»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಂಥ ಗಾಸಿಪ್ ಗಳೂ ಕೇಳಿ ಬರ್ತಿವೆ.!

Posted By:
Subscribe to Filmibeat Kannada

ಕಲರ್ ಫುಲ್ ದುನಿಯಾದಲ್ಲಿ ಇದ್ಮೇಲೆ ಗಾಸಿಪ್ಪು, ಗುಸು ಗುಸು ಎಲ್ಲ ಕಾಮನ್. ಅದ್ರಲ್ಲೂ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಂತಹ ಸ್ಟಾರ್ ನಟರ ಸುತ್ತ ಆಗಾಗ ಅಂತೆ-ಕಂತೆ ಪುರಾಣಗಳು ಹುಟ್ಟಿಕೊಳ್ಳುತ್ತಲೇ ಇರುತ್ತೆ. ಆದ್ರೆ, ಅವುಗಳ ಸತ್ಯಾಸತ್ಯತೆ ಮಾತ್ರ ಪ್ರಶ್ನಾರ್ಹ.

ಸದ್ಯ 'ದಾಸ' ದರ್ಶನ್ ಬಗ್ಗೆ ಒಂದು ಗುಸುಗುಸು ಕೇಳಿಬಂದಿದೆ. ಅದು ಗಾಂಧಿನಗರದ ಅಂಗಳದಿಂದ ಅಲ್ಲ. ಬದಲಾಗಿ ರಾಜಕೀಯ ಅಂಗಳದಿಂದ ಅನ್ನೋದು ಸ್ವಲ್ಪ ಇಂಟ್ರೆಸ್ಟಿಂಗ್.

ದರ್ಶನ್ ಬಗ್ಗೆ ಅಲ್ಲಲ್ಲಿ ಕೇಳಿಬರುತ್ತಿರುವ ಲೇಟೆಸ್ಟ್ ಗುಸು ಗುಸು ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ...

ರಾಜಕೀಯಕ್ಕೆ ಬರ್ತಾರಾ ದರ್ಶನ್.?

ರೆಬೆಲ್ ಸ್ಟಾರ್ ಅಂಬರೀಶ್, ನಟಿ ತಾರಾ, ಜಗ್ಗೇಶ್ ಸೇರಿದಂತೆ ಚಿತ್ರರಂಗದ ಅನೇಕರು ರಾಜಕೀಯಕ್ಕೆ ಧುಮುಕಿದ್ದಾರೆ. ಇತ್ತೀಚೆಗಷ್ಟೇ ನಟ ಉಪೇಂದ್ರ ಕೂಡ 'ಪ್ರಜಾಕೀಯ'ಕ್ಕೆ ಕಾಲಿಟ್ಟಿರುವುದು ನಿಮಗೆಲ್ಲ ಗೊತ್ತೇ ಇದೆ. ಹೀಗಿರುವಾಗಲೇ ನಟ ದರ್ಶನ್ ಕೂಡ ರಾಜಕೀಯಕ್ಕೆ ಬರ್ತಾರಂತೆ ಎಂಬ ಅಂತೆ-ಕಂತೆಗಳು ಅಲ್ಲಲ್ಲಿ ಕೇಳಿ ಬರ್ತಿವೆ.

ದರ್ಶನ್ ಗೆ ಕಾಂಗ್ರೆಸ್ ಗಾಳ.?

ದರ್ಶನ್ ರವರನ್ನ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಕಾಂಗ್ರೆಸ್ ಪಕ್ಷದ ನಾಯಕರು ಪ್ರಯತ್ನ ಪಡುತ್ತಿದ್ದಾರಂತೆ.

ಅಂಬಿ ಮಾಮ ಇದ್ದಾರಲ್ಲ.!

ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರ ಪೈಕಿ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಒಬ್ಬರು. ಇತ್ತ ಅಂಬರೀಶ್ ಹಾಗೂ ದರ್ಶನ್ ಅತ್ಯಾಪ್ತರು. ಹೀಗಾಗಿ ಅಂಬರೀಶ್ ಮೂಲಕ ದರ್ಶನ್ ರವರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದ್ಯಂತೆ.

ದರ್ಶನ್ ತಾಯಿ ಕಾಂಗ್ರೆಸ್ ಕಾರ್ಯದರ್ಶಿ

ದರ್ಶನ್ ತಾಯಿ ಮೀನಾ ತೂಗುದೀಪ ಸದ್ಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಆಗಿದ್ದಾರೆ. ಅಮ್ಮನ ಹಾಗೆ ಪುತ್ರ ಕೂಡ ಕಾಂಗ್ರೆಸ್ ಪಕ್ಷ ಸೇರ್ತಾರಾ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.

ದರ್ಶನ್ ಮನಸ್ಸು ಮಾಡ್ತಾರಾ.?

ಸದ್ಯ ಸ್ಯಾಂಡಲ್ ವುಡ್ ನ ಬಿಜಿಯೆಸ್ಟ್ ನಟರಲ್ಲಿ ದರ್ಶನ್ ಕೂಡ ಒಬ್ಬರು. 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿರುವ ದರ್ಶನ್, ಅದು ಮುಗಿದ ಬಳಿಕ 'ಒಡೆಯರ್' ಚಿತ್ರಕ್ಕೆ ಚಾಲನೆ ಕೊಡ್ತಾರೆ. ವರ್ಷ ಪೂರ್ತಿ ಸಿನಿಮಾದಲ್ಲಿಯೇ ಬಿಜಿಯಾಗಿರುವ ದರ್ಶನ್ ರಾಜಕಾರಣಕ್ಕಾಗಿ ಬಿಡುವು ಮಾಡಿಕೊಳ್ತಾರಾ.? ಈ ಪ್ರಶ್ನೆಗೆ ದರ್ಶನ್ ರವರೇ ಉತ್ತರಿಸಬೇಕು.

ಕಾಂಗ್ರೆಸ್ ಅಧ್ಯಕ್ಷರು ಏನಂತಾರೆ.?

ನಟ ದರ್ಶನ್ ಕಾಂಗ್ರೆಸ್ ಸೇರ್ತಾರಂತೆ ಎಂಬ ಗುಸುಗುಸು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ರವರ ಕಿವಿಗೂ ಬಿದ್ಮೇಲೆ 'ನನಗೇನೂ ಗೊತ್ತಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಟ ದರ್ಶನ್ ಕಾಂಗ್ರೆಸ್ ಸೇರ್ಪಡೆ ಆಗ್ತಾರಾ? ಈ ಬಗ್ಗೆ ಪರಮೇಶ್ವರ್ ಏನಂದ್ರು?

ದರ್ಶನ್ ಕ್ಲಾರಿಟಿ ಕೊಡಬೇಕು

ರಾಜಕೀಯಕ್ಕೆ ಸೇರುವ ಬಗ್ಗೆ ನಟ ದರ್ಶನ್ ಇಲ್ಲಿಯವರೆಗೂ ಎಲ್ಲೂ ಮಾತನಾಡಿಲ್ಲ. ಆದರೂ, ಇಂತಹ ಸುದ್ದಿ ಎಲ್ಲಿಂದ ಹುಟ್ಟಿಕೊಳ್ತೋ ಗೊತ್ತಿಲ್ಲ. ದರ್ಶನ್ ಈ ಬಗ್ಗೆ ಮಾತನಾಡಿದ್ರೆ, ಎಲ್ಲರಿಗೂ ಕ್ಲಾರಿಟಿ ಸಿಗಬಹುದು.

English summary
According to the latest Grapevine, Challenging Star Darshan to enter Politics by joining Congress Party. But Darshan has not spoken anything related to this so far.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada