»   » ರಾಜಕೀಯಕ್ಕೆ ಮತ್ತೋರ್ವ ಸ್ಯಾಂಡಲ್ ವುಡ್ ನಟಿ ಎಂಟ್ರಿ.?!

ರಾಜಕೀಯಕ್ಕೆ ಮತ್ತೋರ್ವ ಸ್ಯಾಂಡಲ್ ವುಡ್ ನಟಿ ಎಂಟ್ರಿ.?!

Posted By: Pavithra
Subscribe to Filmibeat Kannada
ರಾಜಕೀಯಕ್ಕೆ ಮತ್ತೋರ್ವ ಸ್ಯಾಂಡಲ್ ವುಡ್ ನಟಿ ಎಂಟ್ರಿ.? | Filmibeat Kannada

ಚಿತ್ರರಂಗಕ್ಕೂ ಹಾಗೂ ರಾಜಕೀಯಕ್ಕೂ ಎಲ್ಲಿಲ್ಲದ ನಂಟು. ರಾಜಕೀಯದವ್ರು ಸಿನಿಮಾಗೆ ಬರೋದು, ಸಿನಿಮಾರಂಗದವ್ರು ರಾಜಕೀಯ ಪ್ರವೇಶ ಮಾಡೋದು ಕಾಮನ್ ಆಗಿ ಹೋಗಿದೆ. ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪ್ಪಿ ತಮ್ಮದೇ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಅದರ ಬೆನ್ನಲ್ಲೇ ಮತ್ತೋರ್ವ ಸ್ಯಾಂಡಲ್ ವುಡ್ ನಟಿ ಪಾಲಿಟಿಕ್ಸ್ ಗೆ ಬರ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

'ಚೆಲುವಿನ ಚಿತ್ತಾರ' ಸಿನಿಮಾದ ಮೂಲಕ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡ ನಟಿ ಅಮೂಲ್ಯ ರಾಜಕೀಯಕ್ಕೆ ಎಂಟ್ರಿಕೊಡ್ತಾರಾ ಅನ್ನೋ ಸುದ್ದಿ ಹರಿದಾಡ್ತಿದೆ. ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಜಗದೀಶ್.ಆರ್.ಚಂದ್ರ ಅವ್ರ ಕೈ ಹಿಡಿದ ಅಮೂಲ್ಯ ಅಭಿನಯದ ಕೊನೆಯ ಸಿನಿಮಾ 'ಮಾಸ್ತಿ ಗುಡಿ'... ಮುಂದೆ ಓದಿ

ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿ

ಅಮೂಲ್ಯ ರಾಜಕೀಯಕ್ಕೆ ಬರ್ತಾರಾ ಎನ್ನುವ ಒಂದು ಸುದ್ದಿ ಸದ್ಯ ರಾಜಕೀಯ ವಲಯದಲ್ಲಿ ಹಾಗೂ ಗಾಂಧಿನಗರದಲ್ಲಿ ಹರಿದಾಡ್ತಿದೆ. ಕಾರಣ ಇಷ್ಟೇ... ಇತ್ತೀಚಿನ ದಿನಗಳಲ್ಲಿ ಅಮೂಲ್ಯ ಹಾಗೂ ಜಗದೀಶ್ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆರ್.ಆರ್.ನಗರದ 'ಕನ್ನಡ ರಾಜ್ಯೋತ್ಸವದಲ್ಲಿ ಭಾಗಿ

ಅಮೂಲ್ಯ ಮತ್ತು ಜಗದೀಶ್ ಫ್ಯಾಮಿಲಿ ಇತ್ತೀಚಿಗಷ್ಟೆ ಮಂಗಳೂರಿನಲ್ಲಿ ಶಾಲೆಯ ಹೊಸ ಕಟ್ಟಡದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅದರ ಜೊತೆಯಲ್ಲೇ ನವೆಂಬರ್ 1 ರಂದು ಆರ್.ಆರ್.ನಗರದಲ್ಲಿ ನಡೆದ ರಾಜ್ಯೋತ್ಸವದ ಕಾರ್ಯಕ್ರಮದಲ್ಲೂ ಅಮೂಲ್ಯ ಹಾಜರಿದ್ದು ಜನರಿಗೆ ರಾಜ್ಯೋತ್ಸವದ ಶುಭ ಕೋರಿದರು.

ಅಪ್ಪನ ಜೊತೆ ಕೈ ಜೋಡಿಸಿರುವ ಜಗದೀಶ್.ಆರ್.ಚಂದ್ರ

ಅಮೂಲ್ಯ ಅವರ ಮಾವ ರಾಮಚಂದ್ರ ಅವರು ಆರ್.ಆರ್.ನಗರದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದಾರೆ. ಅದೇ ರೀತಿ ಅವರ ಪುತ್ರ ಕೂಡ ಅಪ್ಪನಿಗೆ ಸಾಥ್ ನೀಡ್ತಿದ್ದಾರೆ. ಕಳೆದ ವಾರದಲ್ಲಿ ಸಾಲುಮರದ ತಿಮ್ಮಕ್ಕ ಅವ್ರ ಆರೋಗ್ಯ ವಿಚಾರಿಸಿ ಸಹಾಯ ಕೂಡ ಮಾಡಿ ಬಂದಿದ್ರು ಜಗದೀಶ್

ಸಿನಿಮಾರಂಗವೇ 'ಅಮ್ಮು'ಗೆ ಪರ್ಫೆಕ್ಟ್

ಅಮೂಲ್ಯ ರಾಜಕೀಯಕ್ಕೆ ಬರೋದಿಲ್ಲ ಅನ್ನೋದು ಅಮೂಲ್ಯ ಫ್ಯಾಮಿಲಿಯ ಆಪ್ತರು ಹೇಳುವ ಮಾತು. ಅಮೂಲ್ಯ ದೊಡ್ಡ ಮನೆ ಸೊಸೆ.. ಆರ್.ಆರ್.ನಗರ ಕ್ಷೇತ್ರಕ್ಕೆ ಮನೆ ಸೊಸೆಯ ಪರಿಚಯವಿರಲಿ ಅನ್ನೋ ನಿಟ್ಟಿನಲ್ಲಿ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ. ಹಾಗೇನಾದರೂ ಪಾಲಿಟಿಕ್ಸ್ ಗೆ ಬರೋದಾದ್ರೆ ರಾಮಚಂದ್ರ ಅವ್ರ ಮಗ ಜಗದೀಶ್ ಮೊದಲು ಬರ್ತಾರೆ. ಅಮೂಲ್ಯ ಅವ್ರಿಗೆ ಸದ್ಯ ಸಿನಿಮಾದಿಂದ ಸಾಕಷ್ಟು ಆಫರ್ ಗಳು ಬರ್ತಿದ್ದು, ಮನೆಯಲ್ಲಿ ಈ ಬಗ್ಗೆ ಚರ್ಚೆ ಆದ ಬಳಿಕ ಆದಷ್ಟು ಬೇಗ ಸಿನಿಮಾದಲ್ಲಿಯೇ ಕಾಣಿಸಿಕೊಳ್ತಾರೆ ಅಂತಾರೆ. ಒಟ್ಟಾರೆ ಈ ಅಂತೆ ಕಂತೆ ಮಧ್ಯ ಅಮ್ಮು ಫ್ಯಾನ್ಸ್ ಮಾತ್ರ ಬೇಗ ಬಿಗ್ ಸ್ಕ್ರೀನ್ ಮೇಲೆ ಚಿತ್ತಾರದ ಬೆಡಗಿಯನ್ನ ನೋಡುವ ಅದೃಷ್ಟ ಸಿಗಲಿ ಅಂತಿದ್ದಾರೆ.

English summary
Will Actress Amulya enter politics.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X