For Quick Alerts
  ALLOW NOTIFICATIONS  
  For Daily Alerts

  ಸಿಸಿಎಲ್ ನಲ್ಲಿ ಮೇಘನಾ ಸೈಡಿಗೆ ಸರಿದಿದ್ದು ಯಾಕೆ?

  By ಜೀವನರಸಿಕ
  |

  ಅದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮ್ಯಾಚ್ ನ ಕರ್ನಾಟಕ ಬುಲ್ಡೋಜರ್ಸ್ ಮತ್ತು ಚೆನ್ನೈ ರೈನೋಸ್ ಮ್ಯಾಚ್. ಪಂದ್ಯ ಕೊನೆಯ ಚೆಂಡಿನವರೆಗೂ ಕುತೂಹಲ ಕೆರಳಿಸಿತ್ತು. ಕರ್ನಾಟಕ ಬುಲ್ಡೋಜರ್ಸ್ ಕೊನೆಯವರೆಗೂ ಸೋಲೋ ಹಂತದಲ್ಲಿದ್ದು ಕೊನೇ ಬಾಲಿಗೆ ಭಾಸ್ಕರ್ ಸಿಕ್ಸರ್ ಹೊಡ್ದು ಮ್ಯಾಚ್ ಟೈ ಆಗಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಆದರೆ ಈ ವಿಷಯ ನಿಮಗೆ ಗೊತ್ತಿರೋದಿಲ್ಲ.

  ಆವತ್ತಿನ ಮ್ಯಾಚ್ ನಲ್ಲಿ ಕಿಚ್ಚ ಅಂಡ್ ಟೀಂ ಜೊತೆ ಕನ್ನಡದ ಒಂದಷ್ಟು ನಟಿಯರಿದ್ದರು. ರಾಗಿಣಿ ದ್ವಿವೇದಿ, ಐಂದ್ರಿತಾ ರೇ, ಪ್ರಣೀತಾ ಸುಭಾಷ್, ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಇದ್ರು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್, ಶ್ರೀನಗರ ಕಿಟ್ಟಿ, ಆದಿತ್ಯ, ಚಿರಂಜೀವಿ ಸರ್ಜಾ ಎಲ್ಲರೂ ಮ್ಯಾಚನ್ನ ಎಂಜಾಯ್ ಮಾಡ್ತಿದ್ರು. [ನಟಿ ಮೇಘನಾ ಗಾಂವ್ಕರ್ ಸಿನಿಮಾ ಮಾಡ್ತಿಲ್ಲ ಯಾಕೆ?]

  ರಾಗಿಣಿಯವ್ರಂತೂ ದೊಡ್ಡಣ್ಣ ಅವರ ತೊಡೆಯ ಮೇಲೆ ದೊಡ್ಡ ಮಗಳಂತೆ ಕುಳಿತು ಪೋಸ್ ಕೊಟ್ರೆ, ಅಂಬಿ ಜೊತೆ ನಗ್ತಾ ನಗ್ತಾ ಮಾತನಾಡುತ್ತಾ ಕಾಲಕಳೆದರು. ಈ ಗ್ಯಾಪ್ ನಲ್ಲಿ ಸೈಲೆಂಟಾಗಿ ಗ್ರೌಂಡಿಗೆ ಎಂಟ್ರಿಕೊಟ್ಟಿದ್ರು ಮೇಘನಾ ಗಾಂವ್ಕರ್.

  ಚಾರ್ಮಿನಾರ್ ಚೆಲುವೆ ಮೇಘನಾ ಗಾಂವ್ಕರ್ ಬಿಳಿ ಟೀಶರ್ಟ್ ಹಾಕ್ಕೊಂಡು ಸಿಂಪಲ್ಲಾಗಿ ಗ್ರೌಂಡಿಗೆ ಬಂದ್ರೆ ಉಳಿದ ಹೀರೋಯಿನ್ಗಳು ಮಿರಮಿರ ಮಿಂಚ್ತಾಯಿದ್ರು. ಇವ್ರೆಲ್ಲರ ನಡುವೆ ಬರೋಕೂ ಆಗ್ದೇ ಸುಮ್ಮನೆ ಸ್ವಲ್ಪ ಹೊತ್ತು ಸೈಡಲ್ಲಿ ನಿಂತಿದ್ದ ಮೇಘನಾ ಪೆಚ್ಚುಮೋರೆ ಹಾಕ್ಕೊಂಡಿದ್ರು.

  ಮೇಘನಾರನ್ನ ಕ್ರಿಕೇಟ್ ಜೋಷ್ ನಲ್ಲಿ ಅಷ್ಟಾಗಿ ಯಾರು ಮಾತ್ನಾಡಿಸಲಿಲ್ವೋ ಏನೋ. ಅಥವಾ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಸಿನಿಮಾದವ್ರ ಜೊತೆ ಬೆರೆಯೋಕೆ ಮುಜುಗರ ಆಯ್ತೋ ಏನೋ. ಮೇಘನಾ ಅಲ್ಲಿಂದ ಮಾಯವಾಗಿದ್ರು. ಹೀಗಂತ ಅವತ್ತು ಅಲ್ಲಿದ್ದವರು ಮಾತಾಡ್ಕೋತಿದ್ರು ಅಂದಹಾಗೆ ಮೇಘನಾ ಗಾಂವ್ಕರ್ ಯಾ ಸಿನಿಮಾನೂ ಮಾಡದೇ 'ಬ್ರಹ್ಮ' ರಿಲೀಸ್ ದಿನಕ್ಕೆ ಸರಿಯಾಗಿ ಒಂದು ವರ್ಷ ಆಯ್ತು.

  English summary
  Why Kannada actress Meghana Gaonkar pull a long face in Celebrity Cricket League 4 match, which was held in Bangalore on February 2nd . While actress Ragini Dwivedi enjoying the match between Karnataka Bulldozers Vs Chennai Rhinos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X