»   » 'ಬಿಗ್ ಬಾಸ್ ಕನ್ನಡ-4' ಅಡ್ಡದಿಂದ ಬಂದಿರುವ 'ಬಿಗ್' ಬ್ರೇಕಿಂಗ್ ನ್ಯೂಸ್ ಇದೇ..

'ಬಿಗ್ ಬಾಸ್ ಕನ್ನಡ-4' ಅಡ್ಡದಿಂದ ಬಂದಿರುವ 'ಬಿಗ್' ಬ್ರೇಕಿಂಗ್ ನ್ಯೂಸ್ ಇದೇ..

Posted By:
Subscribe to Filmibeat Kannada

ಅಕ್ಟೋಬರ್ ನಲ್ಲಿ ಶುರು ಆಗಲಿರುವ 'ಬಿಗ್ ಬಾಸ್ ಕನ್ನಡ-4' ಬಗ್ಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಇವತ್ತೂ ಕೂಡ ಅಂಥದ್ದೇ ಒಂದು ಇಂಟ್ರೆಸ್ಟಿಂಗ್ ನ್ಯೂಸ್ ಬ್ರೇಕ್ ಆಗಿದೆ.

ಈ ಬಾರಿ ದೊಡ್ಮನೆ ಒಳಗೆ ಯಾರೆಲ್ಲಾ ಕಾಲಿಡಬಹುದು ಎಂದು ತಿಳಿಯಲು 'ಬಿಗ್ ಬಾಸ್' ಪ್ರೇಕ್ಷಕರಂತೂ ಕಾತರದಿಂದ ಕಾಯ್ತಿದ್ದಾರೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಹಾಗೆ 'ಟಿ.ಆರ್.ಪಿ' ಕ್ಯಾಂಡಿಡೇಟ್ ಗಳನ್ನೇ ಕಣಕ್ಕಿಳಿಸುವ ಪ್ರಯತ್ನ ನಡೆಸುತ್ತಿದೆ ಕಲರ್ಸ್ ವಾಹಿನಿ ತಂಡ. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

ನಿನ್ನೆಯಷ್ಟೇ 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಫಸ್ಟ್ ಲಿಸ್ಟ್ ಔಟ್ ಆಗಿತ್ತು. ಈ ಬಗ್ಗೆ ನಾವೂ ಕೂಡ ವರದಿ ಮಾಡಿದ್ವಿ. ಈಗ ಆ ಪಟ್ಟಿಯ ತಲೆ ಮೇಲೆ ಹೊಡೆದಂತೆ ಇರುವ ಎರಡು ಪ್ರಮುಖ ಹೆಸರುಗಳು ಕಲರ್ಸ್ ವಾಹಿನಿ ಮೂಲಗಳಿಂದ ಲೀಕ್ ಆಗಿದೆ. 'ಅವರು'ಗಳು ಯಾರು? ಹಾಗೂ 'ಅವರು' ಡಿಮ್ಯಾಂಡ್ ಮಾಡಿರುವ ಸಂಭಾವನೆ ಮೊತ್ತ ಎಷ್ಟು ಅಂತ ಕೇಳಿದ್ರೆ ನೀವೇ ನಿಮ್ಮ ಬಾಯಿ ಮೇಲೆ ಬೆರಳಿಡುತ್ತೀರಾ.!

'ಅವರು' ಯಾರೂ ಗೊತ್ತಾ?

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಡೀ ಕರ್ನಾಟಕ ರಾಜ್ಯದ ಗಮನ ಸೆಳೆದು, ಕನ್ನಡ ಸುದ್ದಿ ವಾಹಿನಿಗಳಲ್ಲಿ 'ಬಿಗ್ ಬ್ರೇಕಿಂಗ್ ನ್ಯೂಸ್' ಮಾಡಿದ್ದ ಖಡಕ್ ಪೊಲೀಸ್ ಆಫೀಸರ್, ಕೊಡ್ಲಿಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ಅನುಪಮಾ ಶೆಣೈ ಜೊತೆ ಮಾತುಕತೆ?

ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಉಡುಪಿ ಮೂಲದ ಅನುಪಮಾ ಶೆಣೈ ರವರ ಜೊತೆ ಮಾತುಕತೆ ನಡೆಸಲು 'ಬಿಗ್ ಬಾಸ್ ಕನ್ನಡ-4' ಆಯೋಜಕರು ಮುಂದಾಗಿದ್ದಾರೆ. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

ಅನುಪಮಾ ಶೆಣೈ ಒಪ್ಪಿಕೊಂಡ್ರೆ?

ರಾಜಕಾರಣಿಗಳ ವಿರುದ್ಧ ಬೇಸೆತ್ತು, ಕೊಡ್ಲಿಗಿ ಡಿವೈಎಸ್ಪಿ ಸ್ಥಾನಕ್ಕೆ ರಾಜಿನಾಮೆ ಬಿಸಾಕಿದ್ದ ಅನುಪಮಾ ಶೆಣೈ ಒಂದ್ವೇಳೆ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬಂದ್ರೆ, ಅವರು ರಾಜಿನಾಮೆ ನೀಡಲು ಕಾರಣವಾದ ಸತ್ಯ ಸಂಗತಿಗಳು ಬಯಲಾಗುವ ಚಾನ್ಸಸ್ ಹೆಚ್ಚು. ಇದನ್ನೆಲ್ಲಾ ಸೂಕ್ಷವಾಗಿ ಅವಲೋಕಿಸಿ, ಅನುಪಮಾ ಶೆಣೈ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು.[ರಾಜೀನಾಮೆ ನೀಡಿದ್ದೇಕೆ? ಅನುಪಮಾ ಶೆಣೈ ಪತ್ರದಿಂದ ಬಹಿರಂಗ]

ಫೇಸ್ ಬುಕ್ ನಲ್ಲಿ ಫೇಮಸ್.!

ದಿಢೀರ್ ರಾಜಿನಾಮೆ ಸಲ್ಲಿಸಿದ ಬಳಿಕ, 'ಅನುಪಮಾ ಶೆಣೈ' ಫೇಸ್ ಬುಕ್ ಅಕೌಂಟ್ ನಲ್ಲಿ ಹಲವಾರು ಸ್ಟೇಟಸ್ ಗಳು ಪೋಸ್ಟ್ ಆದವು. ಅದು ಫೇಕ್ ಎಂಬ ಗೊಂದಲ ಇದ್ದರೂ, ಅದಕ್ಕೆ ಕರ್ನಾಟಕದ ಜನತೆಯಿಂದ ವ್ಯಕ್ತವಾದ ಪ್ರತಿಕ್ರಿಯೆ ಮಾತ್ರ ಅಮೋಘ.

ಸೋಷಿಯಲ್ ಮೀಡಿಯಾ ಸಪೋರ್ಟ್ ಇದೆ.!

ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅನುಪಮಾ ಶೆಣೈಗೆ ಸಿಕ್ಕ ಬೆಂಬಲ, ಜನಪ್ರಿಯತೆಯನ್ನ ಅವಲೋಕನ ಮಾಡಿದರೆ, 'ಬಿಗ್ ಬಾಸ್'ನಲ್ಲಿ ಮಾತ್ರ ಅಲ್ಲ, ಚುನಾವಣೆಗೆ ಸ್ಪರ್ಧಿಸಿದರೂ ಅನುಪಮಾ ಶೆಣೈ ಗೆಲ್ಲಬಹುದು.

ಮತ್ತೊಬ್ಬರು ಯಾರು?

ಸ್ಯಾಂಡಲ್ ವುಡ್ ನಲ್ಲಿ 'ಸುಂಟರಗಾಳಿ' ಅಂತಲೇ ಫೇಮಸ್ ಆಗಿರುವ ನಟಿ ರಕ್ಷಿತಾ ಪ್ರೇಮ್ ರವರನ್ನೂ 'ಬಿಗ್ ಬಾಸ್ ಕನ್ನಡ-4'ಕ್ಕೆ ಕರೆತರುವ ಬಗ್ಗೆ ಪ್ಲಾನ್ ನಡೆದಿದೆ.

ಮತ್ತೊಂದು ಗಾಸಿಪ್ ಇದೆ!

'ಬಿಗ್ ಬಾಸ್ ಕನ್ನಡ-4' ನಲ್ಲಿ ಸ್ಪರ್ಧಿಸಲು ನಟಿ ರಕ್ಷಿತಾ ಪ್ರೇಮ್ ಬರೋಬ್ಬರಿ ಒಂದು ಕೋಟಿ ರೂಪಾಯಿ ಕೇಳಿದ್ದಾರಂತೆ.!

ಒಂದು ಕೋಟಿ ಎಷ್ಟು ದಿನಕ್ಕೆ?

'ಬಿಗ್ ಬಾಸ್' ಮನೆಗೆ ರಕ್ಷಿತಾ ಬರಬೇಕು ಅಂದ್ರೆ ಒಂದು ವಾರಕ್ಕೆ ಒಂದು ಕೋಟಿ ಕೊಡಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರಂತೆ. ಹಾಗಂತ ಬಲ್ಲ ಮೂಲಗಳು ತಿಳಿಸಿವೆ.

ಕ್ಲಿಯರ್ ಪಿಕ್ಚರ್ ಅಕ್ಟೋಬರ್ ನಲ್ಲಿ....

ಆಫರ್ ಹಾಗೂ ಡಿಮ್ಯಾಂಡ್ ಈಗ ಸರ್ವೇ ಸಾಮಾನ್ಯ. ಎಲ್ಲವೂ ಓಕೆ ಆದ್ಮೇಲಷ್ಟೇ 'ಬಿಗ್ ಬಾಸ್' ಮನೆಯಲ್ಲಿ ವಾಸ. ಸದ್ಯಕ್ಕೆ ಓಕೆ ಆಗುವ ಪ್ರಕ್ರಿಯೆ ಶುರುವಾಗಿದೆ. ನಮಗೆಲ್ಲಾ ಕ್ಲಿಯರ್ ಪಿಕ್ಚರ್ ಸಿಗ್ಬೇಕು ಅಂದ್ರೆ ಮುಂದಿನ ತಿಂಗಳವರೆಗೂ ಕಾಯ್ಲೇಬೇಕು.

ನಿಮ್ಮ ಪ್ರಕಾರ ಯಾರೆಲ್ಲಾ ಬರಬೇಕು?

'ಬಿಗ್ ಬಾಸ್-4'ನಲ್ಲಿ ಯಾರೆಲ್ಲಾ ಸ್ಪರ್ಧಿಸಬೇಕು ಅಂತ ನೀವು ಬಯಸುತ್ತೀರಾ? ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಆಯ್ಕೆಗಳನ್ನ ನಮಗೆ ತಿಳಿಸಿ...

English summary
According to the latest buzz, Kannada Actress Producer Rakshitha Prem and EX DySP Anupama Shenoy have been approached for 'Bigg Boss Kannada-4' reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada