»   » ವಿನಯ್ 2ನೇ ಚಿತ್ರ 'R..The King' ರಾಘಣ್ಣ ಮುಂದೂಡಿದ್ಯಾಕೆ?

ವಿನಯ್ 2ನೇ ಚಿತ್ರ 'R..The King' ರಾಘಣ್ಣ ಮುಂದೂಡಿದ್ಯಾಕೆ?

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ವಂಶದ ಮೂರನೇ ತಲೆಮಾರಿನ ಪ್ರತಿಭೆ ವಿನಯ್ ರಾಜ್ ಕುಮಾರ್ ಬೆಳ್ಳಿತೆರೆ ಮೇಲೆ 'ಸಿದ್ದಾರ್ಥ'ನಾಗಿ ವಿಜೃಂಭಿಸಿದ್ದಾಯ್ತು. 'ಸಿದ್ದಾರ್ಥ' ಚಿತ್ರದಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದ ವಿನಯ್ ರಾಜ್ ಕುಮಾರ್ ಪ್ರೇಕ್ಷಕರ ಮನಗೆದ್ದಿದ್ದರು.

'ಸಿದ್ದಾರ್ಥ' ನಂತರ ವಿನಯ್ ರಾಜ್ ಕುಮಾರ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಅನ್ನುವ ಪ್ರಶ್ನೆಗೆ 'ಜೋಗಿ' ಪ್ರೇಮ್ ಉತ್ತರ ನೀಡಿದ್ರು. ವಿನಯ್ ರಾಜ್ ಕುಮಾರ್ ಎರಡನೇ ಸಿನಿಮಾ 'R..The King'ಗೆ ಪ್ರೇಮ್ ನಿರ್ದೇಶಕ.

ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಪ್ರೇಮ್, ವಿನಯ್ ರಾಜ್ ಕುಮಾರ್ ಗಾಗಿ 'R..The King' ಚಿತ್ರದ ಮೂಲಕ ಆಕ್ಷನ್ ಕಟ್ ಹೇಳುವುದಕ್ಕೆ ನಿಂತರು. ಈ ವರ್ಷ ಅಣ್ಣಾವ್ರ ಹುಟ್ಟುಹಬ್ಬದ ದಿನ (ಏಪ್ರಿಲ್ 24) ಕಂಠೀರವ ಸ್ಟುಡಿಯೋದಲ್ಲಿ 'R..The King' ಟೈಟಲ್ ಲಾಂಚ್ ಮಾಡಿದ್ರು. [ವಿನಯ್ ರಾಜ್ ಹೊಸ ಚಿತ್ರ 'R The King' ಶುರು]

ಇನ್ನೇನು 'R..The King' ಶೂಟಿಂಗ್ ಶುರುವಾಯ್ತು ಅನ್ನೋಷ್ಟರಲ್ಲಿ ಈಗೊಂದು ಬ್ರೇಕಿಂಗ್ ನ್ಯೂಸ್ ಬಂದಿದೆ. 'R..The King' ಶೂಟಿಂಗ್ ಗೆ ರಾಘಣ್ಣ ಬ್ರೇಕ್ ಹಾಕಿದ್ದಾರೆ. ಅದಕ್ಕೆ ಕಾರಣ ಚಿತ್ರಕಥೆ.! ಮುಂದೆ ಓದಿ.....

'R..The King' ಪೋಸ್ಟ್ ಪೋನ್ ಆಗುವುದಕ್ಕೆ ಕಾರಣ?

ಚಿತ್ರಕಥೆ ಆಯ್ಕೆಯಲ್ಲಿ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತುಂಬಾ ಕಟ್ಟುನಿಟ್ಟು. ಅದ್ರಲ್ಲೂ, ತಮ್ಮ ಮಗನ ಸಿನಿಮಾ ಅಂದ್ರೆ ಸುಮ್ನೆನಾ. ಜಾಗರೂಕತೆಯಿಂದ ರಾಘಣ್ಣ ಕಥೆ ಆಯ್ಕೆ ಮಾಡ್ತಾರೆ. ಈಗ 'R..The King' ಮುಂದಕ್ಕೆ ಹೋಗಲು ಕಾರಣ ಚಿತ್ರಕಥೆಯಲ್ಲಿ ರಾಘಣ್ಣ ಬಯಸಿರುವ ಬದಲಾವಣೆ ಅಂತ ಹೇಳುತ್ತಿವೆ ಮೂಲಗಳು.

'R..The King' ಕಥೆಯಲ್ಲಿ ಬದಲಾವಣೆ.!

'R..The King' ಕಥೆಯಲ್ಲಿ ರಾಘಣ್ಣ ಕೊಂಚ ಬದಲಾವಣೆ ಬಯಸಿದ್ದಾರೆ. ಹೀಗಾಗಿ ಕಥೆಯಲ್ಲಿ ಚೇಂಜಸ್ ಮಾಡಲು ಕೊಂಚ ಸಮಯ ಅವಶ್ಯಕ. ಇದೇ ಕಾರಣಕ್ಕೆ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿದೆ.

ಸಾಮಾನ್ಯ ಕಥೆ ಇಷ್ಟವಿಲ್ಲ.!

'ವಜ್ರೇಶ್ವರಿ ಕಂಬೈನ್ಸ್' ಬ್ಯಾನರ್ ನಡಿ 'R..The King' ಚಿತ್ರ ನಿರ್ಮಾಣ ಮಾಡುತ್ತಿರುವುದು ಖುದ್ದು ರಾಘವೇಂದ್ರ ರಾಜ್ ಕುಮಾರ್. ವಿನಯ್ ರಾಜ್ ಕುಮಾರ್ ಎರಡನೇ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇರುವ ಕಾರಣ ಸಾಮಾನ್ಯ ಕಥೆ ಇರುವ ಚಿತ್ರ ಮಾಡಲು ರಾಘಣ್ಣನಿಗೆ ಇಷ್ಟವಿಲ್ಲವಂತೆ.

ಬೇರೆ ಕಥೆ ಮಾಡ್ತಾರಾ ಪ್ರೇಮ್?

ಈಗಾಗಲೇ ಪ್ರೇಮ್ ನೀಡಿರುವ ಕಥೆಯಲ್ಲಿ ಬದಲಾವಣೆ ಮಾಡಲಾಗುವುದೋ, ಅಥವಾ ಹೊಸ ಕಥೆಯನ್ನೇ ಪ್ರೇಮ್ ರೆಡಿ ಮಾಡುತ್ತಾರೋ ಅನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲ. [ಮುಂಬೈನಲ್ಲಿ 'R The King' ಪ್ರೇಮ್ ಚಿತ್ರತಂಡ]

'R..The King' ಟೈಟಲ್?

ಒಂದ್ವೇಳೆ ಪ್ರೇಮ್ ಬೇರೆ ಕಥೆ ರಚಿಸಿದರೆ, ಅದಕ್ಕೆ ಬೇರೆ ಟೈಟಲ್ ನೀಡಬಹುದು. ಸದ್ಯಕ್ಕೆ 'R..The King' ಟೈಟಲ್ ರಿಜಿಸ್ಟರ್ ಆಗಿದೆ ಅಷ್ಟೆ.

ವಿನಯ್ ರಾಜ್ ಕುಮಾರ್ ಏನ್ಮಾಡ್ತಿದ್ದಾರೆ?

ನಟನಾ ತರಬೇತಿಯಲ್ಲಿ ವಿನಯ್ ರಾಜ್ ಕುಮಾರ್ ಬಿಜಿಯಾಗಿದ್ದಾರೆ. ಮುಂಬೈನಲ್ಲಿ ಆಕ್ಟಿಂಗ್ ಜೊತೆಗೆ ಡ್ಯಾನ್ಸ್ ಮತ್ತು ಫೈಟಿಂಗ್ ತರಬೇತಿ ಪಡೆಯುತ್ತಿದ್ದಾರೆ. ಕಥೆ ರೆಡಿಯಾಗಿ, ರಾಘಣ್ಣ ಒಪ್ಪಿಗೆ ನೀಡಿದ ಕೂಡಲೆ ವಿನಯ್ ರಾಜ್ ಕುಮಾರ್ ಎರಡನೇ ಚಿತ್ರದ ಶೂಟಿಂಗ್ ಶುರುವಾಗಲಿದೆ.

English summary
Since, Producer Raghavendra Rajkumar wanted few changes in the script, Vinay Rajkumar starrer 'R The King' shooting is postponed. Director Prem is making changes in the story-screenplay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada