»   » 'ಚಮಕ್' ಗೆಲುವಿನ ಬಳಿಕ ಮತ್ತೆ ಒಂದಾಗುತ್ತಾರಾ ಸುನಿ ಗಣೇಶ್

'ಚಮಕ್' ಗೆಲುವಿನ ಬಳಿಕ ಮತ್ತೆ ಒಂದಾಗುತ್ತಾರಾ ಸುನಿ ಗಣೇಶ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಇಬ್ಬರ ಕಾಂಬಿನೇಶನ್ ನಲ್ಲಿ ಬಂದ 'ಚಮಕ್' ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಸಿನಿಮಾ ನೋಡಿದ ಜನ ಇಷ್ಟ ಪಟ್ಟಿದ್ದಾರೆ. ಸುನಿ ಬರೆದ ಸಂಭಾಷಣೆ ಗಣೇಶ್ ಮ್ಯಾನರಿಸಂ ಎರಡು ಸೇರಿ ಸಿನಿಮಾಗೆ ಹೊಸ ತುಂಬ ಲವಲವಿಕೆಯಿಂದ ಕೂಡಿದೆ.

ವಿಮರ್ಶೆ: ಗಣೇಶ್ ಒಂಥರಾ ಕಿಕ್ಕು ಪ್ರೇಕ್ಷಕರಿಗೆ ಚಮಕ್ಕು

'ಚಮಕ್' ಸಿನಿಮಾ ಎಲ್ಲ ಕಡೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ. ವೀಕೆಂಡ್ ಮತ್ತು ಹಿಯರ್ ಎಂಡ್ ಎರಡು ಇರುವ ಕಾರಣ 'ಚಮಕ್' ಚಿತ್ರಮಂದಿರ ತುಂಬಿಸುವಲ್ಲಿ ಯಶಸ್ವಿಯಾಗಿದೆ. 'ಚಮಕ್' ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡುತ್ತಿದೆ. ಬರಿ ನಾಲ್ಕು ದಿನದಲ್ಲಿ 6 ಕೋಟಿ ಗಳಿಕೆ ಮಾಡಿದೆ.

Will Ganesh and Suni work together for there next movie?

ಈ ನಡುವೆ 'ಚಮಕ್' ಜೋಡಿಯ ಕುರಿತು ಮತ್ತೊಂದು ಸುದ್ದಿ ಕೇಳಿ ಬಂದಿದೆ. ಒಂದು ಸಿನಿಮಾ ಗೆದ್ದ ನಂತರ ಆ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುವುದು ಹೆಚ್ಚಾಗಿ ಇರುತ್ತದೆ. ಅದೇ ರೀತಿ ಈಗ ಸುನಿ ಮತ್ತೆ ಗಣೇಶ್ ಜೊತೆ ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದಾರಂತೆ. ಈಗಾಗಲೇ ಗಣೇಶ್ ಜೊತೆ ಈ ವಿಷಯವಾಗಿ ಒಮ್ಮೆ ಸುನಿ ಚರ್ಚೆ ಮಾಡಿದ್ದು, ಇನ್ನು ಅದು ಫೈನಲ್ ಆಗಿಲ್ಲ. ಸುನಿ ಅವರ ಆ ಹೊಸ ಚಿತ್ರದ ಕಥೆಗೆ ಗಣೇಶ್ ಓಕೆ ಅಂದರೆ ಸಿನಿಮಾ ಮಾಡುವುದು ಪಕ್ಕಾ ಆಗಲಿದೆ.

ಇತ್ತೀಚಿಗಷ್ಟೆ ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ 'ರಾಜಕುಮಾರ' ನಂತರ ಮತ್ತೆ ಒಟ್ಟಿಗೆ ಸಿನಿಮಾ ಮಾಡಲು ಶುರು ಮಾಡಿದ್ದರು. ಈಗ ಅದೇ ರೀತಿ ಗಣೇಶ್ ಮತ್ತು ಸುನಿ ಮತ್ತೆ ಒಟ್ಟಿಗೆ ಕೆಲಸ ಮಾಡುವ ಸೂಚನೆ ನೀಡಿದ್ದಾರೆ.

Will Ganesh and Suni work together for there next movie?

ಅಂದಹಾಗೆ, 'ಚಮಕ್' ಸಿನಿಮಾದಲ್ಲಿ ಗಣೇಶ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದರು. ಒಬ್ಬ ಗಂಡ ಹೆಂಡತಿಯ ನಡುವೆ ನಡೆಯುವ ಈ ಕಥೆ ಸಖತ್ ಚಮಕ್ ನೀಡಿದ್ದು, ನೋಡುಗರಿಗೆ ಒಳ್ಳೆಯ ಕಿಕ್ ನೀಡಿತ್ತು. ಸಿಕ್ಕಾಪಟ್ಟೆ ಕಾಮಿಡಿ ಜೊತೆಗೆ ಲವ್ ಸ್ಟೋರಿ ಸಿನಿಮಾದಲ್ಲಿ ಇತ್ತು.

English summary
After 'Chamak' kannada movie Will Goldan Star Ganesh and director Suni work together for there next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X