»   » ಅಂಬರೀಶ್ ಪುತ್ರ ಅಭಿಶೇಕ್ ಚೊಚ್ಚಲ ಚಿತ್ರಕ್ಕೆ ನಿರ್ದೇಶಕ ಯಾರು.?

ಅಂಬರೀಶ್ ಪುತ್ರ ಅಭಿಶೇಕ್ ಚೊಚ್ಚಲ ಚಿತ್ರಕ್ಕೆ ನಿರ್ದೇಶಕ ಯಾರು.?

Posted By:
Subscribe to Filmibeat Kannada

ಸದ್ಯಕ್ಕೆ ರೆಬೆಲ್ ಸ್ಟಾರ್ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಸಿನಿ ಪ್ರಿಯರ ಮನಸ್ಸಿನಲ್ಲಿ ಕಾಡುತ್ತಿರುವ ಪ್ರಶ್ನೆ ಅಂದ್ರೆ ಇದೇ.. - 'ಅಂಬರೀಶ್ ಪುತ್ರ ಅಭಿಶೇಕ್ ಚೊಚ್ಚಲ ಚಿತ್ರಕ್ಕೆ ನಿರ್ದೇಶಕ ಯಾರು.?'

ಓದು ಮುಗಿಸಿಕೊಂಡು ತಾಯ್ನಾಡಿಗೆ ವಾಪಸ್ ಬಂದ್ಮೇಲೆ, ಅಭಿಶೇಕ್ ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ. ಮಾರ್ಷಲ್ ಆರ್ಟ್ಸ್ ಕೂಡ ಕಲಿತಿರುವ ಅಭಿಶೇಕ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಸೂಚನೆ ನೀಡಿದ್ದಾರೆ.

''ಅಭಿಶೇಕ್ ಸ್ವಂತವಾಗಿ ಬೆಳೆಯಬೇಕು. ಅವನ ಪ್ರತಿಭೆ ಮತ್ತು ಕೌಶಲ್ಯದಿಂದ ಅಭಿಮಾನ ಗಳಿಸಬೇಕು. ಹೀಗಾಗಿ ನಾವು ಸಿನಿಮಾ ನಿರ್ಮಾಣ ಮಾಡಲ್ಲ. ಯಾರಿಗೆ ಇಷ್ಟವೋ ಅವರೇ ಅಭಿ ಜೊತೆಗೆ ಸಿನಿಮಾ ಮಾಡಬಹುದು'' ಎಂದು ಅಂಬರೀಶ್ ಹೇಳಿದ್ದರು.

Will Nagashekar direct Abhishek Ambareeshs first film.?

ಆರಡಿ ಕಟೌಟ್ ಹಾಕಿಸಿಕೊಳ್ಳಲು ಅಂಬರೀಶ್ ಪುತ್ರ ಅಭಿಶೇಕ್ ತಯಾರಿ.?

ಇದಾದ್ಮೇಲೆ, ಅಭಿಶೇಕ್ ಚೊಚ್ಚಲ ಚಿತ್ರಕ್ಕೆ 'ಅಮರ್' ಅಂತ ಹೆಸರಿಡಲಾಗಿದೆ. 'ಜಲೀಲ' ಟೈಟಲ್ ಫಿಕ್ಸ್ ಆಗಿದೆ. ಪವನ್ ಒಡೆಯರ್ ಡೈರೆಕ್ಟ್ ಮಾಡ್ತಾರೆ ಅಂತೆಲ್ಲ ಸುದ್ದಿ ಹಬ್ಬಿತ್ತು. ಬಳಿಕ ಪವನ್ ಒಡೆಯರ್ ಜಾಗಕ್ಕೆ ಚೇತನ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ ಎಂದು ಗಾಂಧಿನಗರದ ತುಂಬೆಲ್ಲ ಗುಲ್ಲೆದ್ದಿತ್ತು. ಆದ್ರೀಗ, ಅಭಿಶೇಕ್ ಚಿತ್ರಕ್ಕೆ ನಾಗಶೇಖರ್ ಡೈರೆಕ್ಟರ್ ಎಂಬ ಗುಸು ಗುಸು ಕೇಳಿಬರುತ್ತಿದೆ.

ಅಂಬರೀಶ್ ಮಗನ ಮೊದಲ ಸಿನಿಮಾದ ಟೈಟಲ್ ಫಿಕ್ಸ್ ಆಯ್ತು!

'ಮೈನಾ', 'ಮಾಸ್ತಿ ಗುಡಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಾಗಶೇಖರ್, 'ಅಮರ್' ಚಿತ್ರಕ್ಕೂ ಡೈರೆಕ್ಟರ್ ಕ್ಯಾಪ್ ತೊಡ್ತಾರಾ.? ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಗೊತ್ತಿಲ್ಲ. ಯಾಕಂದ್ರೆ, ಯಾವುದೂ ಇನ್ನೂ ಪಕ್ಕಾ ಆಗಿಲ್ಲ.

English summary
According to the Grapevine, Kannada Director Nagashekar to direct Abhishek Ambareesh's first film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X