»   » ಇಷ್ಟ ಆದರೆ 'ನಾಟಿಕೋಳಿ' ಓಕೆ ಎಂದ ಪ್ರಿಯಾಮಣಿ

ಇಷ್ಟ ಆದರೆ 'ನಾಟಿಕೋಳಿ' ಓಕೆ ಎಂದ ಪ್ರಿಯಾಮಣಿ

Posted By:
Subscribe to Filmibeat Kannada

ನಿರ್ದೇಶಕ ಶ್ರೀನಿವಾಸ ರಾಜು ಅವರ 'ನಾಟಿಕೋಳಿ' ಮತ್ತೆ ಸುದ್ದಿಯಲ್ಲಿದೆ. ಈ ಮೊದಲು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಈ ಚಿತ್ರಕ್ಕೆ ಫೋಟೋ ಶೂಟ್ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಣಿ ಅವರ ಅಪ್ಪಟ ಅಭಿಮಾನಿಯೊಬ್ಬರು ಮಾಡಿದ ಅವಾಂತರದಿಂದ ಇಡೀ ಗಾಂಧಿನಗರ ತುಂಬಾ 'ನಾಟಿಕೋಳಿ' ಗುಲ್ಲೆದ್ದಿರುವ ವಿಚಾರ ನಿಮಗೆ ಗೊತ್ತೇ ಇದೆ ಅಲ್ವಾ?.

ತದನಂತರ ರಾಗಿಣಿ 'ನಾಟಿಕೋಳಿ'ಯಿಂದ ಹೊರಬಿದ್ದ ಮೇಲೆ ಅವರ ಜಾಗಕ್ಕೆ ಪ್ರಿಯಾಮಣಿ ಬರ್ತಾರೆ ಅಂತ ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಪ್ರಿಯಾಮಣಿ ಹೇಳುವ ಪ್ರಕಾರ 'ನಾನು ಕಥೆ ಕೇಳಿಲ್ಲ, ಕಥೆ ಕೇಳಿದ ನಂತರ ಒಂದು ಪಕ್ಷ ಇಷ್ಟ ಆದರೆ ಮಾತ್ರ 'ನಾಟಿಕೋಳಿ' ಆಗ್ತೀನಿ ಎಂದು ಹೇಳುತ್ತಾರೆ.['ನಾಟಿ ಕೋಳಿ' ಸಾರಿಗೆ ಪ್ರಿಯಾಮಣಿ ಗರಂಮಸಾಲೆ ಇಲ್ಲ?]

Will decided acting in 'Natikoli' movie after listing the story says Priyamani

ಅಂದಹಾಗೆ ಇಲ್ಲಿಯವರೆಗೂ ನಟಿ ಪ್ರಿಯಾಮಣಿ ಅವರು 'ನಾಟಿಕೋಳಿ' ಚಿತ್ರದ ಕಥೆಯನ್ನೇ ಕೇಳಿಲ್ಲವಂತೆ. 'ನಾನು ಶ್ರೀನಿವಾಸ ರಾಜು ಅವರ ಜೊತೆಗೆ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರಕ್ಕೆ ಕೆಲಸ ಮಾಡುವಾಗ, ನಿರ್ದೇಶಕ ಶ್ರೀನಿವಾಸ ರಾಜು ಅವರು ನನಗೆ 'ನಾಟಿಕೋಳಿ' ಕಥೆ ಹೇಳುವುದಾಗಿ ತಿಳಿಸಿದ್ದರು. ಕಥೆ ಕೇಳಿ ಇಷ್ಟ ಆದರೆ ಮಾತ್ರ ನಟಿಸುತ್ತೇನೆ ಎಂದು ಹೇಳಿದ್ದೆ'.[ಅಯ್ಯಯ್ಯೋ...ಪ್ರಿಯಾಮಣಿ ಯಾಕಿಂಗ್ ಆಗ್ಬುಟ್ರು.!?]

ಆ ನಂತರ 'ನಾಟಿಕೋಳಿ' ಚಿತ್ರಕ್ಕೆ ರಾಗಿಣಿ ಬರುತ್ತಾರೆ ಅಂತ ಗೊತ್ತಾಯಿತು. ಅಷ್ಟೇ ಅಲ್ಲದೇ ದೊಡ್ಡ ವಿವಾದ ಆಗಿದೆ ಅಂತಾನೂ ಗೊತ್ತಾಯಿತು. ಆದರೆ ನನಗೆ ಅದರಲ್ಲಿ ಯಾವುದರಲ್ಲೂ ಆಸಕ್ತಿ ಇಲ್ಲ. ನಿರ್ದೇಶಕರು ಕಥೆ ಹೇಳಿ, ನನಗೆ ಆ ಕಥೆ ಇಷ್ಟ ಆದರೆ ಮಾತ್ರ ನಾನು 'ನಾಟಿಕೋಳಿ' ಚಿತ್ರದಲ್ಲಿ ನಟಿಸುತ್ತೇನೆ. ಇಲ್ಲವಾದರೆ ಇಲ್ಲ' ಎಂದು ನಟಿ ಪ್ರಿಯಾಮಣಿ ಅವರು ಸ್ಪಷ್ಟನೆ ನೀಡಿದ್ದಾರೆ.

Will decided acting in 'Natikoli' movie after listing the story says Priyamani

ನಟಿ ರಾಗಿಣಿ ಅವರು ನಿರ್ದೇಶಕರನ್ನು ಬದಲಿಸಿದರೆ, ಆ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದು ಸುದ್ದಿಯಾದರೆ, ಇದೀಗ ನಟಿ ಪ್ರಿಯಾಮಣಿ ಅವರು ತಮಗೆ ಕಥೆ ಇಷ್ಟ ಆದರೆ ಜೈ ಎಂದಿದ್ದಾರೆ. ಒಟ್ನಲ್ಲಿ 'ನಾಟಿಕೋಳಿ' ಅದ್ಯಾವಾಗ ಮುಗಿಯುತ್ತೋ?, ಇನ್ಯಾರು ಬರ್ತಾರೋ ಅಂತ ಕಾದು ನೋಡೋಣ.

English summary
According to the grapevine Actress Priyamani decided acting in Kannada Movie 'Natikoli' after listing the story. The movie is directed by Srinivasa Raju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada