»   » 'ಚಾಂಪಿಯನ್' ಆಗಲು ಹೋಗಿ ತಾಚಿಕೊಂಡ 'ಪೈಪೋಟಿ'

'ಚಾಂಪಿಯನ್' ಆಗಲು ಹೋಗಿ ತಾಚಿಕೊಂಡ 'ಪೈಪೋಟಿ'

Posted By: ಜೀವನರಸಿಕ
Subscribe to Filmibeat Kannada

ಕೆಲ ನಿರ್ದೇಶಕರು ಹಾಗೇನೇ ಒಂದು ಸಿನಿಮಾವನ್ನ ಅಂದುಕೊಂಡಂತೆ ಅಚ್ಚುಕಟ್ಟಾಗಿ ಮುಗಿಸೋ ಮೊದಲೇ ಮತ್ತೊಂದು ಸಿನಿಮಾವನ್ನ ಘೋಷಣೆ ಮಾಡಿಬಿಡ್ತಾರೆ. ಅದ್ರ ಉದ್ದೇಶ ಈ ಸಿನಿಮಾ ರಿಲೀಸ್ ಜೊತೆಗೆ ಇನ್ನೊಂದು ಸಿನಿಮಾ ಕೂಡ ನಿಧಾನಕ್ಕೆ ಜನ್ರ ಮನಸ್ಸಿಗೆ ಲಗ್ಗೆ ಇಡಲಿ, ಪ್ರಚಾರ ಪಡ್ಕೊಳ್ಳಬೇಕು ಅನ್ನೋ ಕಾರಣಕ್ಕೆ.

ಇದ್ರಿಂದಾಗಿ ರಿಲೀಸ್ ಆಗ್ಬೇಕಿರೋ ಸಿನಿಮಾವನ್ನ ನಿರ್ಮಾಪಕರ, ವಿತರಕರ ತಲೆಗೆ ಕಟ್ಟಿಬಿಡೋ ನಿರ್ದೇಶಕರು ಮತ್ತು ನಟ, ನಟಿಯರು ನಮಗೆ ಸಂಭಾವನೆ ಬಂದಿದೆ ನಮ್ಮ ಜವಾಬ್ದಾರಿ ಮುಗೀತು ಅನ್ನೋ ತರಹ ವರ್ತಿಸೋಕೆ ಶುರುಮಾಡಿಬಿಡ್ತಾರೆ. [ಲಂಡನ್ ನಲ್ಲಿ ಜಗ್ಗೇಶ್ ಪುತ್ರನ ವಿವಾಹ ಮಹೋತ್ಸವ]


Why Paipoti failed

ಇದಕ್ಕೊಂದು ಇತ್ತೀಚೆಗಿನ ಉದಾಹರಣೆ ಅಂದ್ರೆ ರಾಮ್ ನಾರಾಯಣ್ ನಿರ್ದೇಶನದ ಸಿನಿಮಾ 'ಪೈಪೋಟಿ' ಗೆಲುವಿನ ರುಚಿ ಕಾಣ್ತಿಲ್ಲ. ಚಿತ್ರಮಂದಿರಗಳ ಕಾದಾಟದ ನಡುವೆ ಚಿಂದಿಯಾದ ಚಿತ್ರ ರಿಲೀಸ್ ಗೂ ಮೊದಲೇ 'ಚಾಂಪಿಯನ್' ಅನ್ನೋ ಚಿತ್ರವನ್ನ ಅನೌನ್ಸ್ ಮಾಡ್ತು.


Why Paipoti failed

ಆದ್ರೆ ಎಷ್ಟೇ ಪ್ರಯತ್ನಪಟ್ಟರೂ 'ಪೈಪೋಟಿ'ಯಲ್ಲಿ ಚಿತ್ರತಂಡ ಅಷ್ಟಕ್ಕಷ್ಟೇ ಅನ್ನಿಸಿಕೊಳ್ತಿದೆ. ಪೈಪೋಟಿ ತಂಡ ಹಾಗೆ ಮಾಡ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಎಲ್ರೂ ಮಾಡೋದು ಇದೇ ಬೇಜವಾಬ್ದಾರಿ ಕೆಲಸ ಅದಕ್ಕೇ ಚಿತ್ರಗಳು ಸೋಲ್ತಿವೆ ಅನ್ನೋದು ಗಾಂಧಿನಗರದ ಗಲ್ಲಿ ಗಾಸಿಪ್.

English summary
Why some good movies are failed at box office? Here is the recent example. Kannada movie 'Paipoti' failed at box office. Because of no proper plan and lack of propagandising the movie. The film directed by K Ram Narayan. Gururaj Jagadeesh, Niranjana Kumar Shetty and Pooja Sree in the cast.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada