»   » 'ಎಂದೆಂದಿಗೂ' ಹೀಗಾಗಬಾರದು ಅಂತ ರಾಧಿಕಾ ಪಂಡಿತ್

'ಎಂದೆಂದಿಗೂ' ಹೀಗಾಗಬಾರದು ಅಂತ ರಾಧಿಕಾ ಪಂಡಿತ್

Posted By: ಜೀವನರಸಿಕ
Subscribe to Filmibeat Kannada

ಈ ಹಿಂದೆ ರಾಮ್ ದೀಪ್ ನಿರ್ದೇಶನದ ಅನೀಶ್ ತೇಜೇಶ್ವರ್ ಅಭಿನಯದ 'ನನ್ ಲೈಫಲ್ಲಿ' ಅನ್ನೋ ಚಿತ್ರ ಶೂಟಿಂಗ್ ಫೂಟೇಜ್ ಮಿಸ್ ಮಾಡಿಕೊಂಡು ರಿಲೀಸ್ ಮಾಡೋಕೆ ಲೇಟ್ ಆಗಿ ಪರದಾಡಿದ್ದ ಸುದ್ದಿ ಕೇಳಿದ್ವಿ. ಈಗ ಮತ್ತೊಂದು ಸಿನಿಮಾ ಹಾಗೇ ಲೇಟ್ ಆಗಿ ಕೊನೆಗೆ ಆಡಿಯೋ ರಿಲೀಸ್ ಗೆ ಬಂದು ನಿಂತಿದೆ.

ಆ ಸಿನಿಮಾ ಹೆಸರು 'ಎಂದೆಂದಿಗೂ'. ಇದು ನಿಮಗೆ ಗೊತ್ತಿಲ್ಲದಿರೋದೇನೂ ಅಲ್ಲ. ರಾಧಿಕಾ ಪಂಡಿತ್ ಹಾಗೂ ಅಜೆಯ್ ರಾವ್ ಕಾಂಬಿನೇಷನಲ್ಲಿ ನಟಿಸಿರೋ ಚಿತ್ರ. ಚಿತ್ರದ ಶೂಟಿಂಗ್ ಮಾಡಿದ ದೃಶ್ಯಗಳು ಕಳೆದು ಹೋಗಿದ್ದು ಚಿತ್ರ ಶೂಟ್ ಆಗಿ ಒಂದೂವರೆ ವರ್ಷವಾದ್ರೂ ರಿಲೀಸ್ ಆಗೋಕೆ ಲೇಟ್ ಆಗ್ತಿರೋಕೆ ಕಾರಣವಂತೆ.

Why Kannada movie Endendigu delayed?

ಆದ್ರೆ ಈ ಕಾರಣ ಎಂದೆಂದಿಗೂ ಸತ್ಯ ಅಲ್ಲ ಅಂತಿದ್ದಾರೆ ಕೆಲವರು. ಯಾಕಂದ್ರೆ 'ಕೃಷ್ಣಲೀಲಾ' ಹೇಗೂ ಗೆಲ್ಲುತ್ತೆ. ಅದು ಬಂದ ನಂತರ ನಾವು ಬಂದ್ರೆ ಚೆನ್ನಾಗಿರುತ್ತೆ ಅಂತ ನಿರ್ಮಾಪಕರು ಕಾದಿದ್ದಾರೆ ಅನ್ನೋದು ಮತ್ತೆ ಕೆಲವರ ವಾದ. ಏನಾದ್ರೂ ಆಗಲಿ 'ಎಂದೆಂದಿಗೂ' ಹೀಗೇ ಇರೋ ಬದ್ಲು ಬೇಗ ರಿಲೀಸ್ ಆಗ್ಲಿ ಅಂತಿದ್ದಾರೆ ಅಭಿಮಾನಿಗಳು.

ಇನ್ನು ಎಂದೆಂದಿಗೂ ಚಿತ್ರದ ವಿಶೇಷಗಳ ಬಗ್ಗೆ ಹೇಳಬೇಕೆಂದರೆ, ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ. ಈ ಚಿತ್ರದ ಬಹುತೇಕ ಶೂಟಿಂಗ್ ಸ್ವಿಟ್ಜರ್ ಲ್ಯಾಂಡ್ ನಲ್ಲಿ ನಡೆದಿರುವುದು ಇನ್ನೊಂದು ವಿಶೇಷ.

Why Kannada movie Endendigu delayed?

ವಿ ಹರಿಕೃಷ್ಣ ಸಂಗೀತ ನಿರ್ದೇಶನ ಇರುವ ಚಿತ್ರದ ಶೇಕಡಾ 80ರಷ್ಟು ಚಿತ್ರೀಕರಣ ಯೂರೋಪ್ ನಲ್ಲಿ ನಡೆದಿದ್ದರೆ ಉಳಿದ ಶೇ.20ರಷ್ಟು ಶೂಟಿಂಗ್ ಕರ್ನಾಟಕದಲ್ಲಿ ಮಾಡಲಾಗಿದೆ. ಎಸ್ ವಿ ಪ್ರೊಡಕ್ಷನ್ಸ್ ನ ಎಸ್ ವಿ ಬಾಬು ನಿರ್ಮಿಸಿರುವ ಭರ್ಜರಿ ಚಿತ್ರವಿದು.

English summary
Why Radhika Pandit and Ajay Rao lead Kannada movie 'Endendigu' release delayed? According to Sources, the team lost shooting footage, so it has been delayed. The movie has many specialties. It is the debut direction of Imran Sardaria a famous choreographer in Kannada cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada