»   » ಚಿಕಾಗೋ ಸ್ಟಾರ್ ಎಲ್ಲಿ ಹೋದರು ಗುರುವೇ?

ಚಿಕಾಗೋ ಸ್ಟಾರ್ ಎಲ್ಲಿ ಹೋದರು ಗುರುವೇ?

By: ಜೀವನರಸಿಕ
Subscribe to Filmibeat Kannada

ಚಿಕಾಗೋ ಸ್ಟಾರ್ ಯಾರು ಅಂತ ಕನ್ಫ್ಯೂಸ್ ಆಗ್ಬೇಡಿ. ಕನ್ನಡದ ಚಿಕಾಗೋ ಸ್ಟಾರ್ ಅಂದ್ರೆ ಅದು 'ಮೈನಾ' ನಾಯಕ ಚೇತನ್. ಚೇತನ್ ಸ್ಯಾಂಡಲ್ ವುಡ್ ನಲ್ಲಿ ಕಾಣಿಸ್ತಾ ಇಲ್ಲ. ಹಾಗಾದ್ರೆ ಎಲ್ಲಿ ಕಳೆದುಹೋದ್ರು ಅನ್ನೋ ಪ್ರಶ್ನೆ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳನ್ನ ಕಾಡ್ತಾ ಇದೆ.

'ಮೈನಾ' ಸಿನಿಮಾ ಏನೋ ನೂರು ದಿನ ಪ್ರದರ್ಶನ ಕಾಣ್ತು. ಸಿನಿಮಾ ಯಶಸ್ವಿಯಾಯ್ತು. ಸಿನಿಮಾ ಗೆದ್ದರೆ ಚಿತ್ರದ ನಾಯಕನಿಗೆ ನಾಲ್ಕೈದು ಆಫರ್ ಬಂದೇ ಬರ್ತವೆ. ಅಂತಾದ್ರಲ್ಲಿ ಹಂಡ್ರೆಡ್ ಡೇಸ್ ಸಿನಿಮಾ ಅಂದ್ರೆ ಆಫರ್ ಗಳ ಸುರಿಮಳೇನೇ ಆಗುತ್ತೆ. [ವಿಮರ್ಶೆ : 'ಮೈನಾ' ಎಂಬ ಸುಂದರ ದೃಶ್ಯ ಕಾವ್ಯ]


ಆದರೆ ಮೈನಾ ಸಿನಿಮಾ ಗೆದ್ದು ಎಂಟು ತಿಂಗಳು ಕಳೀತಾ ಬಂದ್ರು ನಾಯಕ ಚೇತನ್ ಮಾತ್ರ ಬೇರ್ಯಾವ ಹೊಸ ಸಿನಿಮಾದಲ್ಲೂ ಸುದ್ದಿಯಾಗಿಲ್ಲ. ನಿರ್ದೇಶಕ, ನಿರ್ಮಾಪಕರಂತೂ ಗೆದ್ದ ಹೀರೋಗೆ ಕೋಟಿ ಕೊಟ್ಟು ಸಿನಿಮಾಗೆ ಆಫರ್ ಕೊಟ್ಟಿರ್ತಾರೆ.

ಆದರೆ ಚೇತನ್ ಎಲ್ಲಿಹೋದ್ರು. ಯಾಕೆ ಚೇತನ್ ಕಾಣ್ತಾ ಇಲ್ಲ. ಇಷ್ಟಕ್ಕೂ ಚೇತನ್ ಸಾಮಾಜಿಕ ಕಳಕಳಿಯ ಕೆಲಸಗಳನ್ನ ಮಾಡೋದು ಜಾಸ್ತಿ. ಇತ್ತೀಚೆಗೆ ಚೇತನ್ ಎಂಡೋಸಲ್ಫಾನ್ ಪೀಡಿತರಿಗೆ ಸಹಾಯ ಮಾಡೋಕೆ ಸಂಘ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ರು. ಆದರೆ ಸಿನಿಮಾ ವಿಷಯದಲ್ಲಿ ಮಾತ್ರ ಚೇತನ್ ಸುದ್ದಿಯೇ ಇಲ್ಲ. [ನಾಗಶೇಖರೂ ದಯವಿಟ್ಟು ಟ್ರಾಜಿಡಿ ಬಿಡಪ್ಪ]

ಸ್ಯಾಂಡಲ್ ವುಡ್ ನಲ್ಲಿ ಹೊಸ ಹೀರೋಯಿನ್ ಗಳ ಕೈ ಬೀಡೋದು ಸಾಮಾನ್ಯ. ಆದರೆ ಗೆದ್ದ ಹೀರೋ ಚೇತನ್ ಗೆ ಸಿನಿಮಾ ಆಫರ್ ಗಳೇ ಇಲ್ವಾ. ಅಥವಾ ಬಂದ ಸಿನಿಮಾಗಳನ್ನ ಚೇತನ್ ಒಪ್ಪಿಕೊಳ್ತಾ ಇಲ್ವಾ. ಅವ್ರೆ ಉತ್ತರ ಕೊಡ್ಬೇಕು. ಎಲ್ಲಿದ್ದೀರಾ ಚಿಕಾಗೋ ಸ್ಟಾರ್.

English summary
Where is Chicago star Chetan Kumar now? After 'Myna' movie becomes super hit in box office the actor has no offers in his hand? What is the reason? 
Please Wait while comments are loading...