Don't Miss!
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ 56ನೇ ಸಿನಿಮಾದ ಟೈಟಲ್ ಏನು? ಮೂರರಲ್ಲಿ ಯಾವುದು ಫೈನಲ್ ?
ಸೂಪರ್‌ಸ್ಟಾರ್ ಬರ್ತ್‌ಡೇ ಅಂದರೆ ಚಿತ್ರರಂಗದಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಅಭಿಮಾನಿಗಳು ಮನೆ ಮುಂದೆ ಜಮಾಯಿಸುತ್ತಾರೆ. ಕೇಕ್, ಹೂವಿನ ಹಾರ, ಅಭಿಮಾನಿಗಳ ಜೈಕಾರ ಎಲ್ಲವೂ ಕಾಮನ್ ಆಗಿರುತ್ತೆ. ಆದರೆ, ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್‌ವುಡ್ ತಾರೆಯರು ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಂಡಿಲ್ಲ. ಇದಕ್ಕೆ ಕಾರಣ ಕೋವಿಡ್. ಹಾಗೇ ಇಂದು(ಫೆ 16) ದರ್ಶನ್ ಕೂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ, ಅಭಿಮಾನಿಗಳು ಜೊತೆಗಿಲ್ಲ ಅಷ್ಟೆ.
ಈ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುವಂತಿಲ್ಲ. ಏಕೆಂದರೆ, ದರ್ಶನ್ ಅಭಿನಯದ 56ನೇ ಸಿನಿಮಾ ಕೂಡ ಅನೌನ್ಸ್ ಆಗಿದೆ. 'ಕ್ರಾಂತಿ' ಸಿನಿಮಾದ ಫಸ್ಟ್ ಲುಕ್ ಟೀಸರ್ ನೋಡಿ ಎಂಜಾಯ್ ಮಾಡಿದ ಅಭಿಮಾನಿಗಳಿಗೆ 56ನೇ ಸಿನಿಮಾ ಕೂಡ ಉಡುಗೊರೆಯಾಗಿ ಸಿಕ್ಕಿದೆ. ಹಾಗಿದ್ದರೆ, ದರ್ಶನ್ 56ನೇ ಸಿನಿಮಾ ಟೈಟಲ್ ಅನ್ನುವ ಕುತೂಹಲವಿದ್ದೇ ಇರುತ್ತೆ. ಇದಕ್ಕೆ ಸ್ಯಾಂಡಲ್‌ವುಡ್ ಮಂದಿ ಮೂರು ಟೈಟಲ್ ಹೆಸರು ಹೇಳುತ್ತಿದ್ದಾರೆ. ಅವುಗಳಲ್ಲಿ ಒಂದನ್ನು ಇಡುವ ಸಾಧ್ಯತೆ ಇದೆ ಅಂತಿದ್ದಾರೆ.

ದರ್ಶನ್ ಸಿನಿಮಾಗೆ ರಾಕ್‌ಲೈನ್ ನಿರ್ಮಾಪಕ
ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಆಗಲೇ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ರಾಕ್‌ಲೈನ್ ವೆಂಕಟೇಶ್ ದರ್ಶನ್ ಅಭಿನಯದ 56ನೇ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ತರುಣ್ ಕಿಶೋರ್ ಸುಧೀರ್ ಈ ಸಿನಿಮಾದ ನಿರ್ದೇಶಕ. ದರ್ಶನ್ ಹುಟ್ಟುಹಬ್ಬದಂದೇ ಈ ಸಿನಿಮಾವನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ಈ ಮೂವರು ಕಾಂಬಿನೇಷನ್ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್ ಕೌತುಕ ಹೆಚ್ಚಾಗಿದೆ. ಕೇವಲ ಪೋಸ್ಟರ್ ಮೂಲಕ ಸಿನಿಮಾ ಅನೌನ್ಸ್ ಮಾಡಿದ್ದು, ಹೆಚ್ಚು ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
|
ಈ ಚಿತ್ರಕ್ಕೆ 3 ಟೈಟಲ್: ಯಾವುದು ಫೈನಲ್
'ರಾಬರ್ಟ್' ಬಳಿಕ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಯಾವಾಗ ಅನೌನ್ಸ್ ಆಗುತ್ತೋ ಅಂತ ಕಾದು ಕೂತಿದ್ದರು. ದರ್ಶನ್ ಬರ್ತ್‌ಡೇ 56ನೇ ಘೋಷಣೆಯಾಗಿದೆ. ಇದೇ ವೇಳೆ ಈ ಸಿನಿಮಾದ ಟೈಟಲ್ ಏನಿರಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ. ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ನಿರ್ದೇಶಕ ತರುಣ್ ಸುಧೀರ್ ಮುಂದೆ ಮೂರು ಟೈಟಲ್‌ಗಳಿವೆ. ಮೊದಲನೆಯದ್ದು 'ಗಧೆ'. ಎರಡನೇ ಟೈಟಲ್ 'ಕಾಟೇರಾ'. ಮೂರನೇ ಟೈಟಲ್ 'ಚೌಡಯ್ಯ'. ಈ ಮೂರು ಟೈಟಲ್‌ಗಳಲ್ಲಿ ಒಂದು ಟೈಟಲ್ ಫೈನಲ್ ಆಗುವುದು ಪಕ್ಕಾ ಎನ್ನುತ್ತಿದ್ದಾರೆ ಆಪ್ತ ಮೂಲಗಳು. ಆದರೆ, ಈ ಟೈಟಲ್ ಬಗ್ಗೆ ರಾಕ್‌ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಈ ಮೂವರು ಅಧಿಕೃತವಾಗಿ ಟೈಟಲ್ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಇಡೀ ಊರಿನ ಸೆಟ್ ಹಾಕಲಿದೆ ಚಿತ್ರತಂಡ
ದರ್ಶನ್ 56ನೇ ಸಿನಿಮಾ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ತರುಣ್ ಸುಧೀರ್ ಈ ಸಿನಿಮಾಗಾಗಿ ಬೃಹತ್ ಸೆಟ್ ಹಾಕುತ್ತಿದ್ದಾರೆ. ಔಟ್ ಅಂಡ್ ಔಟ್ ಮಾಸ್ ಸಿನಿಮಾ ಆಗಿರುವುದರಿಂದ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿದ್ದಾರಂತೆ. ದರ್ಶನ್ 56ನೇ ಸಿನಿಮಾಗಾಗಿ ಒಂದು ಊರನ್ನೇ ಸೆಟ್ಟಲ್ಲಿ ನಿರ್ಮಾಣ ಮಾಡಲಿದ್ದಾರಂತೆ. ಹೀಗಾಗಿ ತಮ್ಮ ಕಲ್ಪನೆಗೆ ತಕ್ಕಂತೆ ಆ ಸೆಟ್ಟು ನಿರ್ಮಾಣ ಆಗಿದೆ. ಬಹುತೇಕ ಸಿನಿಮಾ ಇದೇ ಸೆಟ್ಟಲ್ಲಿ ಚಿತ್ರೀಕರಣಗೊಳ್ಳಬಹುದು ಎಂದು ಸ್ಯಾಂಡಲ್‌ವುಡ್ ಮಂದಿ ಮಾತಾಡಿಕೊಳ್ಳುತ್ತಿದೆ.

ರಾಬರ್ಟ್ ಜೋಡಿ ಮೇಲೆ ನಿರೀಕ್ಷೆ
ರಾಕ್‌ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ದರ್ಶನ್ ಹಾಗೂ ತರುಣ್ ಜೋಡಿಯ ಮೊದಲ ಸಿನಿಮಾವೇ 100 ಕೋಟಿ ಕಲೆ ಹಾಕಿತ್ತು. ಹೀಗಾಗಿ ಎರಡನೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ಏಪ್ರಿಲ್ 10ರ ಬಳಿ ಚಿತ್ರೀಕರಣ ಆರಂಭಿಸುವ ಸಾಧ್ಯತೆಗಳಿವೆ ಅಂತ ಆಪ್ತರು ಮಾತಾಡಿಕೊಳ್ಳುತ್ತಿದ್ದಾರೆ. ರಾಕ್‌ಲೈನ್ ನಿರ್ಮಾಣ ಅಂದ್ಮೇಲೆ ಸಿನಿಮಾ ರಿಚ್ ಆಗಿರುತ್ತೆ. ತರುಣ್ ಸುಧೀರ್- ದರ್ಶನ್ ಕಾಂಬಿನೇಷನ್ ಈ ಹಿಂದೆ ಗೆದ್ದಿದೆ. ಹೀಗಾಗಿ 56ನೇ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗತ್ತೆ ಅಂತ ಫ್ಯಾನ್ಸ್ ತೀರ್ಮಾನ ಮಾಡಿಬಿಟ್ಟಿದ್ದಾರೆ.