»   » 'ರಾಟೆ' ಧನಂಜಯ್ - ಅರ್ಜುನ್ ನಡುವೆ ಕರಾಟೆ

'ರಾಟೆ' ಧನಂಜಯ್ - ಅರ್ಜುನ್ ನಡುವೆ ಕರಾಟೆ

By: ಜೀವನರಸಿಕ
Subscribe to Filmibeat Kannada

ಹೀಗೊಂದು ಕರಾಟೆ ನಡೆದಿರೋ ಸುದ್ದಿ ನಿಮ್ಗೆ ಗೊತ್ತಿಲ್ಲ ಅನ್ಸುತ್ತೆ. ಅರ್ಜುನ್ ಅನ್ನೋ ಘನ ಗಾಂಢೀವಿ ನಿರ್ದೇಶಕ ರಾಟೆ ಸಿನಿಮಾ ಶುರುಮಾಡಿ ಮೂರುವರ್ಷಗಳೇ ಕಳೆದಿವೆ. ಶ್ರುತಿ ಹರಿಹರನ್ ಮತ್ತು ಧನಂಜಯ ಅನ್ನೋ ಒಂದೆರೆಡು ಸಿನಿಮಾಗಳ ಅನಾಮಧೇಯರನ್ನ ಕಟ್ಟಿಕೊಂಡು 'ರಾಟೆ' ಎಳೆಯೋಕೆ ಶುರುಮಾಡಿದ್ದು 2012ರ ಕೊನೆಯಲ್ಲಿ.

ಅರ್ಜುನ್ ಅಂದುಕೊಂಡಂತೆ ಆಗಿದ್ರೆ ರಾಟೆ ಚಿತ್ರ 2013ರಲ್ಲಿ ತೆರೆಗೆ ಬರ್ಬೇಕಿತ್ತು. ಆದ್ರೆ ಸಂಗೀತ ನಿರ್ದೇಶಕ ಹರಿಕೃಷ್ಣ ಅವರೇ ನಿರ್ಮಾಪಕರು ಆಗಿರೋದ್ರಿಂದ, ಅವರ ಮೊದಲ ಸಿನಿಮಾ ಕೂಡ ಇದಾಗಿರೋದ್ರಿಂದ ಒಳ್ಳೆಯ ಸಮಯಕ್ಕಾಗಿ ಕಾದಿದ್ರು.


2013ರ ಕೊನೆಯಿಂದ ಕಾದಿದ್ದೂ ಆಯ್ತು ಟ್ರೈಲರ್ ಹೊರಬಂದು ಒಂದೂವರೆ ವರ್ಷವೂ ಆಯ್ತು ಸಿನಿಮಾ ಮಾತ್ರ ನಾಪತ್ತೆ. ಆದ್ರೆ ಅಲ್ಲಲ್ಲಿ ಜಾಹೀರಾತು ಫಲಕಗಳು ಮಾತ್ರ ಜೋರಾಗಿ ಕಾಣಿಸ್ತಿವೆ. ಇವು ನಿರ್ಮಾಪಕರ ಎಷ್ಟು ಸಿನಿಮಾ ಸಂಗೀತದ ಕಾಸು ಕಳೆದವೋ ಗೊತ್ತಿಲ್ಲ.


'ರಾಟೆ' ಕೈಬಿಟ್ಟು 'ಐರಾವತ' ಏರಿದ ಅರ್ಜುನ್

ಆದ್ರೆ ಈ ನಡುವೆ 2014ರ ಫೆಬ್ರವರಿಯಿಂದಲೇ 'ರಾಟೆ' ಕೈಬಿಟ್ಟು 'ಐರಾವತ'ದ ಮಾವುತನಾಗಿ ದರ್ಶನ್ ಹಿಂದೆ ಗಿರಕಿ ಹೊಡೆಯೋಕೆ ಶುರುಮಾಡಿದ್ರು ಅರ್ಜುನ್. ಈ ನಡುವೆ ಸಿನಿಮಾ ರಿಲೀಸ್ ಯಾವಾಗ ಅಂತ ಯೋಚನೆ ಮಾಡೋದ್ರೊಳಗೆ ಒಂದು ವರ್ಷ ಕಳೆದುಹೋಗಿದೆ.


ಡೇಟ್ಸ್ ಮುಗಿದರೂ ಶೂಟ್ ಮಾಡಿಲ್ಲ

ರಿಲೀಸ್ ಗೆ ರೆಡಿಯಾಗಿದ್ದ ಸಿನಿಮಾಗೆ ಒಂದು ಹಾಡು ಶೂಟ್ ಮಾಡೋದು ಬಾಕಿ ಇತ್ತು. ಆ ಹಾಡಿಗಾಗಿ ಧನಂಜಯ್ ಶೂಟಿಂಗ್ ಮುಗಿದು ಒಂದು ವರ್ಷ ಕಳೆದ್ರೂ ಡೇಟ್ಸ್ ಹೊಂದಿಸಿಕೊಟ್ಟಿದ್ದಾರೆ. ಕೊಟ್ಟ ಡೇಟ್ಸ್ ಮುಗಿದು 15 ದಿನ ಆದ್ರೂ ಅರ್ಜುನ್ ಶೂಟ್ ಶುರುಮಾಡಿಲ್ಲ.


ರಾಟೆ ಹೋಗಿ ಕರಾಟೆ ಆಗಿದೆ

ತಮ್ಮ ಮುಂದಿನ ಸಿನಿಮಾ ಜಯಣ್ಣ ನಿರ್ಮಾಣದ 'ಬಾಕ್ಸರ್'ಗೆ ಒತ್ತಡ ಇದ್ದಿದ್ದರಿಂದ ಅರ್ಜುನ್ ಗೆ ಕಾದುಕಾದು ಧನಂಜಯ್ ಹೇರ್ ಸ್ಟೈಲ್ ಚೇಂಜ್ ಮಾಡಿದ್ದಾರೆ. ಇದು ಅರ್ಜುನ್ ರನ್ನ ಕೆರಳಿಸಿದೆ. ಇದ್ರಿಂದಾಗಿ ಚಿತ್ರದ ಒಂದು ಹಾಡಿಗೆ ಧನಂಜಯ್ ರಿಂದ ಶೂಟ್ ಮಾಡಿಸದೇ ಅರ್ಜುನ್ ಸುಮ್ಮನಾಗಿದ್ದಾರೆ.


ಎಲ್ಲರೂ ಗುರುಪ್ರಸಾಸದ್ ತರಹ ಆಗೋಕಾಗುತ್ತಾ?

ಈಗ ಆ ಹಾಡಿಗೆ ಚಿತ್ರದ ಒಂದಷ್ಟು ಶಾಟ್ ಗಳನ್ನ ಕಟ್ ಮಾಡಿ ಬಳಸಲಾಗುತ್ತಿದೆ. ನಟ ಪ್ರಧಾನರಾಗಿರೋ ಸಿನಿ ಜಗತ್ತಲ್ಲಿ ಅಧಿಕ ಪ್ರಸಂಗ ಮಾಡುವ ವಿಚಾರದಲ್ಲಿ ಕೆಲವು ನಿರ್ದೇಶಕರ ಕಾಲ ನಡೆಯುತ್ತಾ? ಎಲ್ಲರೂ ಗುರುಪ್ರಸಾಸದ್ ತರಹ ಆಗೋಕಾಗುತ್ತಾ?


ಅರ್ಜುನ್ ಮೇಲೆ ಗಾಸಿಪ್ ಗಳ ಸದ್ದು

ಇನ್ನು ನಿರ್ದೇಶಕ ಅರ್ಜುನ್ ಮೇಲೆ ಈಗಾಗ್ಲೇ ಒಂದಷ್ಟು ಗಾಸಿಪ್ ಗಳು ಹರಡುತ್ತಿದ್ದು ದರ್ಶನ್ ಜೊತೆ ಅರ್ಜುನ್ ಸೇರಿದ ನಂತರ ಮಾಧ್ಯಮದವರಿಂದ ದೂರವಾಗ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.


ಇಷ್ಟಕ್ಕೂ ರಾಟೆ ರಿಲೀಸಾಗುತ್ತಾ ಇಲ್ವಾ?

ಇಷ್ಟಕ್ಕೂ ರಾಟೆ ರಿಲೀಸಾಗುತ್ತಾ.. ಅದಕ್ಕೂ ಮೊದಲೇ ಐರಾವತ ತೆರೆಗೆ ಬರುತ್ತಾ. ಅರ್ಜುನ್ ಏನೇ ಮನಸ್ಸು ಮಾಡಿದ್ರೂ ಬೃಂದಾವನದ ಶ್ರೀಕೃಷ್ಣ ಹಿಡಿತದಿಂದ ಪಾರಾಗೋಕೆ ಸಾಧ್ಯಾನಾ? ಕಾದು ನೋಡೋಣ.


English summary
Why Kannada movie 'Raate' release delayed? The movie shooting started in the end of 2012, but still now there is no clue about release. The film also marks the second production of music director V. Harikrishna under his home banner "Harmonium Reeds". The film stars Dhananjay and Shruthi Hariharan in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada