»   » 'ರಂಗನಾಯಕಿ' ಆಗ್ಬೇಕಿದ್ದ ಪೂಜಾ ಎಲ್ಲಿ ಮರೆಯಾದರು?

'ರಂಗನಾಯಕಿ' ಆಗ್ಬೇಕಿದ್ದ ಪೂಜಾ ಎಲ್ಲಿ ಮರೆಯಾದರು?

Posted By:
Subscribe to Filmibeat Kannada

'ರಂಗನಾಯಕಿ' ಅಂತ ಹೇಳಿದ ತಕ್ಷಣ, ಎಲ್ಲರ ಕಣ್ಮುಂದೆ ತಕ್ಷಣ ಬರುವುದು ಒಂದ್ಕಾಲದ ಕನಸಿನ ಕನ್ಯೆ ನಟಿ ಆರತಿ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ರಂಗನಾಯಕಿ' ಚಿತ್ರ, ನಟಿ ಆರತಿ ವೃತ್ತಿಬದುಕಿಗೆ ಹೊಸ ತಿರುವು ನೀಡಿತ್ತು.

1981 ರ ಕ್ಲಾಸಿಕ್ ಸಿನಿಮಾ 'ರಂಗನಾಯಕಿ'ಯನ್ನ 2014 ರಲ್ಲಿ ನೆನಪಿಸಿದ್ದು ನಟಿ ಪೂಜಾ ಗಾಂಧಿ. ಈಗಾಗಲೇ 'ಅಭಿನೇತ್ರಿ' ಚಿತ್ರದ ಮೂಲಕ ನಟಿ ಕಲ್ಪನಾ ಬದುಕಿನ ಚಿತ್ರಣವನ್ನು ತೆರೆಮೇಲೆ ತರುತ್ತಿರುವ ನಟಿ ಪೂಜಾ ಗಾಂಧಿ, 'ರಂಗನಾಯಕಿ' ಅನ್ನುವ ಹೆಸರಿನ ಸಿನಿಮಾ ಮಾಡ್ತಾರೆ ಅನ್ನುವ ಸುದ್ದಿ ಕೂಡ ಗಾಂಧಿನಗರದಲ್ಲಿ ಹರಿದಾಡಿತ್ತು. [ಕಲ್ಪನಾ-ಪುಟ್ಟಣ್ಣ ಬಗ್ಗೆ 'ಅಭಿನೇತ್ರಿ' ಚಿತ್ರದಲ್ಲೇನಿದೆ..?]

What happened to Pooja Gandhi1

ಹೇಳಿ ಕೇಳಿ ಚಿತ್ರದ ಹೆಸರೇ 'ರಂಗನಾಯಕಿ'. ಅಂದ್ಮೇಲೆ ಚಿತ್ರದಲ್ಲಿ ನಟಿ ಆರತಿಯ 'ಚಿತ್ರಬದುಕು' ತೆರೆಮೇಲೆ ಅನಾವರಣವಾಗಬಹುದು ಅಂತ ಗಾಂಧಿನಗರದ ಪಂಡಿತರು ಲೆಕ್ಕಾಚಾರ ಹಾಕಿದ್ದರು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಆದ್ರೆ, ಈ ಊಹಾಪೋಹಗಳ ಬಗ್ಗೆ ನಟಿ ಪೂಜಾ ಗಾಂಧಿ ಆಗಲಿ, ನಿರ್ದೇಶಕ ಶ್ರೀನಿವಾಸ್ ರಾಜು ಆಗಲಿ ತುಟಿಕ್ ಪಿಟಿಕ್ ಅಂದಿರಲಿಲ್ಲ. 'ರಂಗನಾಯಕಿ' ಸಿನಿಮಾ ಮಾಡುವುದು ಪಕ್ಕಾ ಆಗಿದ್ದರೂ, ರಂಗನಾಯಕಿಯ ಹಿನ್ನಲೆಯ ಬಗ್ಗೆ ಇಬ್ಬರೂ ಬಾಯ್ಬಿಟ್ಟಿರಲಿಲ್ಲ. ['ನಾಟಿ ಕೋಳಿ' ಸಾರಿಗೆ 'ರಾಗಿಣಿ'ಯ ಮಿರ್ಚಿ ಮಸಾಲೆ]

What happened to Pooja Gandhi2

ಅಷ್ಟರಲ್ಲೇ ನಿರ್ದೇಶಕ ಶ್ರೀನಿವಾಸ್ ರಾಜು ಉಪ್ಪಿ ಜೊತೆ 'ಶಿವಂ' ನಲ್ಲಿ ಬಿಜಿಯಾದರು. ಇನ್ನೂ ಪೂಜಾ ಮೇಡಂ 'ಅಭಿನೇತ್ರಿ'ಯನ್ನ ತೆರೆಮೇಲೆ ತರುವುದಕ್ಕೆ ಓಡಾಟ ನಡೆಸುತ್ತಲೇ ಇದ್ದಾರೆ. ಹಾಗಾದ್ರೆ, 'ಶಿವಂ' ಮತ್ತು 'ಅಭಿನೇತ್ರಿ' ನಂತ್ರ 'ರಂಗನಾಯಕಿ' ಗಾಂಧಿನಗರದಲ್ಲಿ ಸದ್ದು ಮಾಡಬಹುದಾ? ಅನ್ನುವ ಪ್ರಶ್ನೆಗೆ ಉತ್ತರ, 'ಖಂಡಿತ ಇಲ್ಲ!'.

'ಅಭಿನೇತ್ರಿ' ನಂತ್ರ ಪೂಜಾ ಗಾಂಧಿ, ತಮ್ಮ ಪ್ರೊಡಕ್ಷನ್ ನಲ್ಲಿ 'ಅಭಿನೇತ್ರಿ' ಯಂಥ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನೂ ಶ್ರೀನಿವಾಸ್ ರಾಜು, ರಾಗಿಣಿಗಾಗಿ 'ನಾಟಿ ಕೋಳಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಹಾಗಾದ್ರೆ 'ರಂಗನಾಯಕಿ' ಕಥೆ ಏನು ಅಂದ್ರೆ, 'ಸದ್ಯಕ್ಕೆ ಆ ಸಿನಿಮಾ ಮಾಡುತ್ತಿಲ್ಲ' ಅಂತಾರೆ ನಿರ್ದೇಶಕ ಶ್ರೀನಿವಾಸ್ ರಾಜು. [ಜನವರಿಯಲ್ಲಿ ಅಭಿನೇತ್ರಿ ಭಾಗ-2 ಶುರು..!?]

What happened to Pooja Gandhi3

'ದಂಡುಪಾಳ್ಯ' ಸಿನಿಮಾ ಮಾಡಿದ್ಮೇಲೆ ಮತ್ತೆ ಪೂಜಾ ಗಾಂಧಿ ಜೊತೆ 'ರಂಗನಾಯಕಿ' ಚಿತ್ರದಲ್ಲಿ ಆಕ್ಷನ್ ಕಟ್ ಹೇಳಬೇಕಿದ್ದ ಶ್ರೀನಿವಾಸ್ ರಾಜು ಗೆ ಇದೀಗ ಈ ಪ್ರಾಜೆಕ್ಟ್ ಮೇಲೆ ಮನಸ್ಸಿದ್ದ ಹಾಗಿಲ್ಲ. ಇದಕ್ಕೆ ಪೂಜಾ 'ನಿರ್ಮಾಪಕಿ' ಆದ್ಮೇಲಿನ ವರ್ತನೆ ಕಾರಣ ಅಂತ ಗಾಂಧಿನಗರದ ಗಲ್ಲಿಗಳು ಹೇಳುತ್ತಿವೆ.

ಇನ್ನೂ ಪೂಜಾ ಗಾಂಧಿಗೆ ಈ ಬಗ್ಗೆ ಕೇಳಿದರೆ, ''ನನ್ನ ಸಿನಿಮಾ ಬಗ್ಗೆ ಮಾತಾಡಿ'' ಅಂತಾರೆ. ಅವರವರ ಸಿನಿಮಾ ಬಗ್ಗೆ ಹೇಳುತ್ತಾ, ಇಬ್ಬರೂ ಸೇರಿ ಪ್ಲಾನ್ ಮಾಡಿದ್ದ 'ರಂಗನಾಯಕಿ' ಈಗ ಯಾರಿಗೂ ಬೇಡ. (ಫಿಲ್ಮಿಬೀಟ್ ಕನ್ನಡ)

English summary
Looks like Actress Pooja Gandhi starrer 'Ranganayaki' movie has been shelved. After Dandupalya, Director Srinivas Raju was supposed to direct Ranganayaki for Pooja Gandhi. But seems like both Pooja Gandhi and Srinivas Raju are least interested with project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada