹರ್ ಮತ್ತು ಸುದೀಪ್ ಆಪ್ತರಾಗಿರುವುದರಿಂದ ಕಿಚ್ಚ ಈ ಚಿತ್ರಕ್ಕೆ ಸೈ ಅಂತಾರಾ ಎನ್ನುವ ಕುತೂಹಲ ಇದೆ.

ಚಿತ್ರಗಳು: 'ಬಿಗ್ ಬಾಸ್ ಸೀಸನ್ 5' ಪ್ರೋಮೋದಲ್ಲಿ ಸುದೀಪ್ ಸಖತ್ ಸಿಂಪಲ್

'ವಿಕ್ರಂ ವೇದ' ಚಿತ್ರದ ಬಗ್ಗೆ

'ವಿಕ್ರಂ ವೇದ' ಚಿತ್ರ ಜುಲೈ ತಿಂಗಳಿನಲ್ಲಿ ತೆರೆ ಕಂಡಿತ್ತು. ಮಾಧವನ್ ಮತ್ತು ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸಿದ್ದರು. ಕೇವಲ 11 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

English summary
Producer C.R.Manohar planning to do a remake of kollywood super hit movie 'Vikram Vedha' in kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada