For Quick Alerts
  ALLOW NOTIFICATIONS  
  For Daily Alerts

  ಎಲ್ಲ ಬಿಟ್ಟು 'ಲೇಡಿಸ್ ಟೈಲರ್' ಆಗ್ತಾರಂತೆ ನಟ ಶರಣ್

  By Naveen
  |
  ಸಿನಿಮಾ ಮಾಡೋದ್ ಬಿಟ್ಟು ಶರಣ್ ಗೆ ಯಾಕ ಬೇಕು ಈ ಕೆಲಸ ?| FIlmibeat Kannada

  ನಟ ಶರಣ್ ಅವರ 'ರಾಂಬೋ 2' ಸಿನಿಮಾ ಹಾಡುಗಳ ಮೂಲಕ ದೊಡ್ಡ ಸದ್ದು ಮಾಡುತ್ತಿದೆ. ಆದರೆ ಇದೇ ಗ್ಯಾಪ್ ನಲ್ಲಿ ಶರಣ್ 'ಲೇಡಿಸ್ ಟೈಲರ್' ಆಗುವುದಕ್ಕೆ ರೆಡಿ ಆಗಿದ್ದಾರೆ. ಅಂದಹಾಗೆ, 'ಲೇಡಿಸ್ ಟೈಲರ್' ಸಿನಿಮಾಗೆ ಈಗ ಮತ್ತೆ ನಾಯಕ ನಟ ಬದಲಾಗಿದ್ದಾರೆ.

  'ಲೇಡಿಸ್ ಟೈಲರ್' ಸಿನಿಮಾ ಶುರು ಆದಾಗಿನಿಂದ ಚಿತ್ರ ನಟನ ವಿಚಾರಕ್ಕೆ ಸುದ್ದಿ ಮಾಡುತ್ತಲೇ ಇದೆ. ಈ ಸಿನಿಮಾಗೆ ನಾಯಕರು ಬದಲಾಗುತ್ತಲೇ ಇದ್ದಾರೆ. 'ನೀರ್ ದೋಸೆ' ತಿನ್ನಿಸಿದ್ದ ನಿರ್ದೇಶಕ ವಿಜಯ ಪ್ರಸಾದ್ ಅದರ ಬಳಿಕ 'ಲೇಡಿಸ್ ಟೈಲರ್' ಹಿಂದೆ ಹೊರಟರು. ಸಿನಿಮಾ ಮೊದಲು ಶುರು ಆದಾಗ ಚಿತ್ರಕ್ಕೆ ನಟ ರವಿಶಂಕರ್ ಗೌಡ ನಾಯಕರಾಗಿದ್ದರು. ಆದರೆ, ಅದೇಕೋ ನಟ ನೀನಾಸಂ ಸತೀಶ್ ಚಿತ್ರದ ನಟ ಎಂಬ ಸುದ್ದಿ ಬಂತು.

  'ಲೇಡಿಸ್ ಟೈಲರ್' ಚಿತ್ರವನ್ನ ಯಾರೂ ಒಪ್ಪುತ್ತಿಲ್ಲ ಯಾಕೆ? ಚಿತ್ರದಲ್ಲಿ ಅಂತಹದ್ದೇನಿದೆ? 'ಲೇಡಿಸ್ ಟೈಲರ್' ಚಿತ್ರವನ್ನ ಯಾರೂ ಒಪ್ಪುತ್ತಿಲ್ಲ ಯಾಕೆ? ಚಿತ್ರದಲ್ಲಿ ಅಂತಹದ್ದೇನಿದೆ?

  ಇದರ ನಂತರ ನಟ ಜಗ್ಗೇಶ್ ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ವದಂತಿ ಹಬ್ಬಿತು. ಕೊನೆಗೆ ಇಲ್ಲ ಇಲ್ಲ.. ರವಿಶಂಕರ್ ಗೌಡ ಅವರೇ ಸಿನಿಮಾಗೆ ಫೈನಲ್ ಆಗಿದ್ದಾರೆ ಎಂಬ ಮಾತು ಬಂತು. ಅವುಗಳ ನಡುವೆ ಈ ಸಿನಿಮಾ ಶುರು ಆಗಲ್ಲ ಎನ್ನುವ ಗಾಸಿಪ್ ಕೂಡ ಇತ್ತು. ಇದೆಲ್ಲ ಆದ ಮೇಲೆ ಸದ್ಯ ಇದೀಗ ನಟ ಶರಣ್ 'ಲೇಡಿಸ್ ಟೈಲರ್' ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದೆ.

  ಅಂದಹಾಗೆ, ಸುದ್ದಿಗಳ ಮೇಲೆ ಸುದ್ದಿ ಮಾಡುತ್ತಿರುವ 'ಲೇಡಿಸ್ ಟೈಲರ್' ಸಿನಿಮಾಗೆ ಶರಣ್ ಪಕ್ಕಾ ಆಗಿದ್ದಾರ ಎಂಬುದು ನಿಖರವಾಗಿ ತಿಳಿದಿಲ್ಲ. ಇನ್ನು ಶರಣ್ಗೆ ಇರುವ ಸ್ಟಾರ್ ಗಿರಿ ಸಿನಿಮಾಗೆ ಅನುಕೂಲ ಆಗುತ್ತದೆ ಎನ್ನುವುದು ಚಿತ್ರತಂಡದ ಅಭಿಪ್ರಾಯವಂತೆ. ಹಾಗೆನಾದರೂ ಈ ಸುದ್ದಿ ನಿಜ ಆದರೆ ವಿಜಯ ಪ್ರಸಾದ್ ಡೈಲಾಗ್ ಗಳನ್ನು ಶರಣ್ ಬಾಯಲಿ ಕೇಳಬಹುದಾಗಿದೆ.

  English summary
  Will kannada actor Sharan play lead role in Ladies Tailor kannada Movie. The movie is directed by Vijay Prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X