»   » ಸದ್ದೂ ಇಲ್ಲ ಸುದ್ದೀನೂ ಇಲ್ಲ : ಬುಗುರಿ ತಿರುಗುತ್ತಿಲ್ಲ

ಸದ್ದೂ ಇಲ್ಲ ಸುದ್ದೀನೂ ಇಲ್ಲ : ಬುಗುರಿ ತಿರುಗುತ್ತಿಲ್ಲ

By: ಜೀವನರಸಿಕ
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 25ನೇ ಚಿತ್ರ 'ಬುಗುರಿ'. ಚಿತ್ರದ ನಿರ್ದೇಶಕರು 'ಚೆಲ್ಲಾಟ' (2006) ಚಿತ್ರದ ಮೂಲಕ ಮೊದಲ ಬಾರಿ ಗಣೇಶ್ ಗೆ ಆಕ್ಷನ್ ಕಟ್ ಹೇಳಿದ್ದ ಎಂ ಡಿ ಶ್ರೀಧರ್. ಆದ್ರೆ ಬುಗುರಿಯ ಸದ್ದು ಕೇಳಿಸ್ತಾ ಇಲ್ಲ. ಗಣೇಶ್ ಮಾತ್ರ ಬಿಜಿ ಬಿಜಿ.

'ಸ್ಟೈಲ್ ಕಿಂಗ್' ಮುಗಿಸಿ 'ಝೂಮ್' ಚಿತ್ರವನ್ನೂ ಹೆಚ್ಚೂ ಕಡಿಮೆ ಮುಗಿಸ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಆದ್ರೆ ಇಷ್ಟೊತ್ತಿಗಾಗಲೇ ತೆರೆ ಕಾಣಬೇಕಿದ್ದ 'ಬುಗುರಿ' ಎಲ್ಹೋಯ್ತೋ ಗೊತ್ತಿಲ್ಲ. ಮಾರ್ಚ್ ನಲ್ಲೇ ಚಿತ್ರದ ಆಡಿಯೋ ರಿಲೀಸ್ ಗೆ ಪ್ಲ್ಯಾನಿಂಗ್ ಕೂಡ ನಡೆದಿತ್ತು. [ಗಣೇಶ್ 'ಬುಗುರಿ' ಆಟ, ದಿನೇಶ್ ಗಾಂಧಿಗೆ ಪ್ರಾಣ ಸಂಕಟ!]


What happened to Ganesh's movie 'Buguri'?

ಈಗ ಚಿತ್ರ ಮುಗಿದಿದೆ. ಎಲ್ಲವೂ ರೆಡಿಯಿದೆ. ಆದ್ರೆ ರಿಲೀಸ್ ಯಾವಾಗ ಗೊತ್ತಿಲ್ಲ. ಜುಲೈ 2 ಗಣೇಶ್ ಬರ್ತಡೇಗೆ ತೆರೆಗೆ ಬರೋಕೆ 'ಸ್ಟೈಲ್ ಕಿಂಗ್' ನಿರ್ದೇಶಕ ಪಿ ಸಿ ಶೇಖರ್ ತಯಾರಿಯಲ್ಲಿದ್ದಾರೆ. ಆದರೆ ತೆರೆಯ ಮೇಲೆ ಬುಗುರಿ ತಿರುಗುವುದು ಯಾವಾಗ?


'ಖುಷಿಖುಷಿಯಾಗಿ' ಚಿತ್ರ ರಿಲೀಸಾದ್ರೂ ಅಷ್ಟಾಗಿ ಖುಷಿ ಪಡೆಯದ ಗಣೇಶ್ ಅಭಿಮಾನಿಗಳು ಮಾತ್ರ ಚಾಟಿಯೂ ಕಾಣ್ತಿಲ್ಲ ಬುಗುರಿಯೂ ಕಾಣ್ತಿಲ್ಲ ಅಂತ ಕನವರಿಸ್ತಿದ್ದಾರೆ. ಗಣೇಶ್ ಜೊತೆ 'ಚೆಲ್ಲಾಟ' ಹಾಗೂ 'ಕೃಷ್ಣ' ಚಿತ್ರಗಳನ್ನು ಮಾಡಿದ್ದಾರೆ. ಇದೀಗ ಆರು ವರ್ಷಗಳ ಗ್ಯಾಪ್ ಬಳಿಕ ಮತ್ತೊಮ್ಮೆ ಇಬ್ಬರೂ ಕೈಜೋಡಿಸಿದ್ದಾರೆ. ಅಂದಹಾಗೆ 'ಬುಗುರಿ' ಪಕ್ಕಾ ಸ್ವಮೇಕ್ ಚಿತ್ರ ಎಂಬುದು ವಿಶೇಷ.


ಬುಗುರಿ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಎರಿಕಾ ಫರ್ನಾಂಡೀಸ್ ಜೋಡಿಯಾಗಿದ್ದಾರೆ ಗಣೇಶ್ ಅವರಿಗೆ. ಜಗದೀಶ್ ವಾಲಿ, ರಮೇಶ್ ಬಾಬು ಹಾಗೂ ಎವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇಷ್ಟೆಲ್ಲಾ ವಿಶೇಷಗಳಿರುವ ಸಿನಿಮಾ ಇನ್ನೂ ಯಾಕೆ ತೆರೆಗೆ ಬರುತ್ತಿಲ್ಲ ಎಂಬುದೇ ಅಭಿಮಾನಿಗಳನ್ನು ಕಾಡುತ್ತಿರುವ
ಪ್ರಶ್ನೆ.

English summary
What happened to Ganesh's upcoming movie 'Buguri'? The film started shooting in June 2014 and still now there is no news about the release. The film directed by M. D. Sridhar. It stars Ganesh, Erica Fernandes, Richa Panai in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada