»   » ಮುಟ್ಟಿದ್ರೆ ಮುನಿ, ಸಿನಿಮಾದಲ್ಲೂ ರಾಜಕೀಯಾನಾ?

ಮುಟ್ಟಿದ್ರೆ ಮುನಿ, ಸಿನಿಮಾದಲ್ಲೂ ರಾಜಕೀಯಾನಾ?

By: ಜೀವನರಸಿಕ
Subscribe to Filmibeat Kannada

ಇತ್ತೀಚೆಗೆ ಒಂದು ಚಿತ್ರತಂಡ ನಗರದ ಮತ್ತಿಕೆರೆಯಲ್ಲಿರೋ ಜೆ.ಪಿ ಪಾರ್ಕ್ಗೆ ಬಂದಿದೆ. ಕರ್ನಾಟಕದ ಅತಿದೊಡ್ಡ ಉದ್ಯಾನವನ ಅನ್ನಿಸಿಕೊಂಡಿರೋ 87 ಎಕರೆಯ ಜೆ.ಪಿ ಪಾರ್ಕ್ ನಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಹಲವು ನಟರ ಸಿನಿಮಾಗಳು ಸರಾಗವಾಗಿ ಸಂಗೀತ ಕಾರಂಜಿಯ ಸ್ಥಳದಲ್ಲಿ ಶೂಟಿಂಗ್ ನಡೆಸಿವೆ.

ಆದರೆ ಹೊಸಬರ ತಂಡವೊಂದು ಸಂಗೀತ ಕಾರಂಜಿಯ ಪ್ರದೇಶದಲ್ಲಿ ಶೂಟ್ ಮಾಡೋದಕ್ಕೆ ಹೊರಟಿದ್ದಕ್ಕೆ ನಿರ್ಮಾಪಕರ ಸಂಘದ ಅಧ್ಯಕ್ಷರು ನೋ ಅಂದಿದ್ದಾರಂತೆ. ಈ ಹಿಂದೆ ಹಲವು ಸಿನಿಮಾಗಳು ಶೂಟಿಂಗ್ ನಡೆಸೋಕೆ ಅವಕಾಶ ಕೊಟ್ಟಿದ್ರೂ ಈಗ್ಯಾಕೆ ಕೊಟ್ಟಿಲ್ಲ ಅನ್ನೋದು ಗೊತ್ತಿಲ್ಲ.

Why Producer Munirathna not granted permission to shoot in JK Park?

ತಮ್ಮ ಕ್ಷೇತ್ರದಲ್ಲಿ ಬರೋ ಪಾರ್ಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರೋ ಶಾಸಕರೂ ಆಗಿರೋ ಮುನಿರತ್ನ ಪರ್ಮಿಷನ್ ಕೇಳಿದ್ದಕ್ಕೆ ಯಾಕೆ ಮುನಿದರೋ ಗೊತ್ತಿಲ್ಲ. ಆದ್ರೆ ಹೊಸಬರ ಚಿತ್ರತಂಡ ಮಾತ್ರ ಎಲ್ಲರಿಗೂ ಒಂದು ರೂಲು ನಮಗೊಂದು ರೂಲಾ ಅಂತ ಬೇಸರ ಮಾಡಿಕೊಂಡಿದೆಯಂತೆ.

ಅಂದಹಾಗೆ ಮುನಿರತ್ನ ಅವರು ಕನ್ನಡದಲ್ಲಿ ಒಂದಷ್ಟು ಒಳ್ಳೆಯ ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಅವುಗಳಲ್ಲಿ ಕೀಚಕ, ಕಠಾರಿವೀರ ಸುರಸುಂದರಾಂಗಿ, ರಕ್ತಕಣ್ಣೀರು, ಆಂಟಿ ಪ್ರೀತ್ಸೆ ಚಿತ್ರಗಳು ಒಂದಷ್ಟು ಸದ್ದು ಮಾಡಿದಂತಹವು.

ಕನ್ನಡದ ಕೆಲವೇ ಕೆಲವು ಬುದ್ಧಿವಂತ ನಿರ್ಮಾಪಕರಲ್ಲಿ ಮುನಿರತ್ನ ಅವರು ಒಬ್ಬರು. ತಮ್ಮ ಚಿತ್ರಗಳನ್ನು ಅವರು ಪ್ರೊಮೋಟ್ ಮಾಡಿಕೊಳ್ಳುವ ರೀತಿ, ಅನುಸರಿಸುವ ತಂತ್ರಗಳಲ್ಲಿ ಅವರಿಗೆ ಅವರೇ ಸಾಟಿ. ಆದರೆ ಹೊಸಬರಿಗೆ ಅವರು ಈ ರೀತಿ ಅಡ್ಡಗಾಲು ಹಾಕಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

English summary
Why Producer Munirathna Naidu not granted permission to shoot in JK Park for freshers movie? Who is also a sitting MLA of Rajarajeshwari Nagar and president of producers association.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada