»   » ದಿನಕರ್ ಮತ್ತು ಬುಲೆಟ್ ಪ್ರಕಾಶ್ ಮಧ್ಯೆ ಹುಳಿ ಹಿಂಡಿದವರು ಯಾರು?

ದಿನಕರ್ ಮತ್ತು ಬುಲೆಟ್ ಪ್ರಕಾಶ್ ಮಧ್ಯೆ ಹುಳಿ ಹಿಂಡಿದವರು ಯಾರು?

By: ಹರಾ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'ಮೆಜೆಸ್ಟಿಕ್' ಸಮಯದಿಂದಲೂ ದರ್ಶನ್ ಮತ್ತು ಕುಟುಂಬಕ್ಕೆ ನಟ ಬುಲೆಟ್ ಪ್ರಕಾಶ್ ಅತ್ಯಾಪ್ತ.

ದರ್ಶನ್ ರವರ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿರುವ ಬುಲೆಟ್ ಪ್ರಕಾಶ್, ದರ್ಶನ್ ರವರ ಏಳು-ಬೀಳುಗಳನ್ನ ಕಣ್ಣಾರೆ ಕಂಡಿದ್ದಾರೆ. ದರ್ಶನ್ ಜೊತೆ ಕಷ್ಟ-ಸುಖ ಹಂಚಿಕೊಂಡಿದ್ದಾರೆ. [ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!]

ಬರೀ ದರ್ಶನ್ ಜೊತೆ ಮಾತ್ರ ಅಲ್ಲ, ದರ್ಶನ್ ಸಹೋದರ ದಿನಕರ್ ತೂಗುದೀಪ ಮತ್ತು ದರ್ಶನ್ ಆಪ್ತರಿಗೆಲ್ಲರಿಗೂ ಬುಲೆಟ್ ಪ್ರಕಾಶ್ ಜಿಗರಿ ದೋಸ್ತ್.

ದಶಕಗಳಿಂದ ಯಾವುದೇ ಭಿನ್ನಾಭಿಪ್ರಾಯ, ಜಗಳ ಇಲ್ಲದೆ ಗಳಸ್ಯಕಂಠಸ್ಯದಂತಿದ್ದ ತೂಗುದೀಪ ಫ್ಯಾಮಿಲಿ ಮತ್ತು ಬುಲೆಟ್ ಪ್ರಕಾಶ್ ಮಧ್ಯೆ ನಿನ್ನೆ ಇದ್ದಕ್ಕಿದ್ದಂತೆ ದೊಡ್ಡ ರಾದ್ಧಾಂತ ಆಗಲು ಕಾರಣವೇನು? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಕಿಡಿ ಹತ್ತಿದ್ದು ಒಂದು ಪ್ರೋಗ್ರಾಂ ನಿಂದ!

ಬುಲೆಟ್ ಪ್ರಕಾಶ್ ನಿರ್ಮಾಣದಲ್ಲಿ ದರ್ಶನ್ ಅಭಿನಯಿಸಲು ಒಪ್ಪಿಕೊಂಡಿರುವ 'ಸುಲ್ತಾನ್' ಚಿತ್ರದ ಬಗ್ಗೆ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. 'ಸುಲ್ತಾನ್' ಚಿತ್ರದ ಬಗ್ಗೆ ವರದಿಯಾಗಬೇಕಂದ್ರೆ, ಬುಲೆಟ್ ಪ್ರಕಾಶ್ ಅಥವಾ ದರ್ಶನ್ ಮಾತನಾಡಬೇಕು. ಈ ಬಗ್ಗೆ ದರ್ಶನ್ ಎಲ್ಲೂ ಮಾತನಾಡಿಲ್ಲ. ಅಷ್ಟಕ್ಕೂ 'ಸುಲ್ತಾನ್' ದರ್ಶನ್ ರವರ 52ನೇ ಸಿನಿಮಾ ಆಗಿರುವುದರಿಂದ ಈಗಲೇ ಚಿತ್ರದ ಪ್ರಮೋಷನ್ ಅನವಶ್ಯಕ ಅನ್ನೋದು ದಿನಕರ್ ತೂಗುದೀಪ ಅಭಿಪ್ರಾಯ. [ಬುಲೆಟ್ ಪ್ರಕಾಶ್ v/s ದಿನಕರ್ ; ಅಸಲಿಗೆ ನಿನ್ನೆ ರಾತ್ರಿ ನಡೆದದ್ದೇನು?]

ಮೊದಲು ಮಾತಾಗಿದ್ದು ಇದೇ ವಿಷ್ಯಕ್ಕೆ!

ಖಾಸಗಿ ವಾಹಿನಿಯಲ್ಲಿ ಈ ವರದಿ ಕಂಡು ದಿನಕರ್ ತೂಗುದೀಪ, ನಟ ಬುಲೆಟ್ ಪ್ರಕಾಶ್ ಗೆ ಫೋನ್ ಮಾಡಿ ಈಗಲೇ 'ಸುಲ್ತಾನ್' ಚಿತ್ರದ ಬಗ್ಗೆ ಪ್ರಮೋಷನ್ ಮಾಡದಂತೆ ಹೇಳಿದ್ದಾರೆ. ಅದಕ್ಕೆ ಬುಲೆಟ್ ಪ್ರಕಾಶ್ ಕೂಡ ಒಪ್ಪಿಕೊಂಡಿದ್ದಾರೆ. [ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

'ಮಾಸ್ತಿ ಗುಡಿ' ಮುಹೂರ್ತದಲ್ಲಿ ಆಗಿದ್ದೇನು?

ಮೊನ್ನೆ ಮೊನ್ನೆಯಷ್ಟೇ ದುನಿಯಾ ವಿಜಯ್ ಅಭಿನಯದ 'ಮಾಸ್ತಿ ಗುಡಿ' ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಮುಹೂರ್ತದಲ್ಲಿ ದಿನಕರ್ ತೂಗುದೀಪ ಮತ್ತು ಬುಲೆಟ್ ಪ್ರಕಾಶ್ ಕೂಡ ಭಾಗವಹಿಸಿದರು. ಇಬ್ಬರು ಕೈ ಕುಲುಕಿ, ಅಪ್ಪಿಕೊಂಡು ಹೊರಟರು. ['ದಿನಕರ್ ತೂಗುದೀಪ ಅವರಿಗೆ ಅಹಂಕಾರ ನೆತ್ತಿಗೇರಿದೆ!']

ಬುಲೆಟ್ ಪ್ರಕಾಶ್ ಗೆ ಸಿಟ್ಟು ಬರಲು ಕಾರಣ ಏನು?

'ಮಾಸ್ತಿ ಗುಡಿ' ಮುಹೂರ್ತ ಸಮಾರಂಭದಲ್ಲಿ ಬುಲೆಟ್ ನಿರ್ಮಾಣ ಮಾಡಲು ಹೊರಟಿರುವ 'ಸುಲ್ತಾನ್' ಚಿತ್ರದ ಬಗ್ಗೆ ದಿನಕರ್ ತೂಗುದೀಪ ಹಗುರವಾಗಿ ಮಾತನಾಡಿದರಂತೆ. ''ಬುಲೆಟ್ ಸುಮ್ಮನೆ ಹೇಳಿಕೊಂಡು ಓಡಾಡುತ್ತಿದ್ದಾನೆ. ಆ ಸಿನಿಮಾ ಆಗಲ್ಲ'' ಅಂತ ದಿನಕರ್ ತೂಗುದೀಪ 'ಯಾರ?' ಬಳಿಯೋ ಹೇಳಿದರಂತೆ.! ಹಾಗಂತ ಬುಲೆಟ್ ಪ್ರಕಾಶ್ ಹೇಳ್ತಾರೆ. [ಬುಲೆಟ್ ಪ್ರಕಾಶ್-ದಿನಕರ್ ಕಿರಿಕ್; 'ಸುಲ್ತಾನ್' ಚಿತ್ರದ ಕಥೆ ಫಿನಿಶ್!?]

ಅದು 'ಯಾರು?'

ದಿನಕರ್ ತೂಗುದೀಪ ಹೇಳುವ ಪ್ರಕಾರ, 'ಮಾಸ್ತಿ ಗುಡಿ' ಸಿನಿಮಾ ಮುಹೂರ್ತದ ದಿನ ಬುಲೆಟ್ ಪ್ರಕಾಶ್ ಬಗ್ಗೆ ಮತ್ತವರ 'ಸುಲ್ತಾನ್' ಚಿತ್ರದ ಬಗ್ಗೆ ಯಾರ ಬಳಿಯೂ ಮಾತನಾಡಿಲ್ಲ. [ಸಂಧಾನ ಸಕ್ಸಸ್; ದಿನಕರ್ - ಬುಲೆಟ್ ಪ್ರಕಾಶ್ ವಿವಾದ ಕ್ಲೋಸ್!]

ಬುಲೆಟ್ ಹೇಳುವುದೇ ಬೇರೆ!

'ಮಾಸ್ತಿ ಗುಡಿ' ಮುಹೂರ್ತ ಸಮಾರಂಭದಲ್ಲಿ ದಿನಕರ್ ಮಾತನಾಡಿರುವ ಬಗ್ಗೆ ಬುಲೆಟ್ ಪ್ರಕಾಶ್ ಗೆ 'ಯಾರೋ?' ಹೇಳಿದ್ದಾರೆ. ಈ ಬಗ್ಗೆ ಬೇಸರಗೊಂಡ ಬುಲೆಟ್ ಪ್ರಕಾಶ್ ಮೊನ್ನೆ ರಾತ್ರಿ ದಿನಕರ್ ಗೆ ಫೋನ್ ಮಾಡಿದ್ದಾರೆ.

ಆಮೇಲಿನ ಗಲಾಟೆ ನಿಮಗೆ ಗೊತ್ತಲ್ವಾ!

ಫೋನ್ ಮಾಡಿ ಮಾತಿನ ಚಕಮಕಿ ಆದ ಬಳಿಕ ಹೆಬ್ಬಾಳದ ಮಂಜರಿ ಸ್ಟುಡಿಯೋದಲ್ಲಿ ದಿನಕರ್, ಪಿಸ್ತಾ ಸೀನ ಮತ್ತು ಮಲ್ಲಿಕಾರ್ಜುನ್ ಜೊತೆ ಮಾತನಾಡಲು ಬುಲೆಟ್ ಪ್ರಕಾಶ್ ಹೋಗಿದ್ದಾರೆ. ಆಮೇಲೆ 'ಹಲ್ಲೆ ಆಯ್ತು' ಅಂತ ಬುಲೆಟ್ ಹೇಳಿದ್ರೆ, 'ಎಲ್ಲಾ ಸುಳ್ಳು' ಅಂತ ದಿನಕರ್ ಹೇಳ್ತಾರೆ. 'ನಾನು ಹೇಳುವುದೇ ಸತ್ಯ' ಅಂತ ಬುಲೆಟ್ ಪ್ರಕಾಶ್ ಅಮೃತಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ದಿನಕರ್ ವಿರುದ್ಧ ಜೀವ ಬೆದರಿಕೆ ದೂರು ನೀಡಿದ್ದಾರೆ.

ಪೊಲೀಸ್ ಸ್ಟೇಷನ್ ನಲ್ಲಿ ಸಂಧಾನ

ಮಾಧ್ಯಮದಲ್ಲಿ ಬ್ರೇಕಿಂಗ್ ನ್ಯೂಸ್ ಆದ ನಂತರ ಅಮೃತಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಇಬ್ಬರ ಮಧ್ಯೆ ಸಂಧಾನ ಯಶಸ್ವಿ ಆಗುತ್ತೆ. ಆದರೂ ಬುಲೆಟ್ ಪ್ರಕಾಶ್ ಮನಸ್ಸಲ್ಲಿ ಕೆಲ ವಿಷಯ ಕೊರೆಯುತ್ತಿರುವುದು ಮಾತ್ರ ಸುಳ್ಳಲ್ಲ.

ದಿನಕರ್ ಬಗ್ಗೆ ಬುಲೆಟ್ ಬಳಿ ತಂದಿಟ್ಟವರು ಯಾರು?

'ದಿನಕರ್ ಹಾಗೆ ಮತನಾಡಿದ್ದಾರೆ ಅಂತ 'ಯಾರೋ?' ಹೇಳಿದ್ದಾರೆ ಅಂತ ಬುಲೆಟ್ ಪ್ರಕಾಶ್ ಹೇಳ್ತಾರೆ ಹೊರತು, ಅದು 'ಯಾರು?' ಅಂತ ಕ್ಲಾರಿಟಿ ನೀಡಿಲ್ಲ. ದಿನಕರ್ ಕೂಡ ಇಷ್ಟೆಲ್ಲಾ ಗಲಾಟೆಗೆ ಕಾರಣವಾದ ಅವರು 'ಯಾರು?' ಅಂತ ತಿಳಿಯಲು ಕಾತರರಾಗಿದ್ದಾರೆ.

ಬುಲೆಟ್ ಪ್ರಕಾಶ್ ಏಳಿಗೆ ಸಹಿಸಲು ಆಗದೇ..?

ಇದುವರೆಗೂ ಕಾಮಿಡಿ ನಟನಾಗಿದ್ದ ಬುಲೆಟ್ ಪ್ರಕಾಶ್ ಏಕ್ದಂ ನಿರ್ಮಾಪಕನ ಪಟ್ಟಕ್ಕೇರಿದ್ದು ಕೆಲವರಿಗೆ ಸಹಿಸಲು ಅಸಾಧ್ಯವಾಯ್ತೇನೋ? ಈ ಅನುಮಾನಕ್ಕೆ ಬುಲೆಟ್ ಪ್ರಕಾಶ್ ಕೂಡ ಸಹಮತ ವ್ಯಕ್ತಪಡಿಸುತ್ತಾರೆ.

ಬುಲೆಟ್ ಪ್ರಕಾಶ್-ದರ್ಶನ್ ಸ್ನೇಹ ಸಹಿಸಲು ಆಗದೇ..?

ದರ್ಶನ್ ಮತ್ತು ಬುಲೆಟ್ ಪ್ರಕಾಶ್ ರವರ ಸ್ನೇಹ ಸಹಿಸಲು ಆಗದೇ ಇದ್ದವರು ದಿನಕರ್ ಮತ್ತು ಬುಲೆಟ್ ಮಧ್ಯೆ ಹುಳಿ ಹಿಂಡಿದ್ದಾರಾ ಅಂತ ಇನ್ನೂ ಕೆಲವರು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಸ್ನೇಹ ಮುಖ್ಯ!

ಮಾತು ಏನೇ ಬಂದರೂ, ಸ್ನೇಹಕ್ಕೆ ಬೆಲೆ ಕೊಡುವವರು ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳದೇ ಇದ್ದರೆ ಸ್ನೇಹಕ್ಕೆ ಎಂದೂ ಸಾವಿಲ್ಲ. ಏನಂತೀರಿ.?

English summary
Bullet Prakash has lodged complaint in Amruthahalli Police Station, Bengaluru against Director Dinakar Toogudeepa for threatening him on February 3rd. But who created rift between Bullet Prakash and Dinakar Toogudeepa? is just a question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada